• Sun. Sep 8th, 2024

PLACE YOUR AD HERE AT LOWEST PRICE

ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ರಾಜ್ಯದ 14 ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ, ಕಾವೇರಿ ನದಿ ಜಲಾಶಯಗಳು ಶೇ.66 ರಷ್ಟು ತುಂಬಿದ್ದು, ಕೃಷ್ಣಾ ನದಿಯ ಜಲಾಶಯಗಳು ಶೇ. 51ರಷ್ಟು ಭರ್ತಿಯಾಗಿವೆ.

ನೀರು ಹೆಚ್ಚು ಸಂಗ್ರಹವಿರುವ ಜಲಾಶಯಗಳ ಪೈಕಿ ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳೇ ಮುಂಚೂಣಿಯಲ್ಲಿದ್ದು, ನೀರಿನ ಮಟ್ಟ ಚೆನ್ನಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದ ಡ್ಯಾಂಗಳು ಅರ್ಧದಷ್ಟು ಭರ್ತಿಯಾಗಿವೆ. ಮಲೆನಾಡಿನ ಡ್ಯಾಂಗಳು ಶೇ. 35 ರಷ್ಟು ಮಾತ್ರ ಭರ್ತಿಯಾಗಿವೆ.

ದುಪ್ಪಟ್ಟು ನೀರು ಸಂಗ್ರಹ

2023 ಜುಲೈ 15 ಕ್ಕೆ ಹೋಲಿಸಿದರೆ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟವು ಈ ವರ್ಷ ದುಪ್ಪಟ್ಟು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 14 ಜಲಾಶಯಗಳಲ್ಲಿ ಒಟ್ಟು 220 ಟಿಎಂಸಿ ನೀರಿತ್ತು. ಈ ವರ್ಷ 421 ಟಿಎಂಸಿ ನೀರು ಸಂಗ್ರಹವಿದೆ.

ಇನ್ನೂ ಎರಡೂವರೆ ತಿಂಗಳು ಮಳೆ

ರಾಜ್ಯಕ್ಕೆ ಮುಂಗಾರು ಆಗಮಿಸಿ ಒಂದೂವರೆ ತಿಂಗಳಾಗಿದ್ದು, ಮುಂದಿನ ಎರಡೂವರೆ ತಿಂಗಳು ಮಳೆಯಾಗಲಿದ್ದು, ಜಲಾಶಯಗಳೆಲ್ಲಾ ಪೂರ್ತಿಯಾಗಿ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳು ನೀರಿನ ಮಟ್ಟ

ಭದ್ರಾ – ಶೇ.39 ಭರ್ತಿ
ತುಂಗಭದ್ರಾ – ಶೇ.31 ಭರ್ತಿ
ಘಟಪ್ರಭಾ – ಶೇ.52 ಭರ್ತಿ
ಮಲಪ್ರಭಾ – ಶೇ.34 ಭರ್ತಿ
ಆಲಮಟ್ಟಿ – ಶೇ.74 ಭರ್ತಿ
ನಾರಾಯಣಪುರ – ಶೇ. 68 ಭರ್ತಿ

ಕಾವೇರಿ ಜಲಾಶಯಗಳು

ಹಾರಂಗಿ – ಶೇ. 83 ಭರ್ತಿ
ಹೇಮಾವತಿ – ಶೇ.61 ಭರ್ತಿ
ಕೆಆರ್‌ಎಸ್‌ – ಶೇ. 55 ಭರ್ತಿ
ಕಬಿನಿ – ಶೇ.95 ಭರ್ತಿ

ಮಲೆನಾಡಿನ ಜಲಾಶಯಗಳು

ಲಿಂಗನಮಕ್ಕಿ – ಶೇ.34 ಭರ್ತಿ
ಸೂಪ – ಶೇ. 36 ಭರ್ತಿ

Leave a Reply

Your email address will not be published. Required fields are marked *

You missed

error: Content is protected !!