• Sat. Sep 7th, 2024

PLACE YOUR AD HERE AT LOWEST PRICE

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಅವರು, 2024ರ ಮೇ 20ರಂದು ಮಾಹಿತಿ ಸೋರಿಕೆಯಾಗಿದೆ ಎಂದಿದ್ದಾರೆ.

ಸೈಬರ್ ಭದ್ರತಾ ಘಟನೆಗಳನ್ನು ನಿಭಾಯಿಸುವ ನೋಡಲ್ ಏಜೆನ್ಸಿಯಾದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್), ಬಿಎಸ್‌ಎನ್‌ಎಲ್‌ನ ಫೈಲ್ ಟ್ರಾನ್ಸ್‌ಫರ್ ಪ್ರೊಟೊಕಾಲ್ (ಎಫ್‌ಟಿಪಿ) ಸರ್ವರ್‌ಗಳಲ್ಲಿ ಇರುವ ಮಾಹಿತಿಯು ಸೋರಿಕೆಯಾಗಿರುವ ಮಾಹಿತಿಗೆ ಹೋಲಿಕೆಯಾಗಿದೆ ಎಂದು ತಿಳಿಸಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಟೆಲಿಕಾಂ ನೆಟ್‌ವರ್ಕ್‌ನ ಹೋಮ್ ಲೊಕೇಶನ್ ರಿಜಿಸ್ಟರ್‌ನಲ್ಲಿ (ಹೆಚ್‌ಎಲ್‌ಆರ್) ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸಲಕರಣೆ ತಯಾರಕರು ವರದಿ ಮಾಡಿದ್ದಾರೆ. ಆದ್ದರಿಂದ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್‌ನಲ್ಲಿ ಯಾವುದೇ ಸೇವೆ ಸ್ಥಗಿತಗೊಂಡಿಲ್ಲ” ಎಂದು ಸಚಿವ ಪೆಮ್ಮಸಾನಿ ಹೇಳಿದ್ದಾರೆ.

ಟೆಲಿಕಾಂ ನೆಟ್‌ವರ್ಕ್‌ಗಳನ್ನು ಆಡಿಟ್ ಮಾಡಲು ಮತ್ತು ಭವಿಷ್ಯದ ಮಾಹಿತಿ ಸೋರಿಕೆಯನ್ನು ತಡೆಯಲು ಪರಿಹಾರ ಕ್ರಮಗಳನ್ನು ಸೂಚಿಸಲು ಕೇಂದ್ರ ಸರ್ಕಾರವು ಅಂತರ-ಸಚಿವಾಲಯ ಸಮಿತಿಯನ್ನು (ಐಎಂಸಿ) ಸ್ಥಾಪಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಹ್ಯಾಕ್ ಮಾಡಿರುವ ಡೇಟಾವನ್ನು ಮಾರಾಟ ಮಾಡಲು ಹೆಸರಾದ ವೆಬ್‌ಸೈಟ್ Breachforumsನಲ್ಲಿ ‘kiberphant0m’ಎಂಬ ಹೆಸರಿನ ಬಳಕೆದಾರ ಬಿಎಸ್‌ಎನ್‌ಎಲ್‌ನಿಂದ ಸುಮಾರು 278 ಗಿಗಾಬೈಟ್‌ಗಳಷ್ಟು ಡೇಟಾವನ್ನು ಪಡೆದುಕೊಂಡಿರುವುದಾಗಿ ಹೇಳಿದ ಬಳಿಕ ಮಾಹಿತಿ ಸೋರಿಕೆಯಾಗಿರುವುದು ಗೊತ್ತಾಗಿದೆ.

ಸೋರಿಕೆಯಾದ ಮಾಹಿತಿಗಳಲ್ಲಿ ಐಎಂಎಸ್‌ಐ ಸಂಖ್ಯೆ (ಅಂತಾರಾಷ್ಟ್ರೀಯ ಮೊಬೈಲ್ ಚಂದಾದಾರರ ಗುರುತು), ಸಿಮ್ ವಿವರಗಳು, ಮೊಬೈಲ್ ನೆಟ್‌ವರ್ಕ್‌ನ ಎಲ್ಲಾ ಸಕ್ರಿಯ ಬಳಕೆದಾರರ ಡೇಟಾಬೇಸ್ ಹೆಚ್‌ಎಲ್‌ಆರ್ (ಹೋಮ್ ಲೊಕೇಶನ್ ರಿಜಿಸ್ಟರ್) , ಡಿಪಿ ಕಾರ್ಡ್ ಡೇಟಾ ಮತ್ತು ಬಿಎಸ್‌ಎನ್‌ಎಲ್‌ನ ಭದ್ರತಾ ವ್ಯವಸ್ಥೆಗಳನ್ನು ಬೆಂಬಲಿಸುವ ಡಿಪಿ ಭದ್ರತಾ ಕೀ ಡೇಟಾ ಒಳಗೊಂಡಿದೆ. ಬಳಕೆದಾರ ಈ ಡೇಟಾವನ್ನು 5,000 ಡಾಲರ್‌ಗೆ ಮಾರಾಟ ಮಾಡಲು ಉದ್ದೇಶಿಸಿದ್ದ ಎಂದು ವರದಿಗಳು ತಿಳಿಸಿವೆ.

ಭವಿಷ್ಯದ ಸೈಬರ್ ದಾಳಿಗಳನ್ನು ತಡೆಗಟ್ಟಲು, ಬಿಎಸ್‌ಎನ್‌ಎಲ್‌ ಎಲ್ಲಾ ರೀತಿಯ ಎಫ್‌ಟಿಪಿ ಸರ್ವರ್‌ಗಳ ಲಾಗಿನ್ ಪಾಸ್‌ವರ್ಡ್‌ಗಳನ್ನು ಬದಲಾಯಿಸಿದೆ ಮತ್ತು ಸುರಕ್ಷಿತ ಕಂಪ್ಯೂಟರ್ ನೆಟ್‌ವರ್ಕ್ ಭೌತಿಕವಾಗಿ ಪ್ರತ್ಯೇಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕಂಪ್ಯೂಟರ್‌ಗಳಲ್ಲಿ ಬಳಸುವ ಭದ್ರತಾ ಕ್ರಮವಾಗಿದ ಎಂಡ್‌ಪಾಯಿಂಟ್‌ಗಳು (ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಾಧನಗಳು) ಏರ್ ಗ್ಯಾಪ್ ನಿರ್ವಹಿಸುವಂತೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

You missed

error: Content is protected !!