• Mon. Sep 16th, 2024

ರೆಡ್ಡಿ ಜನಾಂಗದ ಅಭಿವೃದ್ಧಿಗೆ ಸರ್ಕಾರದ ನಿಗಮ ಮಂಡಳಿ ಸ್ಥಾಪಿಸಲು ಪ್ರಯತ್ನ:ಕೆ.ಚಂದ್ರಾರೆಡ್ಡಿ.

PLACE YOUR AD HERE AT LOWEST PRICE

ರಾಜ್ಯಾದಾದ್ಯಂತ ಇರುವ ರೆಡ್ಡಿ ಜನಾಂಗದ ಅಭಿವೃದ್ಧಿಗಾಗಿ ರೆಡ್ಡಿ ಜನಾಂಗದ ನಿಗಮ ಮಂಡಳಿ ಸ್ಥಾಪಿಸಲು ಸರ್ಕಾರದ ಜೊತೆ ಹೋರಾಡಿ ನಿಗಮ ಮಂಡಳಿ ಸ್ಥಾಪಿಸುತ್ತೇವೆ ಎಂದು ರೆಡ್ಡಿ ಜನ ಸಂಘದ ರಾಜ್ಯ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಚಂದ್ರಾರೆಡ್ಡಿ ಭರವಸೆ ನೀಡಿದರು.

ಅವರು ಇಂದು ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರದ ಕೆ.ಸಿ.ಆರ್ ಕಳ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಮಟ್ಟದ ರೆಡ್ಡಿ ಜನ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರೆಡ್ಡಿ ಜನಾಂಗದ ಅಭಿವೃದ್ಧಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಿದ್ದು ಮೊದಲಿಗೆ ಆದಷ್ಟು ಬೇಗನೆ ಸರ್ಕಾರದ ನಿಗಮ ಮಂಡಳಿ ಸ್ಥಾಪನೆಗೆ ಶ್ರಮಿಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ರೆಡ್ಡಿ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದು ಬಹಳಷ್ಟು ಜನ ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದಾರೆ. ಇವರಲ್ಲಿ ಅನೇಕರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಈ ಜನಾಂಗದ ಜನರ ಅಭಿವೃದ್ಧಿಗಾಗಿ ಸಂಘ ಸದಾ ಶ್ರಮಿಸಿ ಜನಾಂಗದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ರೆಡ್ಡಿ ಜನ ಸಂಘದ ಸದಸ್ಯತ್ವ ಶುಲ್ಕ ಕಡಿಮೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು ಜನಾಂಗದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ವಾಸವಿರುವ ರೆಡ್ಡಿ ಜನಾಂಗದ ಎಲ್ಲರನ್ನೂ ರೆಡ್ಡಿ ಜನ ಸಂಘದಲ್ಲಿ ಸೇರಿಸುವ ಪ್ರಯತ್ನವನ್ನು  ನೂತನ ಆಡಳಿತ ಮಂಡಳಿ ಮಾಡುತ್ತಿದ್ದೆ ಎಂದು ತಿಳಿಸಿದರು.

ಜನಾಂಗದ ಮುಖಂಡರ ಮತ್ತು ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರೆಡ್ಡಿ ಜನ ಸಂಘವನ್ನು ಬಲಿಷ್ಠಗೊಳಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಜಿಲ್ಲೆಯ ಯಾವುದೇ ಭಾಗದಿಂದ ಸಮುದಾಯದವರು ಕರೆ ಮಾಡಿ ಸಮಸ್ಯೆ ತಿಳಿಸಿದರೆ ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಬಂಗಾರಪೇಟೆ ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ತಿಪ್ಪಾರೆಡ್ಡಿ ಸಬೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ರವೀಂದ್ರರೆಡ್ಡಿ ರಾಜ್ಯ ಸಂಘಟನಾ ಸಮಿತಿ ಅಧ್ಯಕ್ಷರು ಹಾಗೂ ಆಡಳಿತಮಂಡಳಿ ನಿರ್ದೇಶಕರಾದ ಪ್ರಭಾಕರ ರೆಡ್ಡಿ,  ಸುರೇಶರೆಡ್ಡಿ, ಮಾಲೂರು ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ  ರಾಮಸ್ವಾಮಿರೆಡ್ಡಿ, ಬಂಗಾರಪೃಟೆ ಗೌರವಾದ್ಯಕ್ಷರಾದ ಜಿ.ರಾಜಾರೆಡ್ಡಿ, ಆಡಳಿತ ಮಂಡಳಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನರೆಡ್ಡಿ, ಗೋಲ್ಡ್ ರೆಡ್ಡಿ, ಜೀವನ್ ರೆಡ್ಡಿ, ತಿಮ್ಮಾರೆಡ್ಡಿ, ರವೀರಂದ್ರರೆಡ್ಡಿ, ವಸಂತರೆಡ್ಡಿ, ಶಿವಾರೆಡ್ಡಿ, ಶಶಿಧರರೆಡ್ಡಿ, ರಾದಮ್ಮ, ವಿಜಯಲಕ್ಷ್ಮಮ್ಮ, ಸೋಮಶೇಖರರೆಡ್ಡಿ, ಸುಧಾಕರರೆಡ್ಡಿ, ಗೋವಿಂದರೆಡ್ಡಿ, ನರಸಿಂಹರೆಡ್ಡಿ, ಶ್ರೀರಾಮರೆಡ್ಡಿ, ರಾಮಚಂದ್ರರೆಡ್ಡಿ, ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!