• Mon. Sep 16th, 2024

PLACE YOUR AD HERE AT LOWEST PRICE

ಬೆಂಗಳೂರು, ಆಗಸ್ಟ್ 15: ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರಾಗಿ ಮಾಡಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಯೋಜಿಸಿದ್ದಾರೆ. ಅವರದ್ದೆ ಸಂಪುಟದ ಸಚಿವರೊಬ್ಬರು ಈ ರಸ್ತೆಯಲ್ಲಿನ ಗುಂಡಿಯನ್ನು ಯಾರಾದಗೂ ಮುಚ್ಚಿ, ಜನರ ಸಮಸ್ಯೆ ಬಗೆಹರಿಸುವಂತೆ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಸದಸ್ಯರೆ ನಗರದ ಸಮಸ್ಯೆಗಳನ್ನು ಎತ್ತಿತೋರಿಸುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ. ಮತ್ತೊಂದೆಡೆ ಸಮಸ್ಯೆಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪರಿಹಾರ ಕೇಳುತ್ತಿರುವುದು ತೀವ್ರ ಚರ್ಚೆಗೆ ಹುಟ್ಟು ಹಾಕಿದೆ.

ಬೆಂಗಳೂರು ನಗರದ ರಸ್ತೆಗಳ ಗುಂಡಿಗಳ ಸಮಸ್ಯೆ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಳಾದ ರಸ್ತೆಯ ವಿಡಿಯೋ ಹಂಚಿಕೊಂಡು ಮನವಿ ಮಾಡಿದ್ದಾರೆ. ಬಿಬಿಎಂಪಿ ಹಾಗೂ ನಮ್ಮ ಮೆಟ್ರೋಗೆ ಟ್ಯಾಗ್ ಮಾಡಿದ್ದಾರೆ.
ನಗರದ ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಇದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯಕ್ತರು ಇಲ್ಲವೇ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕರು ಗಮನಿಸಬೇಕು. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕೋರಿಕೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಯಾರಾದರೂ ಆಗಲೇ, ದಯವಿಟ್ಟು ಈ ರಸ್ತೆಯನ್ನು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾದ ಡಿಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು, ಸಮಸ್ಯೆಗಳ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಅದರ ಸಂಪುಟದ ಮತ್ತೊಬ್ಬ ಸಚಿವರು ನಗರದ ಸಮಸ್ಯೆಗಳನ್ನು ವಿಡಿಯೋ, ಫೋಟೋ ಸಾಕ್ಷಿ ಸಮೇತ ಹೇಳುತ್ತಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದ್ದಲ್ಲದೇ, ಜಾಲತಾಣ ಬಳಕೆದಾರರು ಲೇವಡಿ ಸಹ ಮಾಡಿದ್ದಾರೆ.
ಸಚಿವರೇ ಅಸಹಾಯಕ ಸ್ಥಿತಿಯಲ್ಲಿದ್ದಾರೆಯೇ? ಒಬ್ಬ ಕಂದಾಯ ಮಂತ್ರಿಗಳೇ ಅಸಹಾಯಕರಾದರೇ, ಒಂದು ಕರೆ ಮಾಡಿ ನೇರವಾಗಿ ಬಿಬಿಎಂಪಿ ಪೊಲೀಸ್ ಆಯುಕ್ತರೇ ತಿಳಿಸಬಹುದಿತ್ತು.

ಅದನ್ನು ಮಾಡದೇ ಹೀಗೆ ಸಾರ್ವಜನಿಕ ಸೇವೆಯಲ್ಲಿರುವವರು ಸಾರ್ವಜನಿಕರಂತೆ ಸರ್ಕಾರವನ್ನು ಇಲ್ಲವೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಬೇಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!