• Thu. Sep 19th, 2024

ಧರ್ಮ ಕಾಯುವ ಧರ್ಮಾತ್ಮ ಶ್ರೀಕೃಷ್ಣ ಪರಮಾತ್ಮ:ಶಾಸಕ ಎಸ್.ಎನ್.ನಾರಾಯಣಸ್ವಾಮಿ

PLACE YOUR AD HERE AT LOWEST PRICE

ಬಂಗಾರಪೇಟೆ:ಶ್ರೀಕೃಷ್ಣ ಇಲ್ಲದೆ ಇದ್ದಿದ್ರೆ ನಾವು ಯಾರು ಮಹಾಭಾರತದ ಕಥೆಯನ್ನ ಕೇಳಕ್ಕೆ ಆಗುತ್ತಿರಲಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ ಕೊಟ್ಟು ಅವರು ಮಾತನಾಡಿ,ಭಾರತದ ತಾಯಿಯರಿಗೆ ಮಾತ್ರ ಅಲ್ಲ ವಿಶ್ವಾದ್ಯಂತ ತಾಯಿಯರಿಗೆ ಕೃಷ್ಣನಂತ ಮಗು ಹುಟ್ಟಬೇಕು ಎಂದು ಆಸೆ ಇರುತ್ತದೆ.

ಅವನ ಲೀಲೆಗಳಲ್ಲಿ ತುಂಟತನ ತಾಯಿಂದಿರಿಗೆ ಬಲು ಇಷ್ಟ.ಶ್ರೀಕೃಷ್ಣ ಪರಮಾತ್ಮ ಕೇವಲ ಯಾದವರಿಗೆ ಮಾತ್ರ ಸೀಮಿತವಾದವನಲ್ಲ,ಪ್ರತಿ ಸಮುದಾಯದಲ್ಲಿನ ಭಕ್ತರು ಭಕ್ತಿಯಿಂದ ಪೂಜಿಸಿದರೆ ತಾನು ಒಳಿಯುವನು ಎಂಬುದಕ್ಕೆ ಕನಕದಾಸ ಸಾಕ್ಷಿ ಎಂದರು.

ಉಡುಪಿಯಲ್ಲಿ ಭಕ್ತ ಕನಕದಾಸರ ಶ್ರದ್ಧಾ,ಭಕ್ತಿಗೆ ಒಲಿದು ದರ್ಶನ ನೀಡಿದ ಸ್ಧಳಕ್ಕೆ ಕನಕನ ಕಿಂಡಿ ಎಂದು ಕರೆಯುತ್ತಾರೆ.ಇವತ್ತಿಗೂ ಸಹ ನೀವುಗಳು ಉಡುಪಿಗೆ ಹೋದರೆ ಅಲ್ಲಿ ಕುರುಬ ಸಮುದಾಯದ ಕನಕದಾಸರಿಗೆ ಶ್ರೀಕೃಷ್ಣ ಪರಮಾತ್ಮನು ದರ್ಶನ ಕೊಟ್ಟ ಕಿಂಡಿಯನ್ನ ಕಾಣಬಹುದು.

ತಾಲ್ಲೂಕಿನಲ್ಲಿ ಶ್ರೀಕೃಷ್ಣಜನ್ಮಷ್ಟಮಿ ಮಾಡುವ ಮೂಲಕ ನಾವೆಲ್ಲಾ ಜೊತೆಯಾಗಿ ಸೇರುವ ಮೂಲಕ ಸುಖ,ಸಂತೋಷಗಳನ್ನ ಹಂಚಿಕೊಳ್ಳುತ್ತೇವೆ.ಗೊಲ್ಲ ಜನಾಂಗ ಹಸುಗಳನ್ನ ಸಾಕುವ ಮೂಲಕ,ಗೋ ಪೂಜೆಯನ್ನ ಮಾಡಿ ಆ ಗೋ ಮಾತೆ ಕೊಡುವಂತ ಹಾಲಿನಿಂದ ಮೂಸರು,ತುಪ್ಪ,ಮಜ್ಜಿಗೆ,ಬೆಣ್ಣೆಯನ್ನ ಸರ್ವರೂ ಸ್ವೀಕಾರ ಮಾಡುತ್ತೇವೆ.ಹಾಗೂ ದೇವರಿಗೂ ಅಭಿಷೇಕಕ್ಕೆ ಬಳಸಲಾಗುತ್ತದೆ ಎಂದರು.

ಕಂಸನ ಕಪಿಮುಷ್ಠಿಯಿಂದ ಪಾರಾಗುವ ಕೃಷ್ಣ,ಸಾಕುತಾಯಿ ಯಶೋಧೆಗೆ ಅಕ್ಕಪಕ್ಕದ ಮನೆಯವರಿಂದ ದಿನನಿತ್ಯ ದೂರುಗಳು ಬರುತ್ತಿರುತ್ತದೆ.ನಿಮ್ಮ ಮಗ ಬೆಣ್ಣೆ ಕದ್ದ,ಮೂಸರು ಕದ್ದ ಹೀಗೆ ಎಂದು ಪತ್ತೆ ಹಚ್ಚಲು ಯಶೋಧೆ ಮಗ ಕೃಷ್ಣನನ್ನ ಕರೆದು ಬೆಣ್ಣೆ ಕದ್ದಿದ್ದು ನಿಜವೇ ಎಂದಾಗ ಇಲ್ಲ ಎನ್ನುತ್ತಾನೆ. ಕಳ್ಳ ಕೃಷ್ಣ ಹಾಗಾದರೆ ಬಾಯಿ ತೆರೆ ಎಂದಾಗ ಶ್ರೀಕೃಷ್ಣ ತನ್ನ ಪುಟ್ಟ ಬಾಯಿ ತೆರೆದಾಗ ಆ ತಾಯಿಗೆ ಕಣ್ಣುಗಳಿಗೆ ವಿಶ್ವವೇ ದರ್ಶನವಾಗುತ್ತದೆ.

ಆಗ ಆ ತಾಯಿ ಯಶೋಧೆಗೆ ಇವನು ಸಾಮಾನ್ಯನಲ್ಲ ಹಿಂದೂ ಕುಲವನ್ನ ಕಾಯುವಂತ ಧರ್ಮಾತ್ಮ ಎಂಬುದು ಗೋಚರವಾಗುತ್ತದೆ.ತಾಲ್ಲೂಕಿನಲ್ಲಿ ಗೊಲ್ಲ ಸಮುದಾಯವನ್ನ ಗಟ್ಟಿಗೊಳ್ಳಿಸಬೇಕೆಂದು ಕಾರಹಳ್ಳಿಯ ಮುನಿಸ್ವಾಮಿ ಮತ್ತು ಮೇಸ್ತ್ರಿ ಶ್ರೀನಿವಾಸ್ ಅವರು ಬಹಳಷ್ಟು ಶ್ರಮಿಸುತ್ತಿದ್ದಾರೆ.

ನೀವುಗಳು ಅವರಿಗೆ ಬೆಂಬಲವಾಗಿ ಕೈ ಜೋಡಿಸಿದಾಗ ಮಾತ್ರ ನಿಮ್ಮ ಸಮುದಾಯ ಗಟ್ಟಿಯಾಗಿ ನಿಲ್ಲುತ್ತದೆ.ನಾನು ಸಹ ನಿಮ್ಮ ಪರವಾಗಿ ಇದ್ದು ನಿಮ್ಮ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರದಿಂದ ಹತ್ತು ಗುಂಟೆ ಜಮೀನನ್ನ ಮಂಜೂರು ಮಾಡಿಸಿಕೊಟ್ಟಿದ್ದೀನಿ ಎಂದರು.

ಶ್ರೀ ಕೃಷ್ಣನ ಭಾವಚಿತ್ರ ಹೊತ್ತ ಸುಮಾರು 50ಕ್ಕೂ ಹೆಚ್ಚು ಪಲ್ಲಕಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಡೊಳ್ಳು ಕುಣ ತ ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.

ಕಾರ್ಯಕ್ರಮದಲ್ಲಿ:ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷ ಚಂದ್ರವೇಣಿ ಮಂಜುನಾಥ್, ಮುಖ್ಯಾಧಿಕಾರಿ ಸತ್ಯನಾರಾಯಣ, ಸದಸ್ಯರುಗಳಾದ ಸಾಧಿಕ್, ಬಾಬುಲಾಲ್, ರಫೀಕ್, ಶಿವಕಮಾರ್, ಬಿಇಓ ಸುಕನ್ಯ, ತೋಟಗಾರಿಕೆ ಇಲಾಖೆಯ ಶಿವರೆಡ್ಡಿ, ತಾಹಶೀಲ್ದಾರ್ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯಅಂಜಲಿದೇವಿ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!