• Mon. Sep 16th, 2024

PLACE YOUR AD HERE AT LOWEST PRICE

ಪ್ರೇಕ್ಷಕರ ಮನ ಗೆದ್ದ *ದ ರೂಲರ್ಸ್* ಕನ್ನಡ ಚಲನಚಿತ್ರ
ಕೋಲಾರ ನೆಲ ಮೂಲದ ನೈಜ ಘಟನೆಯನ್ನು ಕಥೆಯನ್ನು ಆಧರಿಸಿ *ದ ರೂಲರ್ಸ್* ಚಿತ್ರವಾಗಿಸಿದ ಯುವ ನಾಯಕ ಕೆ.ಎಂ.ಸಂದೇಶ್ ರವರ ಚಿತ್ರ ಸಂಭಾಷಣೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಿರ್ಮಾಪಕ ಅಶ್ವಥ್ ಬಳಗೆರೆ ಮತ್ತು ಸಂದೇಶ್ ನೇತೃತ್ವದ ಚಿತ್ರ ತಂಡ ಬಹುತೇಕ ಹೊಸ ಪ್ರತಿಭೆಗಳನ್ನೇ ಗುರುತಿಸಿದೆ. ಈ ಚಿತ್ರ ವಿದೇಶದಲ್ಲಿ ಚಿತ್ರೀಕರಿಸದೆ, ಕಥೆಯ ಗಟ್ಟಿತನದಿಂದಲೇ  ಅಂತ್ಯದವರೆವಿಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ರೂಪಿಸುವಲ್ಲಿ ಇಡೀ ಚಿತ್ರತಂಡ ಗೆಲುವಿನ ದಡ ಸೇರುವ ಪ್ರಯತ್ನ ನಡೆಸಿದೆ.
ಸಂದೇಶ್ ತನ್ನ ಹೋರಾಟದ ಬದುಕಿನಲ್ಲಿ ಸಂದಿಸಿದ ಹಲವಾರು ಘಟನೆಗಳಲ್ಲಿ ಒಂದು  ನೈಜ ಘಟನೆಯನ್ನು ಕುತೂಹಲ ಭರಿತ ತಿರುವುಗಳ ಚಿತ್ರಕಥೆಯನ್ನಾಗಿಸುವಲ್ಲಿ  ಯಶಸ್ಸು ಸಾಧಿಸಿದ್ದಾರೆ. ಇವರದೇ ಲೋಕಲ್ ಆಡು ಭಾಷೆಯ ಸಂಭಾಷಣೆಗಳು ಬಹಳ ಆಕರ್ಷಕವಾಗಿ ಜನರ ಹೃದಯ ತಟ್ಟಿದೆ. ಸೆಂಟಿಮೆಂಟ್ ಡೈಲಾಗ್ ಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವ ಕೆಲಸ ಮಾಡಿರುವುದು ವಿಶೇಷ ಎನಿಸುತ್ತದೆ.
ಆರಂಭದಿಂದಲೂ ಬೋರ್ ಆಗದಂತೆ ಅಚ್ಚು ಕಟ್ಟಾಗಿ ಚಿತ್ರೀಕರಿಸುವಲ್ಲಿ ನಿರ್ದೇಶಕ ಉದಯ್ ಭಾಸ್ಕರ್ ಒಬ್ಬ ಪ್ರತಿಭಾವಂತ ನಿರ್ದೇಶಕರಾಗಿ ಗೆದ್ದಿದ್ದಾರೆ.ಚಿತ್ರದ ಹಾಡುಗಳು ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಮೂಡಿ ಬರಲು ಸಂಗೀತ ನಿರ್ದೇಶಕ ಕೆಜಿಎಫ್ ಮೂಲದ ಕರುಣಾ ಅದ್ಬುತ ವಾಗಿ ಉಣಬಡಿಸಿ ಶ್ರಮಿಸಿದ್ದಾರೆ. ಹಿನ್ನೆಲೆ ಸಂಗೀತವು ಚಿತ್ರದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ.
ಹೊಸಬರ *ದ ರೂಲರ್ಸ್* ಕನ್ನಡ ಚಲನಚಿತ್ರರಂಗದ ಸಿದ್ಧ ಸೂತ್ರಗಳನ್ನು ಧಿಕ್ಕರಿಸಿದ ಕಾರಣಕ್ಕೆ ಹೊಸತಾಗಿಯೇ ಪ್ರೇಕ್ಷಕರನ್ನು  ಆವರಿಸಿಕೊಂಡು ಹಿಡಿದಿಟ್ಟುಕೊಳ್ಳುತ್ತದೆ. ಕೇವಲ ನೋಡುವ ಚಿತ್ರವಾಗದೆ ಕಾಡುವ ಚಿತ್ರವಾಗಿ ಪ್ರೇಕ್ಷಕನ ಹೃದಯ ತುಂಬಿಕೊಳ್ಳುತ್ತದೆ.
ಪಾತ್ರವರ್ಗದಲ್ಲಿ  ತಾಯಿ ಪಾತ್ರದ ದುರ್ಗ, ಊರ ನಾಯಕನ ಪಾತ್ರದ ಪುನೀತ್ ನೆನಪಿನಲ್ಲಿ ಉಳಿಯುತ್ತಾರೆ, ನಾಯಕ ವಿಶಾಲ್, ನಾಯಕಿ ರಿತುಗೌಡ ಪಾತ್ರಕ್ಕೆ ಜೀವ ತುಂಬಿದ್ದಾರೆ.  ತಮ್ಮದೇ ಪಾತ್ರದಲ್ಲಿ ಹೋರಾಟಗಾರ ಕೆ.ಎಂ.ಸಂದೇಶ್ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಕುಟುಂಬ ಸಮೇತ ಯಾವುದೇ ಮುಜುಗರ ಇಲ್ಲದಂತೆ, ಪ್ರತಿ ಹೆಣ್ಣು ಮಕ್ಕಳು ನೋಡಲೇ ಬೇಕಾದ ಚಿತ್ರ 
ಇದಾಗಿದೆ.
ಇನ್ನೂ ಈ ಚಿತ್ರ ಕೋಲಾರದ ಭವಾನಿ ಟಾಕೀಸ್ ಮೊದಲ ಶೋ ಹೌಸ್ ಫುಲ್ ಆಗಿತ್ತು. ಮೊದಲ ಶೋ ನೋಡಿ ಹೊರ ಬಂದ ಪ್ರೇಕ್ಷಕರ ಪ್ರತಿಕ್ರಿಯೆ ಕೇಳಿದಾಗ ಎಲ್ಲರ ಬಾಯಲ್ಲಿ ಬಂದ ಮಾತು ಸಿನಿಮಾ ಸೂಪರ್ ನಮ್ಮ ನೆಲದ ಪ್ರತಿಯೊಂದು ಹೆಣ್ಣು ಮಗಳು ನೋಡಲೇಬೇಕಾದ ಚಿತ್ರ, ತಾಯಿ ಮಗಳ ಸೆಂಟಿಮೆಂಟ್ ಚೆನ್ನಾಗಿದೆ, ಅಜ್ಞಾನ ಮತ್ತು ಅಕ್ಷರ ಜ್ಞಾನದ ಶಕ್ತಿ ತೋರುವ ಈ ಚಿತ್ರ ಕುಟುಂಬ ಸಮೇತ ನೋಡಬಹುದಾದ ಚಿತ್ರ ಹೀಗೆ ಎಲ್ಲಾ ಗುಣಗಳನ್ನು ಹೊಂದಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಚಿತ್ರ ಎಂದು ಬಣ್ಣಿಸಿದರು. 
ಪ್ರೇಕ್ಷಕರ ಜೊತೆಗೆ ಚಿತ್ರ ವೀಕ್ಷಣೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ನಾಯಕಿ ರಿತುಗೌಡ, ತಾಯಿ ಪಾತ್ರದಾರಿ ದುರ್ಗಾ ಹಾಗೂ ಸಂದೇಶ್ ರವರ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಹರ್ಷ ವ್ಯಕ್ತಪಡಿಸಿದರು.
ಒಟ್ಟಾರೆ ದ ರೂಲರ್ಸ್ ಚಲನಚಿತ್ರ ಅಮೋಘ ಯಶಸ್ಸು ಸಾಧಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಜಿಲ್ಲೆಯ ನಾಲ್ಕು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ತುಂಬಿ ತುಳುಕುತ್ತಿರುವುದು ನೋಡಿದರೆ ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

Leave a Reply

Your email address will not be published. Required fields are marked *

You missed

error: Content is protected !!