• Mon. Sep 16th, 2024

PLACE YOUR AD HERE AT LOWEST PRICE

ಕೆಜಿಎಫ್:ರಾಬರ್ಟ್ಸನ್‌ಪೇಟೆಯ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಸ್.ಗಾಯತ್ರಿ (೫೧ ವರ್ಷ) ಅವರು ಅನಾರೋಗ್ಯದಿಂದಾಗಿ ಬುಧವಾರದಂದು ಬೆಳಿಗ್ಗೆ ನಿಧನರಾದರು.

ವನಿತಾಸಹಾಯವಾಣಿಯ ಪಿಎಸ್‌ಐ ಆಗಿದ್ದ ಎಸ್.ಗಾಯತ್ರಿ ಅವರು ತಮಗಿದ್ದ ಕ್ಯಾನ್ಸರ್ ಖಾಯಿಲೆಯಿಂದಾಗಿ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದು, ಇಂದು ಬೆಳಿಗ್ಗೆ ೭.೩೦ ಗಂಟೆಗೆ ರಾಬರ್ಟ್ಸನ್‌ಪೇಟೆಯ ೩ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.

ಎಸ್.ಗಾಯತ್ರಿ ಅವರು ಪೊಲೀಸ್ ಕಾನ್ಸ್ಟೇಬಲ್ ಆಗಿ 1994 ರಲ್ಲಿ ಸೇವೆಗೆ ಸೇರಿದ್ದು, ಹಂತ ಹಂತವಾಗಿ ಸೇವಾ ಜೇಷ್ಠತೆಯ ಆಧಾರದ ಮೇರೆಗೆ ಮುಂಬಡ್ತಿ ಹೊಂದಿ, ಕಳೆದ ನಾಲ್ಕು ವರ್ಷದಿಂದ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ರಕ್ಷಣೆ, ಬಾಲಕಿಯರ, ಯುವತಿಯರ ಮೇಲೆ ನಡೆಯಬಹುದಾದ ದಬ್ಬಾಳಿಕೆ ಇತ್ಯಾದಿ ವಿಚಾರಗಳಲ್ಲಿ ಅತ್ಯುತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಗಾಯತ್ರಿ ಅವರು ಅವಿವಾಹಿತರಾಗಿದ್ದು, ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದ್ದಾರೆ.

ಗಾಯತ್ರಿ ಅವರ ಸೇವಾವದಿಯಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪೊಲೀಸ್ ಇಲಾಖೆಯಿಂದ ಹಲವು ಸಂದರ್ಭಗಳಲ್ಲಿ ಶ್ಲಾಘಿಸಿ, ಗೌರವಿಸಲಾಗಿದೆ. ಅಲ್ಲದೇ 2020-21ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಯನ್ನು ನೀಡಿ, ಗೌರವಿಸಿರುವುದು ಹೆಮ್ಮೆಯ ವಿಚಾರವಾಗಿದೆ.

ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದ ಗಾಯತ್ರಿ ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂಧಿಗಳು, ಪತ್ರಕರ್ತರು, ವಕೀಲರು, ಹಲವಾರು ಸಂಘ ಸಂಸ್ಥೆಗಳವರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ, ಗೌರವ ಸಲ್ಲಿಸಿದರು.

ಮೃತರು ಸೋದರ ಮಾಲೂರು ತಹಶೀಲ್ದಾರ್ ಹರಿನಾಥ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್‌ಪಿಐ ವಿ.ಸೋಮಶೇಖರ ನೇತೃತ್ವದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಮರ‍್ಯಾದೆಯನ್ನು ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಕೆ.ಪಾಂಡುರಂಗ, ಸಿಪಿಐ ಪಿ.ಎಂ.ನವೀನ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿಗಳು ಮೃತರಿಗೆ ಮಾಲಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿದರು. ಪಾರಾಂಡಹಳ್ಳಿ ರಸ್ತೆಯಲ್ಲಿನ ಜೈನ ರುದ್ರಭೂಮಿಯಲ್ಲಿ ಪಿಎಸ್‌ಐ ಗಾಯತ್ರಿ ಅವರ ಅಂತ್ಯಕ್ರಿಯೆಯು ನಡೆಯಿತು.

Related Post

ರೇಣುಕಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ
ತಾಲಿಬಾನ್ ಏಜೆಂಟ್ ಎಂದಿದ್ದಕ್ಕೆ, ಶಾಸಕ ಕೊತ್ತೂರು ಮಂಜುನಾಥ್ ಗೆ “ಒಂದು ರೂಪಾಯಿ” ಮಾನನಷ್ಟ ಮೊಕದ್ದಮ್ಮೆ ನೊಟೀಸ್ ಜಾರಿಯಾಗಿದೆ : ನಗರಸಭಾ ಸದಸ್ಯಬಿ.ಎಂ.ಮುಬಾರಕ್
ಶಾಸಕ ಕೊತ್ತೂರು ಮಂಜುನಾಥ್ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ದ ತಡೆಯಾಜ್ಞೆ ವಾಪಸ್ ಪಡೆದು ತಾಕತ್ತು ಪ್ರದರ್ಶಿಸಲಿ – ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ ಸವಾಲ್

Leave a Reply

Your email address will not be published. Required fields are marked *

You missed

error: Content is protected !!