• Thu. Sep 19th, 2024

UPSC ಅಧ್ಯಕ್ಷೆಯಾಗಿ ಮಾಜಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ನೇಮಕ

PLACE YOUR AD HERE AT LOWEST PRICE

ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ಅವರು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಅಧ್ಯಕ್ಷೆಯಾಗಿ ನೇಮಕಗೊಂಡಿದ್ದು ಆಗಸ್ಟ್ 1ರಿಂದ ಯುಪಿಎಸ್‌ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮನೋಜ್ ಸೋನಿ ವೈಯಕ್ತಿಕ ಕಾರಣ ನೀಡಿ ಯುಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಈ ಸ್ಥಾನವನ್ನು 1983ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪ್ರೀತಿ ಸೂದನ್ ತುಂಬಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆಯ ಬಳಿಕ ಪ್ರೀತಿ ಸೂದನ್ ಅವರನ್ನು ಯುಪಿಎಸ್‌ಸಿ ಅಧ್ಯಕ್ಷೆಯಾಗಿ ನೇಮಿಸಲಾಗುತ್ತಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಕುಮಾರ್ ದ್ವಿವೇದಿ ಅವರು ಯುಪಿಎಸ್‌ಸಿ ಕಾರ್ಯದರ್ಶಿ ಶಶಿರಂಜನ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

2024ರ ಆಗಸ್ಟ್ 1ರಿಂದ ಪ್ರೀತಿ ಸೂದನ್ ಅಧಿಕಾರವನ್ನು ವಹಿಸಿಕೊಳ್ಳಲಿದ್ದು ಅವರ ಅಧಿಕಾರವಧಿ 2025ರ ಏಪ್ರಿಲ್ 29ರವರೆಗೆ ಇರಲಿದೆ.

ಮನೋಜ್ ಸೋನಿ ಅವರ ಅಧಿಕಾರಾವಧಿಯು 2029ರಲ್ಲಿ ಕೊನೆಗೊಳ್ಳಲಿದ್ದು ಸುಮಾರು ಐದು ವರ್ಷಗಳಿಗೂ ಮುನ್ನ ರಾಜೀನಾಮೆ ನೀಡಿದ್ದಾರೆ. ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಾನು ಆಯ್ಕೆಯಾಗಲು ನಕಲಿ ಪ್ರಮಾಣಪತ್ರಗಳನ್ನು ಬಳಸಿದ್ದಾರೆ ಎಂಬ ಆರೋಪದ ನಡುವೆ ಮನೋಜ್ ಸೋನಿ ರಾಜೀನಾಮೆ ನಿಡಿದ್ದಾರೆ.

ಮನೋಜ್ ಕುಮಾರ್ ದ್ವಿವೇದಿ ಅವರ ಪತ್ರದಲ್ಲಿ ಉಲ್ಲೇಖಿಸಿರುವಂತೆ ಸೋನಿ ಜುಲೈ 4ರಂದು ರಾಜೀನಾಮೆ ನೀಡಿದ್ದು ಜುಲೈ 31ರಿಂದ ಜಾರಿಗೆ ಬರುವಂತೆ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಮನೋಜ್ ಸೋನಿ ಅವರು 2017ರಲ್ಲಿ ಯುಪಿಎಸ್‌ಸಿ ಸದಸ್ಯರಾದರು. 2023ರ ಮೇ 16ರಂದು ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ನಾಗರಿಕ ಸೇವಾ ಪರೀಕ್ಷೆಯನ್ನು (ಸಿಎಸ್‌ಇ) ನಡೆಸುವ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

Leave a Reply

Your email address will not be published. Required fields are marked *

You missed

error: Content is protected !!