• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ ಬೇತಮಂಗಲ ಮುಖ್ಯ ರಸ್ತೆಯ ಕೃಷ್ಣಾಪುರಂ ಬಳಿ ಇರುವ ವೃತ್ತದಲ್ಲಿ ಇಂದು ಬೆಳಿಗ್ಗೆ ದಿಢೀರನೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಣಿಸಿಕೊಂಡಿದೆ. ಈ ಪ್ರತಿಮೆಯನ್ನು ಹಾಗೆಯೇ ಉಳಿಸಬೇಕು ಎಂದು ದಲಿತ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೆನ್ನೆ ಸಂಜೆ ವೃತ್ತದಲ್ಲಿ ಇಲ್ಲದ ಪ್ರತಿಮೆ ಇಂದು ಬೆಳಿಗ್ಗೆ ದಿಢೀರನೆ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ದಲಿತ  ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಮೆಯನ್ನು ಹಾಗೆಯೇ ಉಳಿಸಲು ತಾಲ್ಲೂಕು ಆಡಳಿತವನ್ನು ಮನವಿ ಮಾಡಿದ್ದಾರೆ.

ಕೃಷ್ಣಾಪುರಂ ಬಳಿಯ ಈ ವೃತ್ತವು ಕೆಜಿಎಫ್ ನಿಂದ ಬರುವ ಬಸ್ಸು ಮತ್ತು ಇತರೆ ವಾನಗಳು ಬೇತಮಂಗಲದ ಕಡೆಗೆ ಮತ್ತು ಬಂಗಾರಪೇಟೆ ಕಡೆಗೆ ಸಂಚರಿಸಲು ಹಾಗೂ ಎರಡೂ ಕಡೆಯಿಂದ ಕೆಜಿಎಫ್ ಗೆ ವಾಹನಗಳು ಸಂಚರಿಸುವ ವೃತ್ತವಾಗಿದ್ದು, ಇಲ್ಲಿ ವಿಶಾಲವಾದ ಸ್ಥಳವಿದೆ.

ಈ ವೃತ್ತದ ಮದ್ಯದಲ್ಲಿ ಅನೇಕ ವರ್ಷಗಳಿಂದ ಪ್ರತಿಮೆ ಇಡುವಷ್ಟು ಜಗುಲಿಯೂ ಇತ್ತು. ಇಂದು ಬೆಳಗಾಗುವುದರೊಳಗಾಗಿ ಜಗುಲಿಯ ಮೇಲೆ ಆಲೋಬ್ರಿಕ್ಸ್ ನಿಂದ ಸ್ವಲ್ಪ ಎತ್ತರಿಸಿ  ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಇಟ್ಟು  ಮಾಲಾರ್ಪಣೆ ಮಾಡಲಾಗಿದೆ.

ಇಂದು ಬೆಳಿಗ್ಗೆ ರಸ್ತೆಯಲ್ಲಿ ಓಡಾಡುವವರು ಮತ್ತು ಕೃಷ್ಣಾಪುರಂ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಅಚ್ಚರಿಯಿಂದ ನೋಡುತ್ತಿದ್ದು, ವಿಷಯ ತಿಳಿದ ಬೆಮೆಲ್ ನಗರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡುತ್ತಿದ್ದಂತೆ ದಲಿತ ಮುಖಂಡ ಎಪಿಎಲ್ ರಂಗನಾಥ್ ನೇತೃತ್ವದಲ್ಲಿ ಕೆಲ ದಲಿತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಹಾಗೆಯೇ ಉಳಿಸಿಕೊಂಡು ಹೋಗಲು ತಾಲ್ಲೂಕು ಆಡಳಿತವನ್ನು ಮನವಿ ಮಾಡಿದ್ದಾರೆ.

ಯಾರೋ ತಿಳಿದೋ ತಿಳಿಯದೆಯೋ ಪ್ರತಿಮೆ ಇಟ್ಟಿದ್ದಾರೆ. ಇದು ಯಾವ ರೀತಿಯ ಬೆಳವಣಿಗೆ ಎಂಬುದಕ್ಕಿಂತ ಈ ವೃತ್ತದಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದು ಪ್ರತಿಮೆಯನ್ನು ಉಳಿಸಿಕೊಂಡು ಹೋಗುವುದು ಒಳ್ಳಯ ಕೆಲಸ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಂದು 2ನೇ ಶನಿವಾರ ಕಾರಣ ಸರ್ಕಾರಿ ಕಛೇರಿಗಳು ರಜೆ ಇರುವುದರಿಂದ ಸೋಮವಾರ ತಹಶೀಲ್ದಾರ್, ಗ್ರಾಪಂ, ಲೋಕೊಪಯೋಗಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಮೆಯನ್ನು ಇಲ್ಲಿಯೇ ಉಳಿಸಲು ಮನವಿ ಮಾಡಲಾಗುವುದು ಎಂದು ಮುಖಂಡರು ಹೇಳಿದ್ದಾರೆ.

ಪ್ರತಿಮೆ ಇಟ್ಟಿರುವ ಈ ಸ್ಥಳ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತಿದ್ದು, ಕೆಜಿಎಫ್ ತಾಲ್ಲೂಕಿಗೆ ಸೇರಿದ ಸ್ಥಳವಾಗಿದೆ. ಹಾಗಾಗಿ ಪ್ರತಿಮೆಯನ್ನು ಉಳಿಸಿ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳನ್ನೂ ಮನವಿ ಮಾಡಲಾಗುವುದು ಎಂದು ಮುಖಂಡರು ಹೇಳಿದ್ದಾರೆ.

ಚುನಾವಣಾ ಕಾವು ಏರುತ್ತಿರುವ ಈ ಸಮಯದಲ್ಲಿ ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳ ಗಡಿಯಲ್ಲಿ ಪ್ರತಿಮೆ ಕಾಣಿಸಿಕೊಂಡಿರುವುದು ಅಚ್ಚರಿಯ ವಿಷಯವಾಗಿದ್ದ ಜನಪ್ರತಿನಿಧಿಗಳು, ಅಧಕಾರಿಗಳು ವಿಷಯವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ದಲಿತ ಮುಖಂಡರಾದ ಎಪಿಎಲ್ ರಂಗನಾಥ್, ಪಿಚ್ಚಹಳ್ಳಿ ಮಂಜುನಾಥ್, ಹುಣಸನಹಳ್ಳ ವೆಂಕಟೇಶ್, ಕೂಡಗಲ್ ಬಾಬು, ಅನ್ಬರಸನ್, ಮುಕುಂದ, ಕೃಷ್ಣಮೂರ್ತಿ, ಬಾಬು, ಶಶಿ, ಮೊದಲಾದವರು ಪ್ರತಿಮೆ ಬಳಿಗೆ ಭೇಟಿ ನೀಡಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!