• Fri. May 3rd, 2024

PLACE YOUR AD HERE AT LOWEST PRICE

ಗಲ್ ಪೇಟೆ ಮಿಠಾಯಿ ಆರ್ಮುಗಂ ನಿಧನ

ಕೋಲಾರ ನಗರದ ಗಲ್ ಪೇಟೆಯ ಮಿಠಾಯಿ ಆರ್ಮುಗಂ (86) ಸ್ವಲ್ಪ ಕಾಲದ ಅಸ್ವಸ್ಥತೆಯ ನಂತರ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದರು.

ಮೃತರು ಮಗ ಮಾಯಂಡಿ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ಪತ್ನಿ ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಶ್ರೀಯುತರು ಕೋಲಾರ ಗಲ್ಪೇಟೆಯಲ್ಲಿ ಮಿಠಾಯಿ ಕಾರ್ಖಾನೆಯನ್ನು ಆರು ದಶಕಗಳ ಹಿಂದೆ ಆರಂಭಿಸಿ ಟಾಫಿ, ಬರ್ಫಿ, ಚಿಕ್ಕಿ ಮತ್ತಿತರ ಸಿಹಿ ತಿಂಡಿಗಳನ್ನು ತಯಾರಿಸಿ ಜಿಲ್ಲೆಯಾದ್ಯಂತ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು.

ಮೃತರ ದೇಹದ ಅಂತ್ಯಕ್ರಿಯೆಯು ಭಾನುವಾರ ಬೆಳಗ್ಗೆ 10.30 ರ ನಂತರ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!