• Tue. May 21st, 2024

ಬಂಗಾರಪೇಟೆ:ಪಟ್ಟಣದ ಸೈಯದ್ ಕನ್ವೆನ್ಷನ್ ಹಾಲ್ ನಲ್ಲಿ ಪ್ರತಿಭಾ ಪುರಸ್ಕಾರ.

PLACE YOUR AD HERE AT LOWEST PRICE

ವಿದ್ಯೆ ಎಂಬುವುದು ಕೇವಲ ಪುಸ್ತಕದಿಂದ ಬಂದ ಜ್ಞಾನ ಸಂಪಾದನೆಯಲ್ಲ, ಅದು ಭವ್ಯ ಭಾರತದ ಸಾಂಸ್ಕೃತಿಕ, ಸಾಂಪ್ರದಾಯಕ, ಪರಂಪರೆ, ಹಾಗೂ ಗೌರವದ ಘನತೆಯ ಪ್ರತೀಕವಾಗಬೇಕು ಎಂದು ಮುಸ್ಲಿಂ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಸೈಯದ್ ಹುಸೇನ್ ರವರು ಅಭಿಪ್ರಾಯಪಟ್ಟರು.

ಅವರು ಬಂಗಾರಪೇಟೆ ಪಟ್ಟಣದ ಸೈಯದ್ ಕನ್ವೆನ್ಷನ್ ಹಾಲ್ ನಲ್ಲಿ  ತಾಲೂಕು ಮುಸ್ಲಿಂ ಎಜುಕೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ದೇಶದ ಅಭಿವೃದ್ಧಿ ಶಿಕ್ಷಣವನ್ನು ಅವಲಂಬಿಸಿದೆ ಎಂದರು.

ಪ್ರತಿಭಾ ಪುರಸ್ಕಾರ ಎಂಬುದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಇತರ ಕಲಿಕಾರ್ತಿಗಳಿಗೆ ಪ್ರೇರಣೆಯ ಮೂಲಕ ಉತ್ತೇಜಿಸುವುದಾಗಿದೆ.  19 ವರ್ಷಗಳ ಹಿಂದೆ ನಮ್ಮ ಟ್ರಸ್ಟ್ ವತಿಯಿಂದ 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು.

 

2023ರಲ್ಲಿ 320ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದ ಅವರು ಉತ್ತಮ ಸಮಾಜ ನಿರ್ಮಿಸಿ ರಾಜ್ಯ, ರಾಷ್ಟ್ರ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಟ್ರಸ್ಟ್ ನ ಸಂಚಾಲಕರಾದ ಮಹಮದ್ ಪಾಷಾ ಮಾತನಾಡಿ ವಿದ್ಯಾಭ್ಯಾಸ ಒಂದು ಸಮುದಾಯ ಅಥವಾ ವರ್ಗಕ್ಕೆ ಸೀಮಿತವಲ್ಲ. ಒಬ್ಬ ವ್ಯಕ್ತಿಗೆ ಬೆನ್ನೆಲುಬು ಹೇಗೆ ಆಧಾರವಾಗಿದೆಯೋ ಹಾಗೆಯೇ ಒಂದು ದೇಶದ ಅಭಿವೃದ್ಧಿ ತಳಹದಿ ಶಿಕ್ಷಣವಾಗಿದೆ.

ಶಿಕ್ಷಣದಿಂದ ಯಾರೊಬ್ಬರೂ ವಂಚಿತರಾಗಬಾರದು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಯಲ್ಲಿ ಮೌಲ್ಯವರ್ದಿತ ವ್ಯಕ್ತಿತ್ವ ರೂಪಿಸಬೇಕು. ಆ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಿ ದೇಶದ ಕೀರ್ತಿಯನ್ನು ಅಜರಾಮರವಾಗಿಸಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 320ಕ್ಕೂ ಹೆಚ್ಚು  ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಉನ್ನತ ವ್ಯಾಸಂಗ, ವೈದ್ಯಕೀಯ, ತಂತ್ರಜ್ಞಾನ, ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಸಯಾದ್ ನಜಾಮುದ್ದೀನ್, ಕಾರ್ಯದರ್ಶಿ ಮುಜಾಹಿದ್ ಖಾನ್.  ಮುಖ್ಯ ಅತಿಥಿಗಳಾದ ಅಕ್ರಮ್ ಸೈಯದ್, ಸೈಯದ್ ಹಬಿಬ್ ಪಾಷಾ, ಜಿಬಾ, ಸಾಹೇದ್ ತಾಜುದ್ದೀನ್, ಆರಿಫ್ ಅಹಮದ್, ಶೀತಲ್, ವರ್ಮಲ್ ಇದಾಯತುಲ್ಲ, ಮಹಮದ್ ಖಾದರ್, ರಿಫಾ ತಸ್ಕನ್, ಇತರರು ಉಪಸ್ಥಿತರಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!