• Tue. May 21st, 2024

ಕೋಲಾರ I ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಕಲಿತು ಸದೃಢ ಭಾರತ ಕಟ್ಟಲು ಶಂಕರೇಗೌಡ ಕರೆ

PLACE YOUR AD HERE AT LOWEST PRICE

ಆಧುನಿಕ ಶಿಕ್ಷಣವನ್ನು ಕಲಿತು ಸದೃಢ ಭಾರತ ಕಟ್ಟಲು ವಿದ್ಯಾರ್ಥಿಗಳ ಶ್ರಮ ಅವಶ್ಯಕವಾದದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿವೀಕ್ಷಕರಾದ ಜಿ.ಆರ್.ಶಂಕರೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೋಲಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೋಲಾರ ಹಾಗೂ ಕನ್ನಡ ಜಾನಪದ ಕಲಾ ಸಂಘ ಜನ್ನಘಟ್ಟ ಇವರ ವತಿಯಿಂದ ಹಮ್ಮಿಕೊಂಡಿದ್ದ ಯುವ ಸಪ್ತಾಹ ಮತ್ತು ಸ್ವಚ್ಚತಾ ಕಾರ್ಯಕ್ರಮವನ್ನು ಮದನಹಳ್ಳಿ ಕ್ರಾಸ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ವಿಶ್ವಮಾನವ ವಿವೇಕಾನಂದರು ಭೌತಿಕವಾಗಿ ಗಟ್ಟಿಮುಟ್ಟಾಗಿದ್ದು, ಇವರು ಸುಮಾರು ಪುಸ್ತಕಗಳನ್ನು ಓದಿ ವಿಷಯವನ್ನು ಅರಿತವರು. ವೀರ ಸನ್ಯಾಸಿ ಅಂತಲು ಸಹ ಕರೆಯುತ್ತಿದ್ದರು. ಹೊರ ದೇಶಕ್ಕೆ ಹೋದಾಗ ನಮ್ಮ ದೇಶದ ಧರ್ಮವನ್ನು ಪ್ರಚಾರ ಮಾಡುತ್ತಿದ್ದರು. ಚಿಕಾಗೋ ಸಮ್ಮೇಳನದಲ್ಲಿ ೧೬ ಬೋಧಕರು ಇದ್ದರು. ಅವರೆಲ್ಲರೂ ಬೋಧನೆ ಮಾಡಿದ ಮೇಲೆ ಕೊನೆಯದಾಗಿ ವಿವೇಕಾನಂದರು ಎಲ್ಲರನ್ನು ಉದ್ದೇಶಿಸಿ ಮಾತನಾಡಿ ಅಮೇರಿಕಾದಲ್ಲಿರುವ ನನ್ನ ಸಹೋದರ ಸಹೋದರಿಯರೆ ಎಂದು ಪ್ರೀತಿಯ ಬೋಧನೆ ಪ್ರಾರಂಭಿಸುತ್ತಾರೆ. ಇಂತಹ ಮಹಾತ್ಮರನ್ನು ನಾವು ಆದರ್ಶವಾಗಿ ಇಟ್ಟುಕೊಂಡು ಗುರಿ ಮುಟ್ಟುವ ತನಕ ಚೆನ್ನಾಗಿ ಓದಿ ಶಾಲೆಗೆ, ನಿಮ್ಮ ಊರಿಗೆ, ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ಗಳಿಸಬೇಕೆಂದರು.

ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಜಿ.ಎಂ.ವೆಂಕಟರಮಣಪ್ಪ ವಹಿಸಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಿ ವಿದ್ಯಾರ್ಥಿಗಳೆಲ್ಲರೂ ಚೆನ್ನಾಗಿ ಓದಬೇಕೆಂದರು.

ವೇದಿಕೆಯಲ್ಲಿ ಮದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ ಉಪ ಪ್ರಾಂಶುಪಾಲ ಬಿ.ಜಿ. ವಿಜಯಾನಂದ, ಕವಿ ಚಿ.ನಾ.ನಾಗೇಶ್, ಕಲಾವಿದ ಮತ್ತಿಕುಂಟೆಕೃಷ್ಣ, ಗುಟ್ಲೂರು ಸುನೀಲ್, ಚಿಟ್ನಹಳ್ಳಿ ಸಿ.ಎನ್.ವೆಂಕಟೇಶಪ್ಪ, ಕನ್ನಡ ಜಾನಪದ ಕಲಾ ಸಂಘದ ಕಾರ್ಯದರ್ಶಿ ಎನ್.ಮುರಳಿ, ಖಜಾಂಚಿ ಚೌಡಮ್ಮ, ಸದಸ್ಯರಾದ ಸೋಮಶೇಖರ್, ಎಂ.ನಾಗೇಂದ್ರಕುಮಾರ್, ತಮಟೆ ಕಲಾವಿದ ವೆಂಕಟೇಶಪ್ಪ, ತತ್ವಪದ ಕಲಾವಿದ ಹೊಸಮಟ್ನಹಳ್ಳಿ ಎಂ.ವೆಂಕಟಸ್ವಾಮಿ, ಗೊಟ್ಟಿಹಳ್ಳಿ ಮುನಿಯಪ್ಪ, ಶಿಕ್ಷಕರಾದ ತೇಜಶ್ವಿನಿ.ಸಿ.ಎನ್., ಪುಪ್ಪರಾಜ್, ಗಿರೀಶ್‌ನಾಯ್ಕ, ಸಹ ಶಿಕ್ಷಕ ಶ್ರೀನಿವಾಸ ಎಸ್.ಎನ್, ಬಡಮಾಕಲಹಳ್ಳಿ ನಾರಾಯಣಸ್ವಾಮಿ, ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದ ಸಂದರ್ಭದಲ್ಲಿ ಜನ್ನಘಟ್ಟ ಕೃಷ್ಣಮೂರ್ತಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ನೂರಾರು ಜನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ ಹಂಚಿ:

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!