• Mon. May 6th, 2024

*ಕೇಬಲ್ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೋಣೂರು ಗ್ರಾಮಸ್ಥರು.*

PLACE YOUR AD HERE AT LOWEST PRICE

ಶ್ರೀನಿವಾಸಪುರ:ಕೇಬಲ್ ಕಳ್ಳರನ್ನು  ಹಿಡಿದು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಗ್ರಾಮದಲ್ಲಿ ನಡೆದಿದೆ.

ಇತ್ತಿಚ್ಚಿಗೆ ತಾಲ್ಲೂಕಿನಾದ್ಯಂತ ಸುಮಾರು ಕಡೆ ಕೇಬಲ್, ಮೋಟಾರ್ ಹಾಗೂ ಬೆಳಬಾಳುವ ಸಾಮಾಗ್ರಿಗಳನ್ನು ಕಳವಾಗಿದ್ದು ಅವರೆ ಮಾಡಿದ್ದಾರೆ ಎಂದು ಶಂಕಿಸಿ ಗ್ರಾಮಸ್ಥರು ಹಿಡಿದು  ಪೋಲಿಸರಿಗೆ ಒಪ್ಪಿಸಿದ್ದಾರೆ.

ರೋಣೂರು ಗ್ರಾಮದ ಅನಿಲ್ ಎಂಬುವರಿಗೆ ಸೇರಿದ ಕೃಷಿ ಹೊಂಡದಲ್ಲಿದ್ದ ಮೋಟಾರನ್ನು  ಕಳುವು ಮಾಡುವ ವೇಳೆಯಲ್ಲಿ‌ ಸಿಕ್ಕಿಬಿದಿದ್ದು ಗ್ರಾಮದ ಯುವಕರು ನೋಡಿ ಕಳ್ಳರನ್ನು ಹಿಡಿದು ಕರೆತಂದು ಧರ್ಮದೇಟು ನೀಡಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಮಯಕ್ಕೆ ಸರಿಯಾಗಿ ಪೋಲಿಸರು ಸ್ಥಳಕ್ಕೆ ಬಂದಿದ್ದು ಆರೋಪಿಗಳನ್ನು ಹೊಡೆಯುವುದು ತಳಿಸುವುದು ತಪ್ಪು. ಕಾನೂನು ಕೈಗೆತ್ತಿಕೊಳ್ಳುವುದು ತಪ್ಪಾಗುತ್ತದೆ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದ್ದಾರೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ನಾರಾಯಣಸ್ವಾಮಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!