• Thu. May 2nd, 2024

PLACE YOUR AD HERE AT LOWEST PRICE

  • ೮೬೦೦ಕ್ಕೂ ಅಧಿಕ ಪ್ರಕರಣಗಳ ವಿಲೇವಾರಿ-ನ್ಯಾ.ಶುಕ್ಲಾಕ್ಷ ಪಾಲನ್

ಕೋಲಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್, ಕ್ರಿಮಿನಲ್ ಮತ್ತು ವಿಮಾ ಪರಿಹಾರ ಸಂಬಂಧಪಟ್ಟ ಪ್ರಕರಣಗಳು ಸೇರಿ ಒಟ್ಟು ೫೩೮೮ ಅಂದರೆ ವ್ಯಾಜ್ಯ ಪೂರ್ವ ಬ್ಯಾಂಕ್ ಪ್ರಕರಣಗಳು ಹಾಗೂ ಇತರೆ ಸಾರ್ವಜನಿಕ ಉಪಯುಕ್ತತಾ ಪ್ರಕರಣಗಳು ೩೨೧೩ ಸೇರಿ ಒಟ್ಟು ೮೬೦೧ ಪ್ರಕರಣಗಳು ವಿಲೇಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ತಿಳಿಸಿದರು.

ಕಕ್ಷಿದಾರರು ಹಾಗೂ ವಕೀಲರು ಸೇರಿ ಲೋಕ್ ಅದಾಲತ್‌ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ರಾಜೀ ಸಂಧಾನ ಮಾಡಿಕೊಂಡಿರುತ್ತಾರೆ. ಇವುಗಳಲ್ಲಿ ರಾಜೀ ಆಗುವ ಕ್ರಿಮಿನಲ್ ಪ್ರಕರಣಗಳು ೧೦೦, ಚೆಕ್ ಬೌನ್ಸ್ ಪ್ರಕರಣಗಳು ೩೯೧, ಇತರೆ ಕ್ರಿಮಿನಲ್ ಪ್ರಕರಣಗಳು ೩೦೧, ಕೌಟುಂಬಿಕ ವ್ಯಾಜ್ಯಗಳು ೭೦, ವಿಭಾಗದ ದಾವೆಗಳು ೯೪, ಇತರೆ ಸಿವಿಲ್ ಪ್ರಕರಣಗಳು ೪೨೦ ಹಾಗೂ ಅಪಘಾತ ಪರಿಹಾರ ಪ್ರಕರಣಗಳು ೧೮ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ೩೨೧೩ ಸೇರಿ, ಒಟ್ಟು ೮೬೦೧ ಪ್ರಕರಣಗಳು ಕೋಲಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಲೇಯಾಗಿರುತ್ತವೆ. ಸದರಿ ಎಲ್ಲಾ ಪ್ರಕರಣಗಳಲ್ಲಿ ೨೬,೬೦,೨೧,೮೧೩ ರೂ.ಗಳ ಪರಿಹಾರ ಮೊತ್ತ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಲೋಕ್ ಅದಾಲತ್‌ನ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷ ಜಿ. ಶ್ರೀಧರ್ ಹಾಗೂ ಎಲ್ಲಾ ವಕೀಲರಿಗೂ ಹಾಗೂ ಜಿಲ್ಲೆಯ ಎಲ್ಲಾ ನ್ಯಾಯಾಽಶರಿಗೆ, ಸಿಬ್ಬಂದಿಗಳಿಗೆ ಹಾಗೂ ಪಕ್ಷಗಾರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್ ಹೊಸಮನಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಸುದ್ದಿ ಓದಿ ಹಂಚಿ:

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!