• Thu. May 2nd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಕಳೆದ ಆರು ತಿಂಗಳಿನಿಂದ ಕೆಜಿಎಫ್ ಪೊಲೀಸ್  ಜಿಲ್ಲೆಯ ಬಂಗಾರಪೇಟೆ ಹಾಗೂ ಕ್ಯಾಸಂಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನವಾಗಿದ್ದ 9 ಕೇಸುಗಳಲ್ಲಿ 26.67 ಲಕ್ಷ ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣಗಳ ಸಮೇತ ಆರೋಪಿಯನ್ನು ಬಂಧಿಸುವಲ್ಲಿ  ಪೋಲಿಸ್ ಇನ್ಸ್‍ಪೆಕ್ಟರ್ ಟಿ.ಸಂಜೀವರಾಯಪ್ಪ ನೇತೃತ್ವದ ತಂಡ ಯಶಸ್ವಿಯಾಗಿದ್ದಾರೆ.

ಪಟ್ಟಣದ ದೇಶಿಹಳ್ಳಿ ರಾಜೇಂದ್ರ ಲೇಔಟ್‍ನಲ್ಲಿ ವಾಸವಾಗಿರುವ ಅಮರನಾಥರೆಡ್ಡಿ ಬಿನ್ ಪಿಳ್ಳಾರೆಡ್ಡಿ ಎಂಬುವವರು ನ.19 ರಂದು ಮನೆಗೆ ಬೀಗ ಹಾಕಿಕೊಂಡು ಸ್ವಂತ ಗ್ರಾಮದವಾದ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮಕ್ಕೆ ಹೋಗಿ ಎರಡು ದಿನಗಳ ನಂತರ ಮನೆಗೆ ವಾಪಸ್ಸಾದರೆ ಮನೆಯ ಬೀಗ ಹೊಡೆದು ಮನೆಯ ಬೀರುವಿನಲ್ಲಿದ್ದ ಚಿನ್ನದ  ಆಭರಣಗಳು, ಬೆಳ್ಳೆ ಆಭರಣಗಳನ್ನು ದೋಚಿರುವ ಬಗ್ಗೆ ನೀಡಿರುವ ದೂರು ದಾಖಲಾಗಿತ್ತು.

ಬಂಗಾರಪೇಟೆ ಪೋಲಿಸ್ ಠಾಣೆಯ ಪ್ರಬೋಷನರಿ ಪಿಎಸ್‍ಐ ಬಿ.ವಿ.ಕಿರಣ್‍ಕುಮಾರ್, ಸಿಬ್ಬಂದಿಯಾದ ಕೆ.ರಾಮಕೃಷ್ಣಾರೆಡ್ಡಿ, ಕೆ.ಬಿ.ಅನಿಲ್‍ಕುಮಾರ್, ವಿ.ಮಂಜುನಾಥರೆಡ್ಡಿ, ಬಿ.ಮುನಾವರ್‍ಪಾಷಾ, ಎಸ್.ಸುರೇಶಬಾಬು, ಎಂ.ವೆಂಕಟಾಚಲಪತಿ, ಶ್ರೀನಿವಾಸ್, ಆರ್.ನವೀನ್ ಹಾಗೂ ಕೆಜಿಎಫ್ ಸಿಡಿಆರ್ ಸೆಲ್ ವಿಭಾಗದ ಚಂದ್ರಕುಮಾರ್, ಕೆ.ವಿ.ಪ್ರಭಾಕರ್ ನೇತೃತ್ವದ ವಿಶೇಷ ತಂಡವನ್ನು ಕೆಜಿಎಫ್ ಎಸ್ಪಿ ಡಾ.ಧರಣೀದೇವಿ ನೇಮಿಸಿದ್ದರಿಂದ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ಆರೋಪಿತ ಆಂಡ್ರಸನ್‍ಪೇಟೆಯ ಶರತ್ ಬಿನ್ ಮುನಿಯಾ (30) ಎಂಬುವವರನ್ನು ಪತ್ತೆಹಚ್ಚಿ ವಿಚಾರಣೆಗೆ ಒಳ್ಳಪಡಿಸಿದ್ದರಿಂದ ಕಳ್ಳತನ ಮಾಡಿದ್ದ 425 ಗ್ರಾಂ ಚಿನ್ನ ಹಾಗೂ 400 ಗ್ರಾಂ ಬೆಳ್ಳಿ ಆಭರಣಗಳನ್ನು ಬೆಂಗಳೂರು ಹಾಗೂ ಕೆಜಿಎಫ್ ಕಡೆಗಳಲ್ಲಿ ಮಾರಾಟ ಮಾಡಿದ್ದಾನೆ ಎಂದು ಪೋಲಿಸ್ ತಿಳಿಸಿದ್ದಾರೆ.

ಆರೋಪಿಯಿಂದ 26.67 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು ಹಾಗೂ ಬೆಳ್ಳಿಆಭರಣಗಳು, ಒಂದು ಮಾರುತಿ ಸ್ಟ್ರೆಸೊ ಕಾರನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೋಲಿಸರ ಸಾಹಸವನ್ನು ಮೆಚ್ಚಿರುವ ಕೆಜಿಎಫ್ ಎಸ್ಪಿ ಡಾ.ಧರಣಿದೇವಿ, ಡಿವೈಎಸ್‍ಪಿ ಎಲ್.ರಮೇಶ್ ಅವರು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಪ್ರಶಂಸಿದ್ದಾರೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!