• Thu. May 16th, 2024

ವಿದ್ಯೆ ಕೊಟ್ಟ ತಂದೆ ತಾಯಿಯ ಋಣ ತೀರಿಸುವ ಕರ್ತವ್ಯ ಮಕ್ಕಳ ಮೇಲಿದೆ-ಜಿ.ನರೇಶ್‌ಬಾಬು

PLACE YOUR AD HERE AT LOWEST PRICE

ಎಂತಹ ಕಷ್ಟದಲ್ಲೂ ಮಕ್ಕಳಿಗೆ ವಿದ್ಯೆ ಕೊಡಿಸಲು ಶ್ರಮಿಸುವ ತಂದೆ ತಾಯಿಗಳು ಮಕ್ಕಳಿಂದ ಪ್ರೀತಿಯನ್ನು ಮಾತ್ರ ನಿರೀಕ್ಷಿಸುತ್ತಾರೆ, ಅವರ ತ್ಯಾಗದ ಋಣ ತೀರಿಸುವ ಕರ್ತವ್ಯ ಮಕ್ಕಳ ಮೇಲಿದೆ ಎಂದು ರವಿ ಸಮೂಹ ಸಂಸ್ಥೆಗಳ ನಿರ್ದೇಶಕ ನರೇಶ್‌ಬಾಬು ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ಸಂಗೊoಡಹಳ್ಳಿ ಸಮೀಪವಿರುವ ಕೆ.ಜಿ.ಎನ್. ಕಲ್ಯಾಣ ಮಂಟಪದಲ್ಲಿ ರವಿ ಸಮೂಹ ಸಂಸ್ಥೆಗಳು ಆಯೋಜಿಸಿದ್ದ ೨೦೨೩ನೇ ವಾರ್ಷಿಕೋತ್ಸವ ಕಾರ್ಯಕ್ರಮವ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ನಮ್ಮ ಜೀವನವನ್ನೇ ಬದಲಾಯಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ, ಆಧುನಿಕ ಕ್ಷಿಪಣಿ ಜನಕ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು, ಬೆಳೆಗಿನ ಜಾವ ಮನೆ ಮನೆಗೆ ಪತ್ರಿಕೆ ವಿತರಣೆ ಮಾಡುತ್ತಾ ವಿದ್ಯಾಬ್ಯಾಸ ಮುಂದುವರೆಸಿದ ಅವರು, ತಮ್ಮ ಓದಿನ ಮೂಲಕ ಅತ್ಯುನ್ನತ ಸಾಧನೆ ಮಾಡಿದರು ಎಂದು ಸ್ಮರಿಸಿದರು.

ನಾವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು, ಬರೀ ಓದುವುದು ಮಾತ್ರವೇ ಜೀವನವಲ್ಲಾ, ಪಾಠದ ಜೊತೆಗೆ ಆಟಗಳು ಸಹ ಅಗತ್ಯವಾಗಿದೆ. ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮೊಳಗಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿಗಳಾಗುತ್ತೇವೆ ಎಂದು ಕಿವಿ ಮಾತನಾಡಿದರು.

ಬೆಂಗಳೂರು ಉತ್ತರ ವಲಯ ಡಿಸಿಪಿ ಡಿ.ದೇವರಾಜ್, ಸಮಾಜ ಸೇವಕ ಮುಸ್ತಫಾ ಪಾಷಾ, ರವಿ ಪದವಿ ಕಾಲೇಜು ಪ್ರಾಂಶುಪಾಲ ಸಲೀಂಪಾಷ ಮಾತನಾಡಿದರು. ವಿದ್ಯಾರ್ಥಿನಿಯರಾದ ಅಕ್ಷಿತಾ ಹಾಗೂ ಸ್ನೇಹಾ ಪ್ರಾರ್ಥಿಸಿದರು. ಉಪನ್ಯಾಸಕಿ ಸೌಮ್ಯ ನಿರೂಪಣೆಯಲ್ಲಿ ಬಾಬಾಜಾನ್ ಸ್ವಾಗತಿಸಿ ಪರ್ಹಾನ್ ವಂದಿಸಿದರು.

ಇ ಸಂದರ್ಭದಲ್ಲಿ ಎಸ್.ಕೆ.ಎಸ್. ಗ್ರೂಪ್‌ನ ಕುದ್ರತ್ ಉಲ್ಲಾ ಖಾನ್, ಉಪ ಪ್ರಾಂಶುಪಾಲ ಲಿಯಾಖತ್ ಅಲಿಖಾನ್, ಬಾಬಾಜಾನ್, ಇಸ್ಮಾಯಿಲ್, ನವಾಜ್, ನವೀನ್, ಯುವ ಮುಖಂಡ ಜುನೆದ್‌ಖಾನ್, ತನ್ವೀರ್‌ಪಾಷ, ಸಮಾಜ ಸೇವಕ ಖಮರ್‌ಉದ್ದೀನ್, ಮುಖ್ಯೋಪದ್ಯಾಯಿನಿ ನಾಜೀಯಾಸುಲ್ತಾನ, ರವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!