• Sat. May 4th, 2024

PLACE YOUR AD HERE AT LOWEST PRICE

ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ಇಂಕ್ರಿಮೆಟ್ ನೀಡುವುದು, ಅವೈಜ್ಞಾನಿಕ ಗುರಿ ಸಾಧನೆಗೆ ನೀಡುತ್ತಿರುವ ಕಿರುಕುಳ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.

ಕೋಲಾರ ನಗರದ ಅಂಚೆ ಇಲಾಖೆ ವಿಭಾಗೀಯ ಕಚೇರಿ ಮುಂದೆ ಒಂದು ದಿನದ ಧರಣಿ ನಡೆಸಿದ ನೌಕರರನ್ನುದ್ದೇಶಿಸಿ ಮಾತನಾಡಿದ ಕ್ರಿಯಾ ಸಮಿತಿ ಅಧ್ಯಕ್ಷ ಎನ್.ಕೃಷ್ಣಪ್ಪ, ಕಳೆದ ೨೦೨೨ರ ಸೆಪ್ಟೆಂಬರ್‌ನಲ್ಲಿ ಅಂಚೆ ನೌಕರರ ದೆಹಲಿಯಲ್ಲಿ ಅರ್ನಿಷ್ಟಾವಽ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಅಽಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೆಲವು ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಲಾಗಿತ್ತು ಎಂದರು.

ಆದರೆ ಈವರೆಗೂ ನಮ್ಮ ಯಾವುದೇ ಬೇಡಿಕೆ ಈಡೇರಿಸಿಲ್ಲ, ಸಭೆ ನಡೆದು ಮೂರು ತಿಂಗಳು ಕಳೆದರೂ ಇಲಾಖೆ ಅಽಕಾರಿಗಳು ನಮಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ, ಈ ಹಿನ್ನಲೆಯಲ್ಲಿಯೇ ಇಂದು ಒಂದು ದಿನದ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಜತೆಗೆ ಮಾ.೧೬ ರಂದು ಹಾಗೂ ೧೭ ರಂದು ದೇಶಾದ್ಯಂತ ೨ ದಿನಗಳ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕ್ರಿಯಾ ಸಮಿತಿ ಕಾರ್ಯದರ್ಶಿ ಎಂ.ಜಿ.ರಮೇಶ್, ಖಜಾಂಚಿ ಸಿ.ಎನ್. ವೀರಭದ್ರಪ್ಪ, ಚಿಕ್ಕಬಳ್ಳಾಪುರ ಶಾಖಾ ಕಾರ್ಯದರ್ಶಿ ರಾಮಪ್ಪ, ಕೆಜಿಎಫ್‌ನ ರಾಮರಾವ್, ಮುಖಂಡರಾದ ಮುನಿಸ್ವಾಮಿ, ಮುದುವಾಡಿಯ ಡಿ.ಎನ್.ಮೀನಾಕುಮಾರಿ, ಜನ್ನಘಟ್ಟದ ಎಂ.ಕಲ್ಯಾಣಿ, ಭೈರವೇಶ್ವರಿ, ರಾಧಾ, ಜಯಲಕ್ಷ್ಮ್ಮಿ, ಪದ್ಮಮ್ಮ, ಸುಷ್ಮಾ, ಹೇಮಾವತಿ ಸೇರಿದಂತೆ ಎಲ್ಲಾ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ ಹಂಚಿ:

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!