• Sat. May 18th, 2024

ಕೋಲಾರ I ಟ್ರಾನ್ಸ್‌ಫಾರ‍್ಮರ್‌ನಲ್ಲಿ ಹೊತ್ತಿಕೊಂಡ ಬೆಂಕಿ-ಆತಂಕ ಸಕಾಲಕ್ಕೆ ಆಗಮಿಸಿ ಶಮನಗೊಳಿಸಿದ ಅಗ್ನಿಶಾಮಕ ಸಿಬ್ಬಂದಿ

PLACE YOUR AD HERE AT LOWEST PRICE

ಟ್ರಾನ್ಸ್‌ಫಾರ್ಮರ್‌ನಲ್ಲಿ ಫ್ಯೂಸ್ ಹಾಳಾದ ಕಾರಣ ಬೆಂಕಿ ಕಿಡಿಗಳು ಸಿಡಿದು ಬೆಂಕಿ ಹೊತ್ತಿಕೊಂಡ ಘಟನೆ ಕೋಲಾರ ನಗರದ ಪೇಟೆಚಾಮನಹಳ್ಳಿಯ ಬಿಎಸ್‌ಎನ್‌ಎಲ್ ಟವರ್ ಬಳಿ ಶುಕ್ರವಾರ ಮಧ್ಯಾಹ್ನ ಜರುಗಿತು.

ಪೇಟೆಚಾಮನಹಳ್ಳಿಯಲ್ಲಿನ ಬಿಎಸ್‌ಎನ್‌ಎಲ್ ಟವರ್‌ಗಾಗಿ ನೀಡಲಾಗಿದ್ದ ಟ್ರಾನ್ಸ್‌ಫಾರ್ಮರ್‌ನಲ್ಲಿನ ಫ್ಯೂಸ್ ಹಾಳಾದ ಕೂಡಲೇ ಬೆಂಕಿಯ ಕಿಡಿಗಳು ಸಿಡಿದಿವೆ. ಇದರಿಂದಾಗಿ ಕೆಳಗೆ ಇದ್ದ ತ್ಯಾಜ್ಯ ಬಟ್ಟೆಗಳು, ವಸ್ತುಗಳಿಗೆ ಬೆಂಕಿ ತಗುಲಿದ್ದು, ದಟ್ಟ ಹೊಗೆಯಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾದರು.

ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಕೂಡಲೇ ಬೆಸ್ಕಾಂ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಬಿಎಸ್‌ಎನ್‌ಎಲ್ ಟವರ್‌ಗೆ ಸಂಬಂಧಿಸಿದ ಜನರೇಟರ್ ಸಹ ಅಲ್ಲಿಯೇ ಇದ್ದ ಪರಿಣಾಮ ಸ್ಥಳೀಯರು ಬಕೆಟ್‌ಗಳಲ್ಲಿ ನೀರು ಹಾಕಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಹಾಗಾಗಿ ಯಾವುದೇ ಹಾನಿ ಸಂಭವಿಸಲಿಲ್ಲ.

ಇದೇ ಜಾಗದಲ್ಲಿ ೨-೩ ಬಾರಿ ಇಂತಹ ಘಟನೆ ನಡೆಯುತ್ತಲೇ ಇದ್ದು, ಸುತ್ತಮುತ್ತ ಮನೆಗಳಿವೆ. ಹಾಗಾಗಿ ಸಂಬಂಧಪಟ್ಟವರು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸುದ್ದಿ ಓದಿ ಹಂಚಿ:

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!