• Sat. May 18th, 2024

PLACE YOUR AD HERE AT LOWEST PRICE

ಕೋಲಾರ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಿಂಭಾಗ ಇರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಐದನೇ ವಾರ್ಷಿಕೋತ್ಸವವನ್ನು ವಿವಿಧ ಪೂಜಾ ಕಾರ್ಯಕ್ರಮ ಮತ್ತು ಹೋಮಗಳ ಮೂಲಕ ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು.

ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಅಯ್ಯಪ್ಪಸ್ವಾಮಿಗೆ -ಲಪಂಚಾಮೃತ ಅಭಿಷೇಕ, ಕಲಶ ಸ್ಥಾಪನೆ, ಗ್ರಹಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಅಯ್ಯಪ್ಪಸ್ವಾಮಿ ಹೋಮ, ಬಾಲಸುಬ್ರಮಣಿ ಹೋಮ, ಮೃತ್ಯುಂಜಯ ಹೋಮ, ಪುನಕಂಭಸ್ಥಾಪನೆ ಮತ್ತು ಪುಷ್ಪಾಲಂಕಾರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗಏರ್ಪಡಿಸಲಾಗಿತ್ತು.

ಪಂಚಾಮೃತ ಅಭಿಷೇಕ ಮತ್ತು ಪ್ರಸಾದವನ್ನು ಕಿಲಾರಿಪೇಟೆ ಮೇಸಿ ನಾರಾಯಣಸ್ವಾಮಿ ಮತ್ತು ಕುಟುಂಬದವರು, ಹೋಮಗಳ ಸೇವೆಯನ್ನು ಕೋಲಾರ ಶ್ರೀರಾಮಸೇನೆ ಘಟಕ ಪ್ರಾಯೋಜಿಸಿತ್ತು. ಹೂವಿನ ಅಲಂಕಾರವನ್ನು ಜಿಎನ್ ಮತ್ತು ಎಸ್‌ಆರ್‌ಎಪ್ ಹೂವಿನ ಮಂಡಿ ಪ್ರಾಯೋಜಿಸಿತ್ತು. ಮಂಗಳವಾದ್ಯವನ್ನು ಕೆ.ವಿ.ಚೌಡಪ್ಪ ಮತ್ತು ಸಹೋದರ ಮಕ್ಕಳು, ವಿದ್ಯುತ್ ದೀಪಾಲಂಕಾರವನ್ನು ಟಿ.ಡಿ.ಮುನಿಯಪ್ಪ ಮತ್ತು ಟಿ.ಎನ್.ವೆಂಕಟೇಶಗೌಡ ಕುಟುಂಬದವರು, ಪಡಿಪೂಜೆ ಸೇವೆಯನ್ನು ರಘುರಾಮ್ ಕುಟುಂಬ ಮತ್ತು ಬಜರಂಗದಳ ವಿಶ್ವ, ಶಾಮಿಯಾನ, ಟೇಬಲ್ ಅನ್ನು ಗಲ್‌ಪೇಟೆ ಹರೀಶ್‌ರಾಜ್ ಸೇವಾಕರ್ತರಾಗಿ ಪೂರೈಸಿದರು.
ಸಂಜೆ ಅಯ್ಯಪ್ಪಸ್ವಾಮಿ ಪ್ರಾಕಾರೋತ್ಸವ ನಂತರ ಮೆರವಣಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ರಮೇಶ್‌ಯಾದವ್, ಶಬರೀಶ್ ಯಾದವ್, ಮುಕ್ಕಡ್ ವೆಂಕಟೇಶ್, ಮುನಿರಾಜು, ಗೋಕುಲ ಚಲಪತಿ, ಮುನಿವೆಂಕಟಯಾದವ್, ರಾಮಕೃಷ್ಣ, ಜ್ಯೂಸ್ ನಾರಾಯಣಸ್ವಾಮಿ, ಪ್ರಭಾಕರ್ ಮತ್ತಿತರರು ಭಾಗವಹಿಸಿದ್ದರು.

ದೇವಾಲಯದ ಅಖಿಲ ಭಾರತ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಸಮಿತಿ ಮುಖ್ಯಸ್ಥರಾದ ಬಾಬುಸ್ವಾಮಿ ಕಾರ್ಯಕ್ರಮಗಳ ನೇತೃತ್ವವಹಿಸಿಕೊಂಡಿದ್ದರು. ನೂರಾರು ಮಂದಿ ಭಕ್ತರು ಪೂಜಾ ಹೋಮಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ ಹಂಚಿ:

 

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!