• Sat. May 18th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಸೇವೆ ಮಾಡುವ ವ್ಯಕ್ತಿ ಎಂದರೆ ರಮೇಶ್ ಕುಮಾರ್, ಈ ಕಾರಣದಿಂದ ತಾಲ್ಲೂಕಿನಾದ್ಯಂತ ಬೋವಿ ಸಮುದಾಯ  ಕಾಂಗ್ರೆಸ್ ಪರವಾಗಿದೆ ಎಂದು ಬೋವಿ ಸಮುದಾಯದ ನಾಯಕ ಜೆ ವಿ ಕಾಲೋನಿ ವೆಂಕಟೇಶ್ ಹೇಳಿದರು.

ಶಾಸಕ  ಕೆ ಆರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ಮಾವಿನ ಮಾರುಕಟ್ಟೆಯಲ್ಲಿ ಬೋವಿ ಸಮುದಾಯದ ಸಮಾವೇಶವನ್ನು ಆಯೋಜನೆ ಮಾಡಲಾಗಿದ್ದು ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಮಾವಿನ ಮಾರುಕಟ್ಟೆಯ ತನಕ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ನಮ್ಮ ಸಮುದಾಯ ಎಲ್ಲಾ ಗ್ರಾಮಗಳಲ್ಲಿ ಶಾಸಕರು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ಬೋವಿ ಸಮುದಾಯಕ್ಕೆ ಸಾವಿರಾರು ಮನೆಗಳು ಕೊಟ್ಟಿದ್ದಾರೆ. ಗ್ರಾಮ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಶಾಲೆಗಳು ಸಮುದಾಯ ಭವನಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ಈ ಕಾರಣಕ್ಕಾಗಿ ಬೋವಿ ಸಮುದಾಯದಿಂದ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲವಿದೆ. 20 ಸಾವಿರಕ್ಕೂ ಅಧಿಕ ಮತಗಳಿಂದ ರಮೇಶ್ ಕುಮಾರ್ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಅಭಿವೃದ್ದಿ ಎಂದರೆ ರಮೇಶ್ಕುಮಾರ್-ರಮೇಶ್ ಕುಮಾರ್ ಎಂದರೆ ಅಭಿವೃದ್ದಿ ಎಂದರು.

ಒಬ್ಬ ಜನಪ್ರತಿನಿಧಿಯನ್ನು ನಾವು ಆಯ್ಕೆ ಮಾಡಬೇಕಾದರೆ ವಿಧಾನಸೌಧದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಬೇಕು. ತಾಲೂಕಿನ ಜನತೆಯ ಬಗ್ಗೆ ಕಾಳಜಿ ವಹಿಸಬೇಕು. ಅಂತಹ ನಾಯಕನನ್ನು ನಾವು ಆಯ್ಕೆ ಮಾಡಬೇಕು. ಕರ್ನಾಟಕದ ಮೂಲೆ ಮೂಲೆ ಗ್ರಾಮಗಳಿಗೆ ಭೇಟಿ ನೀಡಿದರು ಶ್ರೀನಿವಾಸಪುರ ಎಂದರೆ ರಮೇಶ್ ಕುಮಾರ್.

ಶಾಸಕ ರಮೇಶ್ ಕುಮಾರ್ ಮಾತನಾಡಿ, ಬೋವಿ ಸಮುದಾಯ ಜನಸಂಖ್ಯೆ ಹೆಚ್ಚಿರುವ ಗ್ರಾಮವಾದ ಗೌಡತಾತನ ಗಡ್ಡ ಗ್ರಾಮದಲ್ಲಿ ಸಮುದಾಯ ಭವನ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಶಿವಪುರ ಗ್ರಾಮದಲ್ಲಿ 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಿವಪುರ ವೆಂಕಟೇಶ್, ನಾಗಣಯನಹಳ್ಳಿ ರಾಜಪ್ಪ,ಚೌಡಪ್ಪ, ಶಿವಪುರ ಜಗದೀಶ್, ಮುನಿಯಪ್ಪ, ಶಿವಪುರ ವೆಂಕಟೇಶ್, ಗಂಗಪ್ಪ, ನಕ್ಕಲಗಡ್ಡ ಶ್ರೀನಿವಾಸ್, ರಮೇಶ್, ಗೌಡಹಳ್ಳಿ ವೆಂಕಟರೆಡ್ಡಿ,ಜೀಡಿಮಾಕಲಹಳ್ಳಿ ಶಿವಣ್ಣ,ಶಿವಪುರ ಗುತ್ತಿಗೆದಾರ ಶಿವಕುಮಾರ್ ಮೊದಲಾದವರಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!