• Sat. May 4th, 2024

ಇಂದಿನಿoದ ಜಿಲ್ಲಾದ್ಯoತ ಎಸ್ಸೆಸ್ಸೆಲ್ಸಿ ಪರೀಕ್ಷೆ-ಕೇಂದ್ರಗಳಲ್ಲಿ ಪೂರ್ವಸಿದ್ದತೆ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಗೊಂದಲಕ್ಕೆಡೆ ಬೇಡ -ಜಿ.ಎನ್.ವೇಣುಗೋಪಾಲ್

PLACE YOUR AD HERE AT LOWEST PRICE

ಕೋಲಾರ ನಗರದ ನೂತನ ಸರ್ಕಾರಿ ಪ್ರೌಢಶಾಲಾ ಕೇಂದ್ರದಲ್ಲಿ ಮಾ.೩೧ ರಿಂದ ಆರಂಭಗೊಳ್ಳುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಖ್ಯ ಅಧೀಕ್ಷಕ ಜಿ.ಎನ್.ವೇಣುಗೋಪಾಲ್ ನೇತೃತ್ವದಲ್ಲಿ ಸಕಲ ಸಿದ್ದತೆ ನಡೆಸಿದ್ದು, ಪರೀಕ್ಷಾ ಸಿಬ್ಬಂದಿ ಗೊಂದಲಕ್ಕೆ ಒಳಗಾಗದೇ ಮಾಧ್ಯಮ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸೂಚನೆ ನೀಡಿದರು.

ಮೊದಲ ದಿನದ ಪ್ರಥಮ ಭಾಷಾ ಪರೀಕ್ಷೆಗೆ ಕೇಂದ್ರಗಳಲ್ಲಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯನ್ನೂ ಮಾ.೩೦ ರಂದು ನಡೆಸಿದ್ದು, ಪರೀಕ್ಷಾ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು. ನಡೆಸಲಾಯಿತು.

ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿ, ಈ ಕೇಂದ್ರದಲ್ಲಿ ಕನ್ನಡ,ಉರ್ದು,ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಇರುವುದರಿಂದ ಪ್ರಶ್ನೆಪತ್ರಿಕೆ ವಿತರಿಸುವಾಗ ಗೊಂದಲ ಮಾಡಿಕೊಳ್ಳದಿರಿ, ಆಯಾ ಮಾಧ್ಯಮದ ವಿದ್ಯಾರ್ಥಿಯ ಮಾಹಿತಿ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸಲಹೆ ನೀಡಿದರು. ಕ್ಲಸ್ಟರ್ ಹಂತದ ವಿವಿಧ ಶಾಲೆಗಳಿಂದ ಆಗಮಿಸಿರುವ ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ ನೇಮಕಗೊಂಡಿದ್ದು, ಪರೀಕ್ಷೆಗೆ ನೊಂದಣಿ ಸಂಖ್ಯೆ ದಾಖಲಿಸುವ ಕಾರ್ಯ ಮುಗಿಸಿದರು.

ಪರೀಕ್ಷಾ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯಂತೆ ನೇಮಕಗೊಂಡಿರುವ ಶಿಕ್ಷಕರ ಸಭೆ ನಡೆಸಿದ ಮುಖ್ಯ ಅಧೀಕ್ಷಕ ಜಿ.ಎನ್.ವೇಣುಗೋಪಾಲ್, ಮೊಬೈಲ್ ತರಬೇಡಿ, ಮಕ್ಕಳಿಗೆ ಗೊಂದಲವಾಗದ ರೀತಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು. ಕೊಠಡಿ ಮೇಲ್ವಿಚಾರಕರು, ಡಿ ದರ್ಜೆ ಸಿಬ್ಬಂದಿ ಸೇರಿದಂತೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ, ಮೊಬೈಲ್ ತಂದಿದ್ದರೆ ಶಿಕ್ಷಕರು ಆರಂಭದಲ್ಲೇ ತಮ್ಮ ಮೊಬೈಲ್‌ಅನ್ನು ಇಲಾಖೆ ನೇಮಿಸಿರುವ ಮೊಬೈಲ್ ಸಂಗ್ರಹಣಾಧಿಕಾರಿಗೆ ಒಪ್ಪಿಸಿ ಪರೀಕ್ಷಾಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.

ಕೇಂದ್ರದ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿದ್ದು, ಈ ಭಾಗದಲ್ಲಿ ಜೆರಾಕ್ಸ್ ಅಂಗಡಿಗಳು ಪರೀಕ್ಷಾದಿನಗಳಂದು ಬೆಳಗ್ಗೆ ೮ ಗಂಟೆಯಿoದ ಸಂಜೆ ೩ ಗಂಟೆವರೆಗೂ ತೆರೆಯದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ಕ್ರಮವಹಿಸಲಾಗಿದೆ, ಪರೀಕ್ಷಾಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಬೆಳಗ್ಗೆ ೯ ಗಂಟೆಗೆ ಹಾಜರಾಗುವಂತೆ ಸೂಚಿಸಿದ ಅವರು, ಆಯಾ ದಿನದಂದು ಇರುವ ಪರೀಕ್ಷಾ ವಿಷಯದ ಶಿಕ್ಷಕರನ್ನು ಪರೀಕ್ಷೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೋಲಾರದ ನೂತನ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ ನಡೆಸಿದ್ದು, ಶಿಕ್ಷಕರು ಪ್ರಥಮ ದಿನದ ಕನ್ನಡ,ಇಂಗ್ಲೀಷ್,ಉರ್ದು ಪ್ರಥಮ ಭಾಷೆ ಪರೀಕ್ಷೆಗೆ ಡೆಸ್ಕ್ ಮೇಲೆ ನೊಂದಣಿ ಸಂಖ್ಯೆ ದಾಖಲಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಅಭಿರಕ್ಷಕಿ ರಾಧಮ್ಮ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಮಾರ್ಗಾಧಿಕಾರಿಗಳು ಬೆಳಗ್ಗೆ ೮ ಗಂಟೆಗೆ ತರುವುದರಿಂದ ಮೊದಲೇ ಹಾಜರಿದ್ದು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ, ಕೊಠಡಿಯಲ್ಲಿ ಪರೀಕ್ಷಾ ಕಾರ್ಯ ಹಾಗೂ ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತೆ ಎಲ್ಲಾ ಅಗತ್ಯ ಮುನ್ನಚ್ಚರಿಕೆ ವಹಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರಾದ ಭವಾನಿ, ಎಂ.ರಮೇಶ್,ಮoಜುಳಾ, ಎಂ.ವೇದಾ, ಸುರೇಶ್, ಬಿ.ಜಯಂತಿ, ಸಂಗೀತಾ ಅಂಗಡಿ, ಲಲಿತಾ ಕುಮಾರಿ, ಸೌಮ್ಯ, ಮಂಜುಳಾ,ನಿರ್ಮಲಮ್ಮ, ನಾರಾಯಣಸ್ವಾಮಿ, ಸುಷ್ಮಾ, ವೆಂಕಟೇಶ್, ಸುಬ್ರಮಣಿ,ಶ್ರೀನಿವಾಸಲು ಆನಂದ್ ಸೇರಿದಂತೆ ವಿವಿಧ ಶಾಲೆಗಳು ಶಿಕ್ಷಕರು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!