• Thu. May 16th, 2024

PLACE YOUR AD HERE AT LOWEST PRICE

ಕೋಲಾರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಸಿಎಂಆರ್ ಶ್ರೀನಾಥ್ ಹಾಗೂ ಎಂಎಲ್ಸಿ ಇಂಚರ ಗೋವಿಂದರಾಜು ಅವರು ನನ್ನನ್ನು ಕಡೆಗಣಿಸಿದ ಮೇಲೆಯೇ ಬೇರೆ ಪಕ್ಷದವರು ನನ್ನನ್ನು ಸಂಪರ್ಕ ಮಾಡಿದರೆ ಹೊರತು ಶಾಸಕ ರಮೇಶ್ ಕುಮಾರ್ ಸಂಪರ್ಕ ಮಾಡಿದ ಮೇಲೆ ನಾನು ಗೊಂದಲಕ್ಕೆ ಒಳಗಾಗಿಲ್ಲ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸುವ ಮೂಲಕ ಪಕ್ಷದಿಂದ ಹೊರ ಹೋಗುವ ಸುಳಿವು ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಯಾವುದೇ ಪಕ್ಷದಲ್ಲಿ ಸಮಸ್ಯೆ ಬಂದಾಗ ಬೇರೆ ಪಕ್ಷಗಳು ತಮ್ಮ ಪಕ್ಷ ಸಂಘಟನೆಗಾಗಿ ಈ ರೀತಿಯಲ್ಲಿ ಸಂಪರ್ಕ ಮಾಡುವುದು ಸಹಜ. ಸಮಸ್ಯೆಗಳು ಎಂಎಲ್ಸಿ ಗೋವಿಂದರಾಜು ಅವರು ಹುಟ್ಟು ಹಾಕಿದ ಮೇಲೆ ಕಾಂಗ್ರೆಸ್ಸಿನವರು ನನ್ನನ್ನು ಸಂಪರ್ಕ ಮಾಡಿದ್ದಾರೆ ಹೊರತು ಅವರು ಸಂಪರ್ಕ ಮಾಡಿದಕ್ಕೆ ನಾನು ಗೊಂದಲಕ್ಕೆ ಒಳಗಾಗಿದ್ದೇನೆ ಎಂಬ ಎಂಎಲ್‌ಸಿ ಗೋವಿಂದರಾಜು ಅವರ ಆರೋಪ ಅರ್ಥವಿಲ್ಲದ್ದು ಎಂದು ತಿಳಿಸಿದ್ದಾರೆ.

ಕೋಲಾರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರು ಶಾಸಕ ಶ್ರೀನಿವಾಸಗೌಡರು ಹಣ ಮತ್ತು ಎಂಎಲ್ಸಿ ಪದವಿಯ ಆಮಿಷಗಳಿಗೆ ಒಳಗಾಗಿದ್ದಾರೆ ಎನ್ನುವ ಮಾತನ್ನು ಹೇಳುತ್ತಾ ಕುರ್ಕಿ ರಾಜೇಶ್ವರಿ ಅವರು ಅ ರೀತಿಯಲ್ಲಿ ಮಾಡುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ ಶ್ರೀನಿವಾಸಗೌಡ ಅವರು ಪಕ್ಷ ಬಿಟ್ಟರಾ ಅಥವಾ ನೀವು ಎಲ್ಲಾ ಸೇರಿಕೊಂಡು ಪಕ್ಷವನ್ನು ಬಿಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸುವೆ ಎಂದಿದ್ದಾರೆ.

ಈಗ ನನ್ನ ಬಗ್ಗೆ ಶ್ರೀನಾಥ್ ಅವರು ಹೇಳಿರುವಂತೆ ನಾನು ಅವಕಾಶಕ್ಕಾಗಿ ಒಳಗಾಗುವ ವ್ಯಕ್ತಿಯಾಗಿದ್ದರೆ ೧೯ ವರ್ಷ ಪಕ್ಷ ಸಂಘಟಿಸಿಕೊಂಡು ಇರುತ್ತಿರಲಿಲ್ಲ, ಪಕ್ಷ ಅವಕಾಶ ಕೊಡದೇ ವಂಚಿಸಿದ್ದು ಇದೇ ಮೊದಲಲ್ಲ ೨೦೦೯ ರಲ್ಲಿ ಜಿಪಂ ಸ್ಪರ್ಧೆ ಮಾಡಲು ಹೇಳಿ ಬೇರೆಯವರಿಗೆ ಅವಕಾಶ ಕೊಟ್ಟಾಗಲೂ ಪಕ್ಷದಲ್ಲಿ ಮುಂದುವರಿದ ಕೆಲಸ ಮಾಡಿದ್ದೇನೆ ಎಂದರು.

೨೦೦೫ ರಿಂದ ೨೦೦೮ ರ ವರಗೆ ಪಕ್ಷ ಸಂಘಟನೆ ಮಾಡಿದ್ದೇನೆ ೨೦೦೯ ರಲ್ಲಿ ಶ್ರೀನಿವಾಸಗೌಡ ಪಕ್ಷಕ್ಕೆ ಬಂದಾಗಲೂ ೨೦೧೮ ರವರಗೂ ಪಕ್ಷ ಸಂಘಟನೆ ಮಾಡಿದ್ದೇನೆ ೨೦೧೧ರಲ್ಲಿ ಎಪಿಎಂಸಿ ನಿಂತಿದ್ದೇವೆ ೨೦೧೫ ಜಿಪಂ ಚುನಾವಣೆಯಲ್ಲಿ ಪಕ್ಷ ಹೇಳಿದಂತೆ ಚುನಾವಣೆಗಳನ್ನು ಎದುರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪಕ್ಷದ ವರಿಷ್ಠರ ಹೇಳಿದ ನಂತರವೇ ೨೦೨೩ ಎಂಎಲ್‌ಎ ಚುನಾವಣೆಯ ಅಭ್ಯರ್ಥಿಯಾಗಿ ಪಕ್ಷ ಸಂಘಟನೆ ಮಾಡಿದ್ದೇನೆ ಶ್ರೀನಾಥ್ ಅವರಿಗೆ ಪಕ್ಷದ ಅಭ್ಯರ್ಥಿಯಾಗಿ ವರಿಷ್ಠರು ಘೋಷಣೆ ಮಾಡಿದ ನಂತರವೂ ವರಿಷ್ಠರ ಮಾತನ್ನು ಗೌರವಿಸಿ ಪಕ್ಷದ ಸಭೆಗಳಲ್ಲಿ ಭಾಗವಹಿಸಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

 

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!