• Thu. Sep 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ವಿಧಾನಸಭಾ ಚುನಾವಣೆ ನಡೆಯುತ್ತಿರುವ ವೇಳೆ ಯುಕರನ್ನು ದುಶಚಟಗಳಿಗೆ ದೂಡಲಾಗುತ್ತಿದ್ದು, ಇದರಿಂದ ಬಡವರ ಮನೆಗಳಲ್ಲಿ ನೆಮ್ಮದಿ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿದ್ದು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕೆರೆಕೋಡಿ ಮಂಜುಳ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಈ ಬಗ್ಗೆ ದೂರು ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಾರ್ಡ ನಂ. 27 ಕೆರೆಕೋಡಿಯಲ್ಲಿ ಬಹುತೇಕ ಕುಟುಂಬಗಳು ಕೊಲಿಯಿಂದ ಜೀವನ ಮಾಡಿಕೊಂಡು ಬದುಕುತ್ತಿದ್ದಾರೆ.

ಇಲ್ಲಿನವರು ಶ್ರಮಿಕ ವರ್ಗದವರಾಗಿದ್ದು ಇಲ್ಲಿ ಒಳ್ಳೆಯ ಶಾಲೆ, ಲೈಬ್ರರಿ, ಸಮುದಾಯ ಭವನ, ಮಕ್ಕಳು ಅಟವಾಡಲು ಉದಾನ್ಯವನ ಇಲ್ಲ. ಜೊತೆಗೆ ಇನ್ನಿತರೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಪರಿಸ್ಥಿತಿ ಇದೆ.

ಈಗ ಚುನಾವಣೆ ಸಮಯವಾದ್ದರಿಂದ ಹಲವು ರಾಜಕೀಯ ಪಕ್ಷಗಳು ಮತದಾರರಿಗೆ ನಾನಾ ರೀತಿಯ ಆಸೆ ಆಮಿಷಗಳನ್ನು ಒಡ್ಡಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ. ಈ ವಿಚಾರವಾಗಿ ನಾವು ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ಈ ಮೊದಲೆ ತಂದಿದ್ದೇವೆ.

ಆದರೆ ಯಾವುದೇ ಪ್ರಯೂಜನವಾಗಿಲ್ಲ. ದಿನಾಂಕ:09-04-2023 ರಂದು ಕಾಂಗ್ರೇಸ್ ಪಕ್ಷದ ಮುಖಂಡರು ಕೆರೆಕೋಡಿ ವಾರ್ಡ್‌ಗೆ ಬಂದು ಯುವಕರು ಎಣ್ಣೆ ಪಾರ್ಟಿ ಮಾಡಲು 25,000 ಸಾವಿರ ರೂ ನೀಡಿದ್ದಾರೆ.

ಇದರಿಂದ ಕೆರೆಕೋಡಿ ವಾರ್ಡ್ ನಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು ಯುವಕರು ಕುಡಿದು ಬಂದು ಮನೆಗಳಲ್ಲಿ ಹೆಂಡತಿ ಮಕ್ಕಳ ಮೇಲೆ ವಿನಾಕಾರಣ ಗಲಾಟೆ ಮಾಡಿ ಹಲ್ಲೆಯನ್ನು ನಡೆಸಿದ್ದಾರೆ, ಇದರಿಂದ ಕುಟುಂಬಸ್ಥರ ಮನಶಾಂತಿ ನಾಶವಾಗಿದೆ.

ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಾದ ಶೃತಿ ರವರಿಗೆ ಮನವಿ ಮಾಡಿದ್ದು ಈ ಬಗ್ಗೆ ಅವರು ಮತ್ತು ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಬೇಕು ಎಂದರು. ಈ ವೇಳೆ ಕೆರೆಕೋಡಿಯ ಮಹಿಳೆಯರಿದ್ದರು.

Leave a Reply

Your email address will not be published. Required fields are marked *

You missed

error: Content is protected !!