• Sun. Apr 28th, 2024

PLACE YOUR AD HERE AT LOWEST PRICE

ಸಂಸದ ಸ್ಥಾನ ಅನರ್ಹತೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ, ದೇಶಕ್ಕಾಗಿ ತ್ಯಾಗ ಮಾಡಿದ ನೆಹರು, ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಮಗನಾಗಿ ಜನಹಿತಕ್ಕಾಗಿ ಬಿಜೆಪಿ ಹುನ್ನಾರವನ್ನು ಎದುರಿಸುವ ಸ್ಥೈರ್ಯ ಧೈರ್ಯ ಅವರಿಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು.

ಕೋಲಾರದ ಜೈಭಾರತ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಯಾವ ಊರಿನಲ್ಲಿ ಯಾವ ಭಾಷಣ ಮಾಡಿ ಅನರ್ಹಗೊಂಡರೂ ಅದೇ ಕೋಲಾರದಿಂದ ಹೋರಾಟ ಆರಂಭಿಸಿದ್ದಾರೆ,ಇದು ಅಂತ್ಯವಲ್ಲ,ಆರಂಭ, ಸರ್ವಜನಾಂಗದ ಶಾಂತಿಯ ತೋಟಕ್ಕಾಗಿ ೩೬೦೦ ಕಿ.ಮೀ ಭಾರತ್ ಜೋಡೋ ಪಾದಯಾತ್ರೆಯನ್ನು ಮಾಡಿದ ರಾಹುಲ್‌ಗಾಂಧಿ ಕಂಡರೆ ಬಿಜೆಪಿ ಹೆದರುತ್ತಿದೆಯೆಂದರು.

ತ್ಯಾಗಬಲಿದಾನಗಳ ಕಾಂಗ್ರೆಸ್ ಪಕ್ಷ ಸೋಲು ಗೆಲುವು ನಡುವೆ ನಿರಂತರವಾಗಿ ಹೋರಾಟ ಇರುತ್ತದೆ ಆದರೆ, ಬಡವರ ಪರವಾದ ದೇಶದ ಐಕ್ಯತೆ ವಿಚಾರದಲ್ಲಿ ತಮ್ಮ ಬದ್ಧತೆ ಬದಲಾವಣೆಯಾಗಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಬಿ.ವಿ.ಶ್ರೀನಿವಾಸ್‌ಮಾತನಾಡಿ, ರಾಹುಲ್ ಗಾಂಧಿ ಅನರ್ಹತೆಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಬಿಜೆಪಿ ಎಂದರೆ ಭ್ರಷ್ಟ ಜನನಾಯಕರ ಪಕ್ಷವಾಗಿದೆ, ನಂದಿನಿ ಕೆಚ್ಚಲಿಗೆ ಕೊಡಲಿ ಹಾಕುವ ಮೂಲಕ ಹಾಲು ಉತ್ಪಾದಕರ ಜೀವನದ ಮೇಲೆ ಬರೆ ಎಳೆಯುತ್ತಿದೆ, ೪೦ ಪರ್ಸೆಂಟ್ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು ಎಂದು ಕರೆನೀಡಿದರು.

ಚಿಂತಾಮಣಿ ಡಾ.ಸುಧಾಕರ್ ಮಾತನಾಡಿ, ಚಿನ್ನದ ನಾಡಿನಿಂದ ಇಡೀ ದೇಶ ರಾಹುಲ್ ಗಾಂಧಿ ಎಂಬ ಸಂದೇಶವನ್ನು ಚಿನ್ನದ ನೆಲದಿಂದ ಜೈಭಾರತ್ ಸಮಾವೇಶದ ಮೂಲಕ ರವಾನಿಸಲಾಗುತ್ತಿದೆಯೆಂದರು.

ಐತಿಹಾಸಿಕ ಭಾರತ ಜೋಡೋ ಕಾರ್ಯಕ್ರಮದ ನಂತರ ದೇಶದ ಜನರು ರಾಹುಲ್ ಗಾಂಧಿ ಮೇಲೆ ಇಟ್ಟಿರುವ ವಿಶ್ವಾಸ ದುಪ್ಪಟ್ಟಾಗಿದೆ, ಇದೇ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷದ ನಾಲ್ಕು ಗ್ಯಾರೆಂಟಿಯನ್ನು ಒಪ್ಪಿ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!