• Thu. May 2nd, 2024

PLACE YOUR AD HERE AT LOWEST PRICE

ವೈಜ್ಞಾನಿಕ ಯುಗದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಹೇಗೆ..? ಏಕೆ..? ಏನು..? ಎಂಬ ಪ್ರಶ್ನೆಗಳ ಚಿಂತನ-ಮಂಥನ ಮಾಡುವುದರ ಮೂಲಕ ನರಸಿಂಹಯ್ಯನವರ ಸಾಧನೆ ಕಾರ್ಯಗಳನ್ನು ಶಾಶ್ವತಗೊಳಿಸಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಅವರ ದೂರದೃಷ್ಟಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕೋಲಾರ ನಗರದ ಶಂಕರ ವಿದ್ಯಾಲಯದಲ್ಲಿ ಬುಧವಾರ ಜ್ಞಾನ ವಿಜ್ಞಾನ ಸಮಿತಿ ಏರ್ಪಡಿಸಿದ್ದ ನರಸಿಂಹಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕ ಮುಜಾಹಿದ್ ಪಾಷಾರಿಗೆ ಎಚ್.ನರಸಿಂಹಯ್ಯ ಪ್ರಶಸ್ತಿ ನೀಡಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳ ಜೊತೆಗೆ ಮೆಡಿಕಲ್, ಇಂಟರನೆಟ್, ಎಲೆಕ್ರ್ಟಾನಿಕ್ ಕೋರ್ಸ್‌ಗಳು ಆರಂಭವಾಗಿದ್ದು, ಕಲಾಕ್ಷೇತ್ರ, ಶಿಕ್ಷಣಕ್ಷೇತ್ರ ಮತ್ತಷ ಸಮಾಜದ ಪ್ರಗತಿಗೆ ಆದರ್ಶವಾಗಲು ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಂತ್ರಜ್ಞಾನ ಶಿಕ್ಷಣದ ಅರಿವು ಹೊಂದಿರಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಜಮಾದಾರ್ ಮಾತನಾಡಿ ನ್ಯಾಷನಲ್ ಕಾಲೇಜು ಆರಂಭಿಸಿ ವಿದ್ಯಾಭ್ಯಾಸಕ್ಕೆ ಮಹತ್ವದ ಕೊಡುಗೆ ನೀಡಿದ್ದ ಅವರ ಜೀವನದ ಹಾದಿ ಇಂದಿನ ಸಮಾಜ ಎಲ್ಲರಿಗೂ ಸೂರ್ಥಿಯಾಗಿದೆ ಎಂದರು.

ಜಿಲ್ಲಾ ಸಂಚಾಲಕ ಡಿ.ಎನ್ ಮುಕುಂದ ಮಾತನಾಡಿ, ವೈಜ್ಞಾನಿಕತೆ ಇಂದು ಅವಶ್ಯವಾಗಿದ್ದು, ಗ್ರಹಣಕಾಲದಲ್ಲೂ ಬಾಳೆಹಣ್ಣು ತಿಂದರೆ ಏನೋ ಆಗುತ್ತೆ ಮೂಢನಂಬಿಕೆಯ ಸರಳ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನದಲ್ಲಿ ವಿದ್ಯಾರ್ಥಿಗಳಿಗೆ ನರಸಿಂಹಯ್ಯ ಆದರ್ಶಗಳ ಬೋಧನೆಯಾಗಬೇಕಂದರು.

ಸಮಾರಂಭದಲ್ಲಿ ಜ್ಞಾನ ವಿಜ್ಞಾನ ಸಮಿತಿಯ ಮುಖಂಡರುಗಳಾದ ಎಸ್.ಸುರೇಶ್ ಕುಮಾರ್, ಕೆ.ವಿ ಜಗನ್ನಾಥ, ಮೋಹನಾಚಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!