• Sun. Jun 2nd, 2024

PLACE YOUR AD HERE AT LOWEST PRICE

ಶೋಕಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ ಕೆಜಿಎಫ್ ಗ್ಯಾಂಗ್ ಎಂದೇ ಖ್ಯಾತರಾಗಿದ್ದ ನಾಲ್ವರು ಆರೋಪಿಗಳನ್ನು ಹೊಸಕೋಟೆ ಉಪ ವಿಭಾಗದ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ, ಮೇರಿ ಬಂಧಿತರು. ಇವರಿಂದ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ, 3 ಕೆಜಿ ಬೆಳ್ಳಿ ಸೇರಿ 1.5 ಲಕ್ಷ ಹಣ ಜಪ್ತಿ ಮಾಡಲಾಗಿದೆ ಎಂದು ಪೋಲಿಸ್ ಅಧಿಕಾರಿ ಮಾಹಿತಿ ನೀಡಿರುವ ಬಗ್ಗೆ ವರಧಿಯಾಗಿದೆ.  

ಬಂಧಿತರು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್‌ ಮಾಡಿ, ಮಧ್ಯರಾತ್ರಿ ಮನೆಯಲ್ಲಿ ಲೈಟ್‌ ಹಾಕದೆ ಮನೆಯಲ್ಲಿರುವ ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗುತ್ತಿದ್ದರು.

ಬಂಧಿತರು ಆವಲಹಳ್ಳಿ ಸೇರಿದಂತೆ ಬೆಂಗಳೂರಿನ ಹಲವೆಡೆ ಕಳ್ಳತನ ಮಾಡುತ್ತಿದ್ದರು. ಆರೋಪಿಗಳಾದ ಸುನೀಲ್ ಮತ್ತು ಅರವಿಂದ್ ಇಬ್ಬರು ಸೇರಿ ಮನೆ ಕಳ್ಳತನ ಮಾಡಿದರೆ, ಇನ್ನುಳಿದ ಇಬ್ಬರು ಆರೋಪಿಗಳಾದ ನಂದಿನಿ ಮತ್ತು ಮೇರಿ ಎಂಬುವವರು ಚಿನ್ನಾಭರಣವನ್ನು ಅಂಗಡಿಯಲ್ಲಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು.

ಈ ನಾಲ್ವರು ಆರೋಪಿಗಳು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರು. ಚಿನ್ನವನ್ನು ಕದ್ದು ಬಂದ ಹಣದಲ್ಲಿ ಶೋಕಿ ಜೀವನ ನಡೆಸುತ್ತಿದ್ದರು. ಆವಲಹಳ್ಳಿ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವರೆಂದು ಹೇಳಲಾಗಿದೆ.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್
ಅನುಮತಿ ಇಲ್ಲದೆ ಕರ್ತವ್ಯದಲ್ಲಿರುವ ಸರ್ಕಾರಿ ಮಹಿಳಾ ಅಧಿಕಾರಿಯ ವಿಡಿಯೋ ಚಿತ್ರೀಕರಣ ಮಾಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಭೋವಿ ನೌಕರರ ಸಂಘದ ಜಿಲ್ಲಾ ಒಕ್ಕೂಟದಿಂದ ಆಗ್ರಹ

Leave a Reply

Your email address will not be published. Required fields are marked *

You missed

error: Content is protected !!