• Sat. Sep 21st, 2024

PLACE YOUR AD HERE AT LOWEST PRICE

ವಿಕಲಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ರಾಜೇಂದ್ರ, ಸರಳ ಆಚರಣೆ,ಕಷ್ಟದಲ್ಲಿರುವವರಿಗೆ ನೆರವಾಗುವುದರಿಂದ ಆತ್ಮತೃಪ್ತಿ

ಕೋಲಾರ: ಹುಟ್ಟು ಹಬ್ಬದ ನೆಪದಲ್ಲಿ ಮೋಜು ಮಸ್ತಿ ಮಾಡದೆ ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರೆ ಆತ್ಮತೃಪ್ತಿ ದೊರೆಯುತ್ತದೆಯೆಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಕೆ.ಎಸ್.ರಾಜೇಂದ್ರ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಅತಂರಗAಗಾ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಅವರು ಬುದ್ದಿಮಾಂದ್ಯ ಮಕ್ಕಳಿಗೆ ಸಿಹಿ ಊಟ ನೀಡಿ, ಜತೆಗೆ ಪಿಸಿ ಬಡಾವಣೆಯ ಮುಸ್ಸಂಜೆ ಮನೆಯಲ್ಲಿ ವೃದ್ದರಿಂದ ಆಶೀರ್ವಾದ ಪಡೆದು ಅವರ ೪೨ ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಾವು ಮಾಡುವ ಉತ್ತಮ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಿದ್ದು ನಮ್ಮನ್ನು ಉನ್ನತ ಸ್ಥಾನಗಳಿಗೆ ಕರೆದೊಯ್ಯುತ್ತದೆ ಎಂದು ತಿಳಿಸಿ, ಕೋಲಾರ ಜನತೆಗೆ ಬೆಂಗಳೂರು ನಗರದೇವತೆ ಅಣ್ಣಮ್ಮನ ಪೂಜೆಗೆ ಪ್ರತಿ ವರ್ಷ ನೆರವಾಗುವುದಾಗಿ ತಿಳಿಸಿದರು.
ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬವನ್ನು ಸಂಕಷ್ಟದಲ್ಲಿರುವವರೊ0ದಿಗೆ ಆಚರಿಸಿಕೊಂಡು ಅವರಿಗೆ ನೆರವಾಗುವ ಮೂಲಕ ಅವರ ಆಶೀರ್ವಾದ ಪಡೆಯಲು ಇಚ್ಚಿಸಿದ್ದೇನೆ, ಈ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿದ್ದೇನೆ ಎಂದರು.

ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ರಾಜೇಂದ್ರ ಪ್ರತಿ ವರ್ಷ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಬುದ್ದಿಮಾಂದ್ಯ ಮಕ್ಕಳೊಂದಿಗೆ ಆಚರಿಸಿಕೊಂಡು ಆತ್ಮತೃಪ್ತಿ ಹೊಂದುತ್ತಿದ್ದು,ಅವರು ಇನ್ನೂ ಹೆಚ್ಚಿನ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡು ಅಜಾತ ಶತ್ರುವಾಗಿ ಬೆಳೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಮಂಜುನಾಥ್,ಬಜರ0ಗದಳ ಜಿಲ್ಲಾ ಸಂಚಾಲಿಕ ಬಾಬು, ಚಿತ್ರನಟ ಶಬರೀಷ್, ಮಹೇಂದ್ರ, ದಚ್ಚು, ನವೀನ್ ಕಉಮಾರ್, ರಮೇಶ್‌ರಾಜ್ ಸೇರಿದಂತೆ ಅಭಿಮಾನಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!