• Mon. May 20th, 2024

PLACE YOUR AD HERE AT LOWEST PRICE

ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬೆರಳೆಣಿಯಷ್ಟು ಕನ್ನಡ ಶೋಗಳನ್ನು ಕೊಟ್ಟು 500ಕ್ಕೂ ಹೆಚ್ಚು ತಮಿಳು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಸಹಜವಾಗಿಯೇ ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಈಗಾಗಲೇ ಬೆಂಗಳೂರಿನಲ್ಲಿ ‘ಜೈಲರ್’ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಅಭಿಮಾನಿಗಳು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಇನ್ನು ಪಿವಿಆರ್‌ ಹಾಗೂ ಐನಾಕ್ಸ್ ಚೈನ್‌ನಲ್ಲಿ ಮೊದಲ ದಿನ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿದೆ. ಕನ್ನಡ ಯಾವುದೇ ಚಿತ್ರಕ್ಕೂ ಇರದಷ್ಟು ಟಿಕೆಟ್ ದರ ನಿಗದಿಪಡಿಸಿದ್ದಾರೆ. ಕೆಲವರು ಟಿಕೆಟ್ ದರ ಕೇಳಿಯೇ ಎರಡು ದಿನ ತಡವಾಗಿ ಸಿನಿಮಾ ನೋಡೋಣ ಎಂದು ಸುಮ್ಮನಾಗುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ‘ಜೈಲರ್’ ರಜನಿಕಾಂತ್ ಜೊತೆ ನರಸಿಂಹ ಎನ್ನುವ ಪಾತ್ರದಲ್ಲಿ ಕೆಲಹೊತ್ತು ಶಿವಣ್ಣ ಕಾಣಿಸಿಕೊಂಡಿದ್ದಾರೆ. ಸೆಂಚುರಿ ಸ್ಟಾರ್ ನಟಿಸಿದ್ದಾರೆ ಎನ್ನುವ ಕಾರಣಕ್ಕೂ ಸಿನಿಮಾ ಕರ್ನಾಟಕದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಆದರೆ ಕನ್ನಡ ಶೋಗಳ ಸಂಖ್ಯೆ ಕಮ್ಮಿ ಇರೋದು ಬೇಸರಕ್ಕೆ ಕಾರಣವಾಗಿದೆ.

ತಮಿಳಿನಲ್ಲೇ ‘ಜೈಲರ್’ ದರ್ಬಾರ್ ಕನ್ನಡದಲ್ಲಿ ಡಬ್ಬಿಂಗ್ ಬೇಕು ಎಂದು ಕೆಲ ವರ್ಷಗಳ ಹಿಂದೆ ಭಾರೀ ಹೋರಾಟ ನಡೆದಿತ್ತು. ಕರ್ನಾಟಕದಲ್ಲಿ ಈಗ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇದೆ. ಇತ್ತೀಚೆಗೆ ಕೆಲ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಲಾಗುತ್ತಿದೆ. ಆದರೆ ಶೋಗಳನ್ನು ಮಾತ್ರ ಹೆಚ್ಚು ಕೊಡುತ್ತಿಲ್ಲ. ಆಯಾ ಭಾಷೆಯಲ್ಲೇ ಸಿನಿಮಾಗಳನ್ನು ಇಲ್ಲಿ ಹೇರುವ ಪ್ರಯತ್ನ ನಡೀತಿದೆ. ‘ಜೈಲರ್’ ಚಿತ್ರದಲ್ಲೂ ಅದು ಪುನರಾವರ್ತನೆ ಆಗಿದೆ. ರಜನಿಕಾಂತ್, ಶಿವಣ್ಣ ನಟಿಸಿದ್ದರು ಹೆಚ್ಚು ಕನ್ನಡ ಶೋಗಳು ಸಿಕ್ಕಿಲ್ಲ.

ಸಂತೋಷ್‌ ಥಿಯೇಟರ್‌ನಲ್ಲಿ ತೆಲುಗು ಸದ್ಯ ಕನ್ನಡದ ಯಾವುದೇ ದೊಡ್ಡ ಸಿನಿಮಾ ಥಿಯೇಟರ್‌ಗಳಲ್ಲಿ ಇಲ್ಲ. ಇದು ‘ಜೈಲರ್’ ಚಿತ್ರಕ್ಕೆ ವರದಾನವಾಗಿದೆ. ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರದಿಂದ ಹಿಡಿದು ಎಲ್ಲಾ ಕಡೆ ಮುಂದಿನ ವಾರ ‘ಜೈಲರ್’ ಕಾರುಬಾರು ನಡೆಯಲಿದೆ. ಗಾಂಧೀನಗರದ ಸಂತೋಷ್ ಚಿತ್ರಮಂದಿರದಲ್ಲಿ ‘ಜೈಲರ್’ ತೆಲುಗು ವರ್ಷನ್ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಇನ್ನುಳಿದಂತೆ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ತಮಿಳು ವರ್ಷನ್ ಹಾಕಿದ್ದಾರೆ.

ಶಿವಣ್ಣ ಅಭಿಮಾನಿಗಳ ಬೇಸರ.

‘ಜೈಲರ್’ ಚಿತ್ರದಲ್ಲಿ ಶಿವಣ್ಣ ನಟಿಸಿದ್ದರೂ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರೂ ಈ ರೀತಿ ಕಡಿಮೆ ಶೋ ಕೊಟ್ಟಿರೋದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. “ಶಿವಣ್ಣ ಅಭಿಮಾನಿಗಳ ಕಡೆಯಿಂದ ನಿಮಗೊಂದು ಮನವಿ , ಬೇರೆ ಭಾಷೆ ಚಿತ್ರಗಳಲ್ಲಿ ನೀವು ನಟಿಸಿದ್ದು ನಮಗೆ ಇಷ್ಟವಿಲ್ಲ, ನೀವು ನಟಿಸಿದ ಮೇಲೆ ಆ ಚಿತ್ರ ಕರ್ನಾಟಕದಲ್ಲಿ ಕನ್ನಡದಲ್ಲಿ ಬರಬೇಕು.

ಆದರೆ ಈಗ ಬರುತ್ತಿರುವ ‘ಜೈಲರ್’ ಚಿತ್ರ ಕರ್ನಾಟಕದಲ್ಲಿ ತಮಿಳಿನಲ್ಲಿ ಒಂದು ಕನ್ನಡ ಚಿತ್ರಕ್ಕೆ ಸಿಗದಷ್ಟು ಶೋಸ್ ಕೊಟ್ಟಿದ್ದಾರೆ. ಇದರಿಂದ ಕನ್ನಡಕ್ಕೆ ಹಾನಿ, ಇದನ್ನು ಬಳಸಿಕೊಂಡು ನಿಮ್ಮನ್ನು ಟ್ರೋಲ್ ಮಾಡಲಾಗುತ್ತಿದೆ. ಇದು ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿದೆ, ಆ ಟ್ರೊಲ್ ಅನ್ನು ನಮಗೆ ನೋಡಲು ಆಗುತಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!