• Sat. May 4th, 2024

ಮತ ಪಡೆದು ಯಾಮಾರಿಸಿದವರಿಗೆ ತಕ್ಕ ಪಾಠ ಕಲಿಸಿ: ಸಿಎಂಆರ್‌ ಶ್ರೀನಾಥ್‌

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರನ್ನು ಸುಮಾರು ವರ್ಷಗಳಿಂದ ಯಾಮಾರಿಸಿ ಓಟು ಹಾಕಿಸಿಕೊಂಡ ಅಭಿವೃದ್ಧಿಗೆ ಒತ್ತು ನೀಡಲಿಲ್ಲ ಮುಂದಿನ ಚುನಾವಣೆಯಲ್ಲಿ ಅಂತಹವರಿಗೆ ತಕ್ಕ ಪಾಠವನ್ನು ಕ್ಷೇತ್ರದ ಮತದಾರರು ಕಲಿಸಬೇಕಾಗಿದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.

ಕೋಲಾರ ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ಜೆಡಿಎಸ್ ಪಕ್ಷದಿಂದ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಕ್ಷೇತ್ರ ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ ಕ್ಷೇತ್ರದ ಮತದಾರರನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡಿದ್ದಾರೆ ಹೊರತು ಯಾವುದೇ ಅಭಿವೃದ್ಧಿಗೆ ಒತ್ತು ನೀಡಲಿಲ್ಲ ಮುಂದಿನ ದಿನಗಳಲ್ಲಿ ಸ್ವಾಭಿಮಾನ ಕೋಲಾರವಾಗಿ ಉಳಿಸುವ ಮೂಲಕ ಪ್ರಮಾಣಿಕವಾಗಿ ಗೆದ್ದು ಅಭಿವೃದ್ಧಿಗೆ ಒತ್ತು ನೀಡುವ ವ್ಯಕ್ತಿಗೆ ಅವಕಾಶ ನೀಡಬೇಕಾಗಿದೆ ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರನ್ನು ಖರೀದಿ ಮಾಡಲು ಬಂದರೆ ನಾವು ಯಾವುದೇ ಕಾರಣಕ್ಕೂ ಖರೀದಿಗೆ ಇಲ್ಲ ಎಂಬ ಸಂದೇಶವನ್ನು ನಾವು ಎಲ್ಲರೂ ಒಗ್ಗಟ್ಟಿನಿಂದ ನೀಡಬೇಕಾಗಿದೆ ನಾನು ನಿಮ್ಮ ಮನೆಯ ಮಗನಾಗಿ ಸ್ಥಳೀಯವಾಗಿ ಬೆಳೆದ ವ್ಯಕ್ತಿ ಚುನಾವಣೆಯ ಒಂದು ದಿನ ಯೋಚನೆ ಮಾಡಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಮುಂದಿನ ಐದು ವರ್ಷಗಳ ಕಾಲ ನಾನು ನಿಮ್ಮ ಜವಾಬ್ದಾರಿ ತೆಗೆದುಕೊಂಡು ಪ್ರಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಜನ ಈಗಾಗಲೇ ಮನಸ್ಸು ಮಾಡಿದ್ದಾರೆ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಒಂದು ಅವಕಾಶ ನೀಡಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಬೇಕು ಅಂತ ಕೋಲಾರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಪಂಚರತ್ನ ಯೋಜನೆಗಳ ಜಾರಿಗಾಗಿ ಕೈ ಜೋಡಿಸಬೇಕು ಜೊತೆಗೆ ಕ್ಷೇತ್ರಕ್ಕೆ ಬೇಕಾದ ಅನುದಾನವನ್ನು ತರಲು ಸಾಧ್ಯವಾಗುತ್ತದೆ ನಿಮ್ಮ ಕುಟುಂಬದೊಂದಿಗೆ ಸಂಪೂರ್ಣವಾದ ಸಹಕಾರವನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂಆರ್ ಶ್ರೀನಾಥ್ ಅವರನ್ನು ಶಾಸಕರಾಗಿ ಮಾಡಬೇಕಾದ ಅವಶ್ಯಕತೆ ಇದೆ ಬೇರೆ ಪಕ್ಷದಲ್ಲಿ ಯಾರೋ ಹೊರಗಿನ ದೊಡ್ಡ ವ್ಯಕ್ತಿಗೆ ಅವಕಾಶ ನೀಡಿದರೂ ನಮ್ಮ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಆಗಿರುತ್ತಾರೆ ಹೊರಗಿನಿಂದ ಬಂದ ವ್ಯಕ್ತಿ ಕೈಗೆ ಸಿಗುವುದಿಲ್ಲ ಆದರೆ ಸಿಎಂಆರ್ ಶ್ರೀನಾಥ್ ಮಾತ್ರ ದಿನ ಬೆಳಗ್ಗೆ ನಿಮಗೆ ಸಿಗುವ ವ್ಯಕ್ತಿಯಾಗಿದ್ದಾರೆ ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ರಾಜ್ಯ ಅಧ್ಯಕ್ಷ ಕೂಡ ಅಲ್ಪಸಂಖ್ಯಾತ ಸಮುದಾಯದ ಸಿ.ಎಂ ಇಬ್ರಾಹಿಂ ವಹಿಸಲಾಗಿದೆ ಜೆಡಿಎಸ್‌ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಕೂಡ ಡಿಸಿಎಂ ಆಗಲಿದ್ದು ನಿಮ್ಮ ಬೆಂಬಲ ಜೆಡಿಎಸ್ ಪಕ್ಷಕ್ಕೆ ಇರಲಿ ಎಂದರು

ಈ ಸಂದರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಮುಖಂಡರಾದ ಅನ್ವರ್ ಪಾಷ, ಸುಹೇಲ್, ಮುಜೀಬ್, ಬಾಬಣ್ಣ, ಫರೀಧ್, ಖಾಜಾ, ಉಮರ್, ಅಬ್ದುಲ್, ಅರೀಫ್ ಉಲ್ಲಾ ಖಾನ್ ಮುಂತಾದವರು ಇದ್ದರು.

 

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:

ಇದನ್ನೂ ಓದಿ: ಜ.೭ ‘ಶಾಲೆಯತ್ತ ಸಮುದಾಯ’ ಶಾಲಾ ಅಭಿವೃದ್ದಿ ಹಾಗೂ ಪುನಶ್ಚೇತನ ಅಭಿಯಾನ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!