• Fri. Apr 26th, 2024

ಜ.೭ ‘ಶಾಲೆಯತ್ತ ಸಮುದಾಯ’ ಶಾಲಾ ಅಭಿವೃದ್ದಿ ಹಾಗೂ ಪುನಶ್ಚೇತನ ಅಭಿಯಾನ ಎಸ್‌ಡಿಎಂಸಿ,ಪೋಷಕರು,ಶಿಕ್ಷಣಪ್ರೇಮಿಗಳು ಭಾಗವಹಿಸಿ ಯಶಸ್ವಿಗೊಳಿಸಿ-ಬಿಇಒ ಕನ್ನಯ್ಯ

PLACE YOUR AD HERE AT LOWEST PRICE

ಸಮುದಾಯದ ಅವಿಭಾಜ್ಯ ಅಂಗವಾಗಿರುವ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ಶಾಲೆಯತ್ತ ಸಮುದಾಯ’ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದು, ಜ.೭ರ ಶನಿವಾರ ಅಥವಾ ಜ.೮ರ ಭಾನುವಾರ ಶಾಲಾ ಪುನಶ್ಚೇತನ ಅಭಿಯಾನವನ್ನು ನಡೆಸುತ್ತಿದ್ದು, ಎಸ್‌ಡಿಎಂಸಿ, ಪೋಷಕರು,ಹಳೆ ವಿದ್ಯಾರ್ಥಿಗಳು,ಶಿಕ್ಷಣ ಪ್ರೇಮಿಗಳೆಲ್ಲರೂ ಸೇರಿ ಯಶಸ್ವಿಗೊಳಿಸುವಂತೆ ಕೋಲಾರ ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಶಾಲೆಗಳಲ್ಲಿನ ಅಗತ್ಯ ಮೂಲಸೌಲಭ್ಯಗಳ ಕೊರತೆ, ಆಧುನಿಕತೆಯ ಸ್ಪರ್ಶ ನೀಡಲು ಅಗತ್ಯವಿರುವ ಸೌಲಭ್ಯಗಳನ್ನು ಸಮುದಾಯದ ನೆರವಿನಿಂದ ಪಡೆದುಕೊಳ್ಳಲು, ಈ ಅಭಿಯಾನ ಕಾರಣವಾಗಲಿ ಎಂದಿರುವ ಅವರು, ಈ ಅಭಿಯಾನದಲ್ಲಿ ಪೋಷಕರು, ಹಳೆವಿದ್ಯಾರ್ಥಿಗಳು, ಜನಪ್ರತಿನಿಗಳು, ಸರ್ಕಾರಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದ್ದಾರೆ.

ಶಾಲೆಯು ಸಮುದಾಯದ ಒಂದು ಪ್ರಮುಖ ಅಂಗವಾಗಿದ್ದು, ಮುಗ್ಧ ಮಕ್ಕಳನ್ನು ತಿದ್ದಿ ತೀಡಿ, ಒಳಿತು ಮತ್ತು ಕೆಡುಕುಗಳ ವ್ಯತ್ಯಾಸವನ್ನು ತಿಳಿಸುವ ಹಾಗೂ ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯವ ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡುವಂತಹ ಸಂಸ್ಥೆಯಾಗಿದೆ.

ಇಂತಹ ಸಂಸ್ಥೆಯಿಂದ ಬಂದ ಮಕ್ಕಳು ನಾಳೆ ಈ ದೇಶದ ಮಾನವ ಸಂಪನ್ಮೂಲವಾಗಿ ಮುಂದಿನ ಭವ್ಯ ಸಮಾಜ ನಿರ್ಮಾಣ ಮಾಡುವಂತಹ, ಉತ್ತಮ ನಾಗರೀಕರನ್ನು ನಿರ್ಮಿಸುವಂತಹ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಶಾಲೆಯು ಸಮುದಾಯದ ಒಂದು ಅವಿಭಾಜ್ಯ ಅಂಗವಾಗಿದ್ದು, ೬ ರಿಂದ ೧೮ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವ ಜವಾಬ್ದಾರಿ ಹೊಂದಿದೆ.

ಕೋಲಾರ ತಾಲೂಕಿನಲ್ಲಿ ಒಟ್ಟು
೩೭೧ ಪ್ರಾಥಮಿಕ ಶಾಲೆ

ಪ್ರಸ್ತುತ ಕೋಲಾರ ತಾಲೂಕಿನಲ್ಲಿ ೩೭೧ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ೨೬ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ೧೩೫೬ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳು ಕೊರತೆ ಇದ್ದು, ಈ ಇಲಾಖೆಯಿಂದ ಕಾಲಕಾಲಕ್ಕೆ ದುರಸ್ಥಿ ಮಾಡಲು ಕಷ್ಟ ಸಾಧ್ಯವಾಗುತ್ತಿದೆ.

ಈ ಹಿನ್ನಲೆಯಲ್ಲಿ ಸದರಿ ಅಭಿಯಾನದ ಮೂಲಕ ಶಾಲೆಗಳಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ, ಶಾಲೆಯಲ್ಲಿ ಮಳೆಯಿಂದ ಸುರಿಯತ್ತಿರುವ ಕೊಠಡಿಗಳ ಮೇಲ್ಛಾವಣಿ ದುರಸ್ಥಿ ಕಾರ್ಯ, ಕಿಟಕಿ ಬಾಗಿಲುಗಳು ಮತ್ತು ನೆಲಹಾಸು ದುರಸ್ಥಿ ಕಾರ್ಯ, ಶಾಲೆಗೆ ಸುಣ್ಣ ಬಣ್ಣ ಬಳಸುವುದರ ಮೂಲಕ ಶಾಲೆಯನ್ನು ಆಕರ್ಷಣೆಗೊಳಿಸುವುದು ಸೇರಿದಂತೆ ಅಗತ್ಯ ಕ್ರಮವಹಿಸಲು ಸಮುದಾಯದ ಗಮನಸೆಳೆಯಲು ಈ ಅಭಿಯಾನ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅಗತ್ಯ ಪೀಠೋಪಕರಣಗಳು ಮತ್ತು ಪಾಠೋಪಕರಣಗಳನ್ನು ಒದಗಿಸುವುದು, ಶಾಲೆಗೆ ಕ್ರೀಡಾ ಸಾಮಗ್ರಿಗಳು ಮತ್ತು ಗ್ರಂಥಾಲಯ ಪುಸ್ತಕಗಳು ಒದಗಿಸುವುದು, ಧ್ವನಿವರ್ಧಕ, ಸ್ಮಾರ್ಟ್ ಬೋರ್ಡ್ ಮತ್ತು ಹಸಿರು ಬೋರ್ಡ್ಗಳ ಒದಗಿಸುವುದು, ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಅಡುಗೆ ತಯಾರಿಕಾ ಪರಿಕರಗಳು ಒದಗಿಸುವುದು, ಅಗತ್ಯ ಲೇಖನ ಸಾಮಗ್ರಿಗಳು ಒದಗಿಸುವುದು, ವಿದ್ಯಾರ್ಥಿಗಳಿಗೆ ಪೋಷಕಾಂಶಗಳ ಹೆಚ್ಚಿಸುವ ಹಣ್ಣು ಮತ್ತು ತರಕಾರಿಗಳನ್ನುಒದಗಿಸುವುದು, ಕಲಿಕೆಗೆ(ಸ್ಮಾರ್ಟ್ ಕ್ಲಾಸ್) ಪೂರಕವಾದ ಕಂಪ್ಯೂಟರ್, ಟಿ.ವಿ ಪ್ರೊಜೆಕ್ಟರ್ ಒದಗಿಸುವುದು ಮತ್ತಿತರ ಅಭಿವೃದ್ದಿಗೆ ಪೂರಕವಾದ ನೆರವು ಸಮುದಾಯದಿಂದ ಹರಿದು ಬರಲು ಈ ಅಭಿಯಾನ ನೆರವಾಗಲಿ ಎಂದು ಆಶಿಸಿದ್ದಾರೆ.

ಈ ಸಂಬಂಧ ಈಗಾಗಲೇ ಕ್ಲಸ್ಟರ್ ಹಂತದಲ್ಲಿಮುಖ್ಯಶಿಕ್ಷಕರ ಸಭೆ ನಡೆಸಲಾಗಿದೆ, ಅದರಂತೆ ಜ.೭ರ ಶನಿವಾರ ಶಾಲಾ ಅವಯ ನಂತರ ಅಥವಾ ಸಮುದಾಯದ ಬೇಡಿಕೆಯಂತೆ ಜ.೮ ರ ಭಾನುವಾರ ಬೆಳಗ್ಗೆ ೧೦.೦೦ ಗಂಟೆಗೆ ಸಮುದಾಯವನ್ನು ಅಂದರೆ ಎಸ್.ಡಿ.ಎಂ.ಸಿ. ಪೋಷಕರು, ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು, ಜನಪ್ರತಿನಿಗಳು, ಶಿಕ್ಷಣ ಪ್ರೇಮಿಗಳು, ಸರ್ಕಾರಿ ನೌಕರರಾದಿಯಾಗಿ ಎಲ್ಲರೂ ಸೇರಿ ಈ ಸದಾಶಯವನ್ನು ಹೊಂದಿರುವ ಅಭಿಯಾನವನ್ನು ಯಶಸ್ವಿಗೊಳಿಸಲು ಬಿಇಒ ಕನ್ನಯ್ಯ ಕೋರಿದ್ದಾರೆ.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:

 

ಇದನ್ನೂ ಓದಿ: ಮಕ್ಕಳ ಸದೃಡತೆಗೆ ದೈಹಿಕ ಶಿಕ್ಷಣ ಅತ್ಯಗತ್ಯ, ಶಿಕ್ಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು – ಸಂಸದ ಮುನಿಸ್ವಾಮಿ ಕರೆ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!