• Fri. Apr 26th, 2024

ಸೀಮಾ ಆಯೋಗದಿಂದ ಜಿಪಂ ತಾಪಂ ಕ್ಷೇತ್ರಗಳ ಪ್ರಕಟ ಕೋಲಾರ ೨೯ ಜಿಪಂ ಕ್ಷೇತ್ರಗಳು, ೧೦೭ ತಾಪಂ ಕ್ಷೇತ್ರಗಳು

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಆರು ತಾಲೂಕುಗಳಿಂದ ೨೯ ಜಿಪಂ ಕ್ಷೇತ್ರಗಳನ್ನು ಮತ್ತು ೧೦೭ ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಪ್ರಕಟಿಸಿದೆ.

ದಿನಾಂಕ ೨.೧.೨೦೨೩ ರಂದು ಗೆಜೆಟಿಯರ್‌ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್‌ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ.

ಕೋಲಾರ ಜಿಲ್ಲೆಯ ಕೆಜಿಎ-ನಿಂದ ೩, ಬಂಗಾರಪೇಟೆ ೪, ಶ್ರೀನಿವಾಸಪುರ ೫, ಮಾಲೂರು ೫, ಮುಳಬಾಗಿಲು ೬, ಕೋಲಾರ ೬ ಸಂಖ್ಯೆಯ ಒಟ್ಟು ೨೯ ಜಿಪಂ ಕ್ಷೇತ್ರಗಳು ಮತ್ತು ಕೆಜಿಎಫ್‌ ನಿಂದ ೧೨, ಬಂಗಾರಪೇಟೆಯ ೧೬, ಶ್ರೀನಿವಾಸಪುರದ ೧೮, ಮಾಲೂರಿನ ೨೦, ಮುಳಬಾಗಿಲಿನ ೨೦ ಮತ್ತು ಕೋಲಾರದ ೨೦ ತಾಪಂ ಕ್ಷೇತ್ರಗಳು ಸೇರಿದಂತೆ ಒಟ್ಟು ೧೦೭ ತಾಪಂ ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸಿದೆ.

ಜಿಪಂ ಕ್ಷೇತ್ರಗಳು
ಕೋಲಾರದಿಂದ ಹುತ್ತೂರು, ಹೋಳೂರು, ಸುಗಟೂರು, ಕ್ಯಾಲನೂರು, ನರಸಾಪುರ, ವಕ್ಕಲೇರಿ, ಮಾಲೂರಿನಿಂದ ತೊರ್ನಹಳ್ಳಿ, ಕುಡಿಯನೂರು, ಲಕ್ಕೂರು, ಮಾಸ್ತಿ, ಟೇಕಲ್, ಬಂಗಾರಪೇಟೆಯಿಂದ ಚಿಕ್ಕಅಂಕಂಡಹಳ್ಳಿ, ದೊಡ್ಡೂರುಕರಪನಹಳ್ಳಿ, ಬೂದಿಕೋಟೆ, ಕಾಮಸಮುದ್ರ, ಕೆಜಿಎ-ನಿಂದ ಪಾರಾಂಡಹಳ್ಳಿ, ಕ್ಯಾಸಂಬಳ್ಳಿ, ಬೇತಮಂಗಲ, ಮುಳಬಾಗಿಲಿನಿಂದ ಆವಣಿ, ತಾಯಲೂರು, ಆಲಂಗೂರು, ನಂಗಲಿ, ಬೈರಕೂರು, ದುಗ್ಗಸಂದ್ರ, ಶ್ರೀನಿವಾಸಪುರದಿಂದ ಯಲ್ದೂರು, ದಳಸನೂರು, ರೋಣೂರು, ರಾಯಲ್ಪಾಡು, ಗೌನಿಪಲ್ಲಿ ಜಿಪಂ ಕ್ಷೇತ್ರಗಳಿರುತ್ತವೆ.

ತಾಪಂ ಕ್ಷೇತ್ರಗಳು

ಕೋಲಾರ ತಾಲೂಕಿನಲ್ಲಿ ಹರಟಿ, ಹುತ್ತೂರು, ವಡಗೂರು, ಮಣಿಘಟ್ಟ, ಹೋಳೂರು, ಮುದುವಾಡಿ, ಆರಹಳ್ಳಿ, ಸುಗಟೂರು, ತೊಟ್ಲಿ, ಮದ್ದೇರಿ, ಬೀಚಗೊಂಡನಹಳ್ಳಿ, ಕ್ಯಾಲನೂರು, ರಾಜಕಲ್ಲಹಳ್ಳಿ, ಸೂಲೂರು, ಬೆಳ್ಳೂರು, ನರಸಾಪುರ, ಅರಾಭಿಕೊತ್ತನೂರು, ಕೊಂಡರಾಜನಹಳ್ಳಿ, ಮುದುವತ್ತಿ, ವಕ್ಕಲೇರಿ ತಾಪಂ ಕ್ಷೇತ್ರ.

ಮಾಲೂರು ತಾಲೂಕಿನಲ್ಲಿ ತೊರ್ನಹಳ್ಳಿ, ಶಿವಾರಪಟ್ಟಣ, ದೊಡ್ಡಶಿವಾರ, ಸೊಣ್ಣಹಳ್ಳಿ, ಅರಳೇರಿ, ಕುಡಿಯನೂರು, ಯಶವಂತಪುರ, ಹುಲಿಮಂಗಲ ಹೊಸಕೋಟೆ, ಲಕ್ಕೂರು, ಜಯಮಂಗಲ, ಡಿ.ಎನ್.ದೊಡ್ಡಿ, ಮಾಸ್ತಿ, ದೊಡ್ಡಕಲ್ಲಹಳ್ಳಿ, ಸುಗ್ಗೊಂಡಹಳ್ಳಿ, ದಿನ್ನಹಳ್ಳಿ, ನೂಟವೆ, ಹುಳದೇನಹಳ್ಳಿ, ಟೇಕಲ್ ಹುಣಸೀಕೋಟೆ ತಾಪಂ ಕ್ಷೇತ್ರಗಳು.

ಬಂಗಾರಪೇಟೆ ತಾಲೂಕಿನಲ್ಲಿ ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ, ಮಾವಹಳ್ಳಿ, ದೊಡ್ಡೂರು ಕರಪನಹಳ್ಳಿ, ಚಿನ್ನಕೋಟೆ, ಬೆಂಗನೂರು, ದೊಡ್ಡವಲಗಮಾದಿ, ಹುಲಿಬೆಲೆ, ಬೂದಿಕೋಟೆ, ಯಳೇಸಂದ್ರ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ಕಾಮಸಮುದ್ರ, ಕೇತಗಾನಹಳ್ಳಿತಾಪಂ ಕ್ಷೇತ್ರಗಳು.

ಕೆಜಿಎಫ್ ತಾಲೂಕಿನಿಂದ ಕಮ್ಮಸಂದ್ರ, ಪಾರಾಂಡಹಳ್ಳಿ, ಮಾರಿಕುಪ್ಪ, ಕೆಂಪಾಪುರ, ಕ್ಯಾಸಂಬಳ್ಳಿ, ಪೀಲವಾರ, ರಾಮಸಾಗರ, ವೆಂಗಸಂದ್ರ, ಸುಂದರಪಾಳ್ಯ, ಹಂಗಳ, ಬೇತಮಂಗಲ, ಟಿ.ಗೊಲ್ಲಹಳ್ಳಿ ತಾಪಂ ಕ್ಷೇತ್ರಗಳು.

ಮುಳಬಾಗಿಲು ತಾಲೂಕಿನಿಂದ ಬಲ್ಲ, ಆವಣಿ, ದೇವರಾಯಸಮುದ್ರ, ಕನ್ನಸಂದ್ರ, ಯಳಚೇಪಲ್ಲಿ, ತಾಯಲೂರು, ಸೊನ್ನವಾಡಿ, ಪದ್ಮಘಟ್ಟ, ಆಲಂಗೂರು, ಗುಮ್ಮಕಲ್, ಎನ್.ಚಮಕಲಹಳ್ಳಿ, ನಂಗಲಿ, ಮುಷ್ಠೂರು, ಹೆಬ್ಬಣಿ, ಬೈರಕೂರು, ಅಂಬ್ಲಿಕಲ್, ಗುಡಿಪಲ್ಲಿ, ಎಚ್.ಗೊಲ್ಲಹಳ್ಳಿ, ಆಗರ, ದುಗ್ಗಸಂದ್ರ, ಉತ್ತನೂರು ತಾಪಂ ಕ್ಷೇತ್ರಗಳು.

ಶ್ರೀನಿವಾಸಪುರ ತಾಲೂಕಿನಿಂದ ಸೋಮಯಾಜಲಪಲ್ಲಿ, ಮುತ್ತಕಪಲ್ಲಿ, ಯಲ್ದೂರು, ಲಕ್ಷ್ಮೀಸಾಗರ, ಚಲ್ದಿಗಾನಹಳ್ಳಿ, ದಳಸನೂರು, ಜೆ.ತಿಮ್ಮಸಂದ್ರ, ರೋಣೂರು, ಹೊದಲಿ, ತಾಡಿಗೋಳ್, ಕೋಡಿಪಲ್ಲಿ, ನೆಲವೆಂಕಿ, ಪುಲಗೂರಕೋಟೆ, ಗೌಡತಾತನಗಡ್ಡ, ರಾಯಲ್ಪಾಡು, ಅಡ್ಡಗಲ್, ಕೂರಿಗೇಪಲ್ಲಿ, ಗೌನಿಪಲ್ಲಿ ತಾಪಂ ಕ್ಷೇತ್ರಗಳಿರುತ್ತವೆ.

ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪರಂಬರಿಸಬಹುದಾಗಿದೆ ಎಂದು ಸೀಮಾ ಆಯೋಗದ ನಿರ್ದೇಶಕ ಕೆ.ಆರ್.ರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ, ಹಂಚಿ, ಪ್ರೋತ್ಸಾಹಿಸಿ:

 

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶವಿದ್ದು ಅರ್ಜಿ ಸಲ್ಲಿಸಿ- ಜಿಲ್ಲಾಧಿಕಾರಿ ವೆಂಕಟ್ ರಾಜಾ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!