• Mon. May 20th, 2024

ಕ್ಲಾಕ್ ಟವರ್‌ನಲ್ಲಿ ತಲ್ವಾರ್ ಹೆಬ್ಬಾಗಿಲು ನಿರ್ಮಿಸಿದ ಐವರು ಆರೋಪಿಗಳ ವಿರುದ್ಧ ಹಾಗೂ ಕುದುರೆ ಸವಾರಿ ಮಾಡಿ ಕತ್ತಿ ಜಳಪಿಸಿದ ವ್ಯಕ್ತಿಯ ವಿರುದ್ಧಎರಡು ಪ್ರತ್ಯೇಕ ಎಫ್‌ಐಆರ್ ದಾಖಲು

PLACE YOUR AD HERE AT LOWEST PRICE

ಕೋಲಾರ,ಸೆ.೨೯ : ಕ್ಲಾಕ್ ಟವರ್‌ನಲ್ಲಿ ತಲ್ವಾರ್ ಹೆಬ್ಬಾಗಿಲು ನಿರ್ಮಿಸಿದ ಐವರು ಆರೋಪಿಗಳ ವಿರುದ್ಧ ಹಾಗೂ ಕುದುರೆ ಸವಾರಿ ಮಾಡಿ ಕತ್ತಿ ಜಳಪಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋಲಾರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಲಾಗಿದೆ.

ಸೆ.೨೮ರ ಈದ್ ಮಿಲಾದ್ ಹಬ್ಬದ ಆಚರಣೆಯ ವೇಳೆ ಕ್ಲಾಕ್ ಟವರ್ ಬಳಿ ಯಾವುದೇ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕಬ್ಬಿಣದ ಪೈಪುಗಳಿಂದ ಹೆಬ್ಬಾಗಿಲು ನಿರ್ಮಿಸಿ ಅದರ ಮೇಲೆ ಸುಮಾರು ೧೫ ಅಡಿಯ ಹಾಗೂ ೨೦೦ ಕೆಜಿಯ ಸ್ಟೀಲ್ ಖಡ್ಗದ ಆಕೃತಿಯನ್ನು ಪ್ರತಿಷ್ಠಾಪಿಸಿ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಉಂಟಾಗಲು ಕಾರಣರಾದ ಐವರ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಮೊ.ಸಂ. ೧೮೨/೨೦೨೩ ಕಲಂ ೨೯೦,೩೪ ಐಪಿಸಿ ಹಾಗೂ ಕಲಂ೩, ಕರ್ನಾಟಕ ಓಪನ್ ಪ್ಲೇಸೆಸ್ ಪ್ರಿವೆನ್ಷನ್ ಆಫ್ ಡಿಸ್ಫಿರ‍್ಮೆಂಟ್ ಆಕ್ಟ್ ೧೯೮೧ ರಂತೆ ಪ್ರಕರಣ ದಾಖಲಿಸಿದೆ.

ಆರೋಪಿತರಾದ ಅಸ್ಲಾಂ ಪಾಷಾ. ಮನ್ಸೂರ್ ಅಲಿ, ಚಾಂದ್ ಪಾಷಾ, ಸಾಧಿಕ್ ಪಾಷಾ, ಮಹಮದ್ ಬಿಲಾಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿರುತ್ತದೆ.

ಹಾಗೆಯೇ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಹರಿತವಾದ ಕತ್ತಿ ಹಿಡಿದು ಕುದುರೆ ಸವಾರಿ ಮಾಡುತ್ತಾ ಕತ್ತಿ ಜಳಪಿಸುತ್ತಾ ಅಪಾಯಕಾರಿ ರೀತಿಯಲ್ಲಿ ವರ್ತಿಸಿದ ಸಗೀರ್ ಎಂಬುವವರ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಮೊ.ಸಂ.೧೮೩/೨೦೨೩ ಕಲಂ೨೯೦ ಐಪಿಸಿ ಮತ್ತು ಕಲಂ ೨೫ ಮತ್ತು ೭ ಆರ್ಮ್ಸ್ ಆಕ್ಟ್ç ರಡಿ ಕೇಸು ದಾಖಲಿಸಿ ಕ್ರಮ ಕೈಗೊಂಡಿರುತ್ತೆ ಎಂದು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ್ ರವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!