• Tue. May 14th, 2024

PLACE YOUR AD HERE AT LOWEST PRICE

ಬೆಂಗಳೂರು : ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಕಾಂಗ್ರೆಸ್ ಅಸ್ತ್ರ ಪ್ರಯೋಗಿಸುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್​ ಶಾಸಕರು, ನಾಯಕರುಗಳಿಗೆ ಗಾಳ ಹಾಕಿದೆ. ಈ ಮೊದಲು ಬಿಜೆಪಿ ಶಾಸಕರಾದ ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಸೇರಿದಂತೆ ಹಲವು ನಾಯಕರಿಗೆ ಗಾಳ ಹಾಕಿತ್ತು. ಇದೀಗ ಆಪರೇಷನ್ ಹಸ್ತ ಜೆಡಿಎಸ್​ನತ್ತ ತಿರುಗಿದೆ. ತುರುವೇಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ ಎಂ.ಟಿ. ಕೃಷ್ಣಪ್ಪ ಅವರಿಗೆ ಕಾಂಗ್ರೆಸ್​ ಸೇರುವಂತೆ ಆಹ್ವಾನ ಕೊಡಲಾಗಿದೆ. ಈ ಬಗ್ಗೆ ಸ್ವತಃ ಶಾಸಕ ಕೃಷ್ಣಪ್ಪ ಅವರೇ ಇದೀಗ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿರುವ ಎಂ.ಟಿ. ಕೃಷ್ಣಪ್ಪ ಅವರು, ಕಾಂಗ್ರೆಸ್ ಪಕ್ಷದಿಂದ ನನಗೂ ಆಹ್ವಾನ ಬಂದಿದ್ದು ನಿಜ. ಆದ್ರೆ, ಕಾಂಗ್ರೆಸ್ ಗೆ ಏಕೆ ಹೋಗೋಣ? ಹೋಗುವಂತದ್ದು ಏನು ಇದೆ ಹೇಳಿ? ಕಾಂಗ್ರೆಸ್ ನವರೆ 136ಜನ ಇದ್ದು, ಓವರ್ ಲೋಡ್ ಆಗಿದೆ. ನಾವು ಎಲ್ಲಿ ಹೋಗಿ ಕುತಿಕೊಳ್ಳುವುದು ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ಆಹ್ವಾನವನ್ನು ನಿರಾಕರಿಸಿದ್ದಾರೆ.

ರಾಜ್ಯ ಕಾಂಗ್ರೆಸ್​​ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಮುಳುಗಿ ಹೋಗಿದೆ. ಒಂದು‌ ಕಡೆ ವರ್ಗಾವಣೆ ದಂಧೆ, ಮತ್ತೊಂದು ಕಡೆ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಕಿಡಿಕಾರಿದ ಕೃಷ್ಣಪ್ಪ, ಕೇಳಿದ ಎಲ್ಲಾ ಕೆಲಸವನ್ನು ಡಿ.ಕೆ.ಶಿವಕುಮಾರ್​​ ಮಾಡಿಕೊಡುತ್ತಾರೆ. ವಿಧಾನಸೌದದಲ್ಲಿ ಡಿಸಿಎಂ ಡಿಕೆ ಚೇಂಬರ್​​ಗೆ ಹೋಗಿ ಮಾತಾಡ್ತೇನೆ. ಕಾಂಗ್ರೆಸ್​ಗೆ ಹೋಗುವಂತಹದ್ದು ಏನಿದೆ ಹೇಳಿ. ಕಾಂಗ್ರೆಸ್​ನಲ್ಲೇ 136 ಶಾಸಕರಿದ್ದು ಓವರ್​ ಲೋಡ್​ ಆಗಿ ಬಿಟ್ಟಿದೆ. ಸರ್ಕಾರ ಬಿದ್ದು ಹೋಗಲ್ಲ. ಬದಲಿಗೆ ಪಂಚರ್ ಆಗಿ ಮೂಲೆ‌ಯಲ್ಲಿ ನಿಂತಿಕೊಳ್ಳುತ್ತೆ ಎಂದು ಲೇವಡಿ ಮಾಡಿದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!