• Wed. May 15th, 2024

PLACE YOUR AD HERE AT LOWEST PRICE

ಬಂಗಾರಪೇಟೆ.ರಾಮಾಯಣ ಸೃಷ್ಟಿಕರ್ತ ವಾಲ್ಮೀಕಿ ಮಹರ್ಷಿಗಳು ಪರಿವರ್ತನೆಯ ಹರಿಕಾರರು, ಅತ್ಯಂತ ಶ್ರೇಷ್ಟ ಮಹರ್ಷಿಗಳು ಹಾಗೂ ಕವಿಗಳಾಗಿದ್ದು ಅವರ ಆದರ್ಶ ತತ್ವಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆ ಪಾಲಿಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಸಂಘದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಲ್ಮೀಕಿ ಎಂದರೆ ಯಾವತ್ತೂ ಅದು ಕೇವಲ ಒಂದು ಹೆಸರೆನಿಸದೆ ಭರತ ಭೂಮಿಯ ಸುಸಂಸ್ಕೃತಿಯ ಭವ್ಯ ಸಂಪತ್ತು ಎನಿಸುತ್ತದೆ, ವಾಲ್ಮೀಕಿ ಮಹರ್ಷಿಗಳು ಮಹಾಕಾವ್ಯವನ್ನಷ್ಟೇ ಬರೆಯಲಿಲ್ಲ ಅವರೇ ಒಂದು ಮಹಾಕಾವ್ಯವಾಗಿ ಈ ನೆಲದ ಸಂಸ್ಕೃತಿಯಲ್ಲಿ ನೆಲೆಸಿದ್ದಾರೆ.

ವಾಲ್ಮೀಕಿ ರಾಮಾಯಣ ಜಗತ್ತಿನ ಶ್ರೇಷ್ಟ ೧೦ ಗ್ರಂಥಗಳಲ್ಲಿ ಒಂದಾಗಿದೆ. ರಾಮಾಯಣ ಇಡೀ ಭಾರತ ದೇಶದ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ ಎಲ್ಲರ ಆದರ್ಶವಾಗಿದೆ ಎಂದ ಅವರು ಜೀವನದ ಪಾಠ ಕಲಿಯುವಂತಾಗಿದೆ ಎಂದರು. ಮಹರ್ಷಿ ವಾಲ್ಮೀಕಿಗಳು ಪರಿವರ್ತನೆಯ ಹರಿಕಾರರು ಮನುಷ್ಯನಲ್ಲಿ ಪರಿವರ್ತನೆಯಾದರೆ ದೈವತ್ವದ ಹಂತಕ್ಕೂ ಮುಟ್ಟುಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ವಾಲ್ಮೀಕಿ ಅವರ ಕುಲ ಅತ್ಯಂತ ದೊಡ್ಡಕುಲ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇದೆ. ಈ ಕುಲ ತನ್ನ ಸ್ವಾಭಿಮಾನದ ಬದುಕನ್ನು ಕಾಯಕ ಮಾಡುವುದನ್ನು ರೂಢಿಸಿಕೊಂಡಿದೆ. ಪಟ್ಟಣದಲ್ಲಿ ಎಲ್ಲಾ ಸಮುದಾಯಗಳಿಗೆ ಭವನ ನಿರ್ಮಾಣ ಮಾಡಬಕೆಂಬುದು ನನ್ನ ಕನಸಾಗಿತ್ತು, ಅದರಂತೆ ಪ್ರಥಮ ಬಾರಿಗೆ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಿ ಇಂದು ಅದರಲ್ಲಿಯೇ ವಾಲ್ಮೀಕಿ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ತಹಸೀಲ್ದಾರ್ ಯು.ರಶ್ಮಿ ತಾಪಂ ಇಒ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ಶಿವಾರೆಡ್ಡಿ, ಭೂ ಬ್ಯಾಂಕ್ ಅಧ್ಯಕ್ಷ ಹೆಚ್.ಕೆ.ನಾರಾಯಣಸ್ವಾಮಿ, ವಾಲ್ಮೀಕಿ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಬಿಇಒ ಸುಕನ್ಯ, ಸಿಡಿಪಿಒ ಮುನಿರಾಜು, ಚಿಕ್ಕಅಂಕಂಡಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಅ.ನಾ.ಹರೀಶ್, ಕೃಷಿ ಅಧಿಕಾರಿ ಪ್ರತಿಮಾ, ಶಿಕ್ಷಕ ಎಲ್.ರಾಜಪ್ಪ ಮತ್ತಿತರರು ಇದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!