• Thu. Oct 24th, 2024

ಮುಳಬಾಗಿಲು

  • Home
  • ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ.

ಕೋಲಾರ:ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್,ಮಾಸಾಶನ ಹೆಚ್ಚಳ ಸೇರಿದಂತೆ ಎಲ್ಲಾ ಬೇಡಿಕೆಗಳ ಈಡೇರಿಕೆ ಜತೆಗೆ ಪತ್ರಕರ್ತರ ಒಳಿತಿಗಾಗಿ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ…

ಬೂದಿಕೋಟೆ ವೃತ್ತದ ಬಳಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಮ್‌ಗೆ:ಕೊನೆ ಇಲ್ಲವೆ?

ಬಂಗಾರಪೇಟೆ:ಪಟ್ಟಣದ ಬೂದಿಕೋಟೆ ವೃತ್ತದ ಬಳಿಯಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಮ್‌ಗೆ ಮುಕ್ತಿಯಿಲ್ಲವೆ ಎಂದು ವಾಹನ ಸವಾರರು ಜನಪ್ರತಿನಿಧಿಗಳನ್ನು ಶಪಿಸಿಕೊಂಡೇ ಸಂಚರಿಸುವಂತಾಗಿದೆ. ಪಟ್ಟಣದ ಬೂದಿಕೋಟೆ ವೃತ್ತದ ಬಳಿ ಈ ಹಿಂದೆ ರೈಲ್ವೆ ಗೇಟ್ ಅಳವಡಿಸಲಾಗಿತ್ತು. ಅದು ರೈಲು…

ಜಾತ್ಯತೀತ ರಾಷ್ಟ್ರದಲ್ಲಿ ಮರ್ಯಾದೆಗೇಡು ಹತ್ಯೆ ಖಂಡನೀಯ:ವಿ. ಗೀತ.

ಬಂಗಾರಪೇಟೆ:ನಾಗರಿಕತೆ ಬೆಳೆದಂತೆ ಜನರಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು ಜಾತಿ ಹೆಸರಿನಲ್ಲಿ ಪರಸ್ಪರ ದ್ವೇಷ, ಆಸೂಯೆ, ವೈಮನಸ್ಸು ಉಂಟಾಗಿ ನಿರಂತರವಾಗಿ ಮರ್ಯಾದೆಗೇಡು  ಹತ್ಯೆಗಳಂತಹ ಪ್ರಕರಣಗಳು ನಡೆಯುತ್ತಿದೆ. ಇದನ್ನು ತಡೆಗಟ್ಟಲು ಪ್ರತ್ಯೇಕವಾದ ಕಾನೂನು ಜಾರಿ ಮಾಡಬೇಕು ಎಂದು ಜನವಾದಿ ಮಹಿಳಾ ಸಂಘದ ರಾಜ್ಯ ಮುಖಂಡರಾದ…

ಅಣ್ಣಾಮಲೈ ಕುರಿತ ರೇಣುಕಾಚಾರ್ಯ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸದೆ ಜಾರಿಕೊಂಡ ಸಂಸದ ಮುನಿಸ್ವಾಮಿ

ಅಣ್ಣಾಮಲೈ ಗ್ರಾಮ ಪಂಚಾಯ್ತಿ ಚುನಾವಣೆ ಗೆಲ್ಲದಿದ್ದರೂ ರಾಜ್ಯದ ಚುನಾವಣಾ ಉಸ್ತುವಾರಿ ಹೊತ್ತುಕೊಂಡಿದ್ದರೆಂಬ ರೇಣುಕಾಚಾರ್ಯ ಪ್ರಶ್ನೆಗೆ ಸಂಸದ ಮುನಿಸ್ವಾಮಿ ಉತ್ತರಿಸಿದೆ ದಿಢೀರ್ ಮಾತು ಸ್ಥಗಿತಗೊಳಿಸಿ ಜಾರಿಕೊಂಡರು. ಕೋಲಾರ ನಗರದಲ್ಲಿ ಸುದ್ದಿಗಾರರೊಂದಿಗೆ ಉತ್ಸಾಹದಿಂದಲೇ ಮಾತನಾಡಿ ರಾಜ್ಯ ಸರಕಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದ ಸಂಸದರಿಂದ ತಮ್ಮದೇ…

ಕೆಜಿಎಫ್ ಜಿಲ್ಲಾ ಎಸ್.ಪಿಯಾಗಿ ಶಾಂತರಾಜುರನ್ನು ನೇಮಿಸಿದ ರಾಜ್ಯ ಸರ್ಕಾರ.

ಕೆಜಿಎಫ್: ಕೆಜಿಎಫ್ ಜಿಲ್ಲಾ ವಿಶೇಷ ಪೊಲೀಸ್ ಜಿಲ್ಲಾ ಎಸ್.ಪಿಯನ್ನಾಗಿ ಬೆಂಗಳೂರಿನಲ್ಲಿ ಬೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ ಶಾಂತರಾಜು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೆ.ಎಂ.ಶಾಂತರಾಜು ರವರು ಕೆಜಿಎಫ್ ನೂತನ ಎಸ್.ಪಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದು,  ಹಾಲಿ ಕೆಜಿಎಫ್ ಎಸ್ಪಿ ಡಾ.ಧರಣಿದೇವಿರನ್ನು ಸರ್ಕಾರ…

ಕೈಕೊಳ ಮತ್ತು ಚೈನು ಸಮೇತ ಕಳ್ಳ ಪರಾರಿ.

ಕೆಜಿಎಫ್:ಆಂಡ್ರಸನ್ ಪೇಟ್ ಪೊಲೀಸರು ಹಾಕಿದ್ದ ಕೈಕೊಳ ಮತ್ತು ಚೈನು ಸಮೇತ ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಆಂಡ್ರಸನ್ ಪೇಟ್  ಪಕ್ಕದ ಸೈನೈಡ್ ಗುಡ್ಡದ ಬಳಿ ವರಧಿಯಾಗಿದೆ. ಚಾಂಪಿಯನ್ ರೀಫ್ ನ ಡಿ.ಬ್ಲಾಕ್ ನಿವಾಸಿ ಹೆನ್ರಿ ಲಾರೆನ್ಸ್ ರ ಮಗನಾದ ಸುಭಾಷ್ ಚಂದ್ರಬೋಸ್ ಪೊಲೀಸರಿಂದ…

ಕೋಲಾರ ರೈತಸಂಘದ ಮುಖಂಡರಿಂದ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಚುನಾವಣೆಗೆ ಮುನ್ನಾ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾಗೆ ಆಗ್ರಹ

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಕೋಲಾರ ರೈತಸಂಘದ ಮುಖಂಡರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರಕ್ಕೆ ಹಾಲು, ಮೊಸರಿನಿಂದ ಅರ್ಚನೆ ಮಾಡಿದ ಮುಖಂಡರು, ಚುನಾವಣೆಗೆ ಮೊದಲು ಘೋಷಿಸಿರುವಂತೆಯೇ ಸ್ತ್ರೀಶಕ್ತಿ ಸಂಘಗಳ…

ಕೋಲಾರ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ೨೦೨೩-೨೪ರ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ೨೦೨೩-೨೪ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜುಲೈ ೧ ರಂದು ನಗರದ ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್…

ಕೋಲಾರ ಸೇರಿ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ:ದಾಖಲೆ ಪರಿಶೀಲನೆ.

ಕೋಲಾರ:ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿರುವ ಕೋದಂಡರಾಮಯ್ಯರ ಕೋಲಾರದ ಕುವೆಂಪು ನಗರದ ಪೂಜ ನಿಲಯ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ ದಾಖಲೆ ಪರಿಶೀಲಿಸಿದೆ. ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ 10 ಜನ ಅಧಿಕಾರಿಗಳ ತಂಡದಿಂದ ದಾಳಿಮಾಡಿ  ಪರಿಶೀಲನೆ…

ಪ್ರೀತಿಸಿದ ಮಗಳ ಮರ್ಯಾದೆಗೇಡು ಹತ್ಯೆ:ತಂದೆಯ ಬಂಧನ.

ಬಂಗಾರಪೇಟೆ:ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ತಂದೆಯೊಬ್ಬರು ಉಸಿರುಗಟ್ಟಿಸಿ ಕೊಲೆ ಮಾಡಿರುವ ಪ್ರಕರಣ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ್ದು, ಇದರಿಂದ ಮನನೊಂದ ಪ್ರೇಮಿ ರೈಲಿಗೆ ತಲೆ ಕೊಟ್ಟು…

You missed

error: Content is protected !!