• Mon. May 6th, 2024

ವರ್ತೂರು ಪ್ರಕಾಶ್ ಹುಟ್ಟುಹಬ್ಬಕ್ಕೆ ೫ ಎಕರೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ

ByNAMMA SUDDI

Dec 19, 2022

PLACE YOUR AD HERE AT LOWEST PRICE

ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ಹುಟ್ಟುಹಬ್ಬಕ್ಕೆ ೫೦ ಸಾವಿರ ಜನರನ್ನು ಸೇರಿಸಲು ಬೃಹತ್ ಮಟ್ಟದಲ್ಲಿ ಸಿದ್ದತೆಗಳನ್ನು ಕೈಗೊಂಡಿದ್ದು, ಕೋಲಾರ ಬೈರೇಗೌಡ ನಗರದ ಸುಮಾರು ೫ ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಸಿದ್ದಗೊಂಡಿದೆ ಇದು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
ಕೋಲಾರ ವಿಧಾನಸಭಾ ಕ್ಷೇತ್ರ ವರ್ತೂರು ಪ್ರಕಾಶ್ ತಮಗಿರುವ ಜನಬೆಂಬಲವನ್ನು ಪ್ರದರ್ಶಿಸಲು ತಮ್ಮ ಹುಟ್ಟುಹಬ್ಬವನ್ನೇ ವೇದಿಕೆಯಾಗಿಸಿಕೊಂಡಿದ್ದು, ಬಿಜೆಪಿ ಟಿಕೆಟ್ ಭದ್ರಪಡಿಸಿಕೊಳ್ಳುವ ಮೂಲಕ ಎದುರಾಳಿ ಪಕ್ಷಗಳಿಗೆ ನಡುಕವುಂಟು ಮಾಡುವ ಪ್ರಯತ್ನವೇ ಇದು ಎಂದೇ ಭಾವಿಸಲಾಗಿದೆ.
೫೦ ಸಾವಿರ ಮಂದಿಗೆ
ಬಿರಿಯಾನಿ,ಹಬ್ಬದೂಟ
ಸುಮಾರು ೫ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಬೃಹತ್ ವೇದಿಕೆಯಲ್ಲಿ ೪೦ ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ, ಬೃಹತ್ ಎಲ್‌ಇಡಿ ಪರದೇ ಇರುವ ಸುಂದರ ವೇದಿಕೆಯನ್ನು ಸಿದ್ದಗೊಳಿಸುತ್ತಿದ್ದು, ಕಾರ್ಯಕ್ರಮಕ್ಕೆ ಮುನ್ನಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗಿದೆ.
ವರ್ತೂರು ಪ್ರಕಾಶ್ ಅಭಿಮಾನಿಗಳಿಗೆ ಬಿರಿಯಾನಿ ಊಟ ಹಾಕಿಸುವಲ್ಲಿ ಹೆಸರಾಗಿದ್ದು, ಈ ಬಾರಿಯೂ ಸುಮಾರು ೪೦ ಸಾವಿರ ಮಂದಿಗೆ ಬಿರಿಯಾನಿ ಹಾಗೂ ೫ ಸಾವಿರ ಮಂದಿಗೆ ಸಸ್ಯಹಾರಿ ಹೋಳಿಗೆ ಊಟಕ್ಕೆ ಸಿದ್ದತೆ ನಡೆಸಿದ್ದಾರೆ.
ಅಧಿವೇಶನದಿಂದ
ಮುಖ್ಯಮAತ್ರಿ ಗೈರು
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನೇ ಕರೆಸಲು ಸಿದ್ದತೆ ನಡೆಸಿದ್ದ ವರ್ತೂರು ಪ್ರಕಾಶ್ ಇದೀಗ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಸಿಎಂ ಆಹ್ವಾನವನ್ನು ಕೈಬಿಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಮೊದಲ ದಿನದ ಅಧಿವೇಶನ ಮುಗಿಸಿಕೊಂಡು ಹಾಗೂ ಸಂಸದ ಎಸ್.ಮುನಿಸ್ವಾಮಿ ಸಂಸತ್ ಅಧಿವೇಶನ ಬಿಟ್ಟು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಮುಖ ಆಹ್ವಾನಿತರಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೋಲಾರಕ್ಷೇತ್ರ
ಕೇಸರಿಮಯ
ಕೋಲಾರ ನಗರ ಮಾತ್ರವಲ್ಲ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟಿçÃಯ ಹೆದ್ದಾರಿ ಕೋಲಾರ ಗಡಿಯಿಂದಲೂ ಬಿಜೆಪಿ ಬಾವುಟಗಳು ಮತ್ತು ಪ್ಲೆಕ್ಸ್ಗಳು ರರಾಜಿಸುತ್ತಿವೆ. ಕಳೆದ ಎರಡು ದಿನಗಳಿಂದಲೇ ಸಹಸ್ರಾರು ಬಾವುಟಗಳನ್ನು ಇಡೀ ಕ್ಷೇತ್ರದಾದ್ಯಂತ ಕಟ್ಟುವ ಕಾಯಕದಲ್ಲಿ ನೂರಾರು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.
ಹುಟ್ಟುಹಬ್ಬವನ್ನು ಕಳೆದ ೨ ವರ್ಷಗಳಿಂದ ವಿಜೃಂಭಣೆಯಿAದ ಆಚರಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಕೋಲಾರ ಕ್ಷೇತ್ರದ ೨೨೪ ಗ್ರಾಮಗಳ ಪೈಕಿ, ಪ್ರತಿ ಗ್ರಾಮದಿಂದಲೂ ೧೫೦ ರಿಂದ ೨೦೦ ಮಂದಿ, ಕೋಲಾರ ನಗರದಿಂದ ೫ ಸಾವಿರ ಮಂದಿ, ಜಿಲ್ಲೆಯಿಂದ ೭-೮ ಸಾವಿರ ಮಂದಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಜನರು ಆಗಮಿಸಲಿದ್ದಾರೆ ಎಂದು ವರ್ತೂರು ಪ್ರಕಾಶ್ ಬೆಂಬಲಿಗ ಮುಖಂಡರು ತಿಳಿಸಿದ್ದಾರೆ.
ಡಿ.೨೦ರ ಹುಟ್ಟುಹಬ್ಬದಂದು ಬೃಹತ್ ಬೈಕ್ ರ‍್ಯಾಲಿ ನಡೆಸಲು ಉದ್ದೇಶಿಸಿದ್ದು, ಕೋಲಾರಮ್ಮ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ, ಅಂಬೇಡ್ಕರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ವೇದಿಕೆಯತ್ತ ಆಗಮಿಸಲಿದ್ದು, ವೇದಿಕೆ ಕಾರ್ಯಕ್ರಮವು ೧೨ ಗಂಟೆಗೆ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ವತಃ ಮಾಹಿತಿ ನೀಡಿದರು.
ವರ್ತೂರು ಪ್ರಕಾಶ್ ಅವರ ಹುಟ್ಟುಹಬ್ಬ ಆಚರಣೆಯ ಸಿದ್ದತೆಗಳನ್ನು ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯ ಸಿ.ಎನ್.ಅರುಣ್‌ಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಸೂಲೂರು ಎಂ.ಆAಜಿನಪ್ಪ, ಮುಖಂಡರಾದ ಬಂಕ್ ಮಂಜುನಾಥ್, ಸರಸ್ವತಮ್ಮ, ಗಾಯಿತ್ರಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ, ಮುಖೇಶ್, ನಗರಸಭಾ ಸದಸ್ಯ ಮಂಜುನಾಥ್ ಸೇರಿದಂತೆ ಹಲವಾರು ಮಂದಿ ವಹಿಸಿಕೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!