• Mon. May 6th, 2024

ಡಿಸಿಸಿ ಬ್ಯಾಂಕ್‌ನಿAದ ಕೋರಗಂಡಹಳ್ಳಿಯಲ್ಲಿ ಮಹಿಳಾ ಸಂಘಗಳಿಗೆ ೨ ಕೋಟಿ ರೂ ಸಾಲ ವಿತರಣೆ ಮತಮಾರಾಟಕ್ಕೆ ಕಡಿವಾಣ ಹಾಕಿ,ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ByNAMMA SUDDI

Dec 19, 2022

PLACE YOUR AD HERE AT LOWEST PRICE

ಡಿಸಿಸಿ ಬ್ಯಾಂಕನ್ನು ಪ್ರಾಮಾಣಿಕ ಸಾಲ ಮರುಪಾವತಿಯ ಮೂಲಕ ಸದೃಢವಾಗಿ ಕಟ್ಟಿದ ಮಾದರಿಯಲ್ಲೇ ಜಿಲ್ಲೆಯಲ್ಲಿ ಮತಮಾರಾಟಕ್ಕೆ ಕಡಿವಾಣ ಹಾಕಿ, ಉತ್ತಮ ಜನಪ್ರತಿನಿಧಿಗಳ ಆಯ್ಕೆಯ ಜತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ ಸಂಕಲ್ಪ ಮಾಡಿ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳೀ ಗೋವಿಂದಗೌಡ ಕರೆ ನೀಡಿದರು.
ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮೂಲಕ ತಾಲೂಕಿನ ಕೋರಗಂಡಹಳ್ಳಿಯ ಕಾಶಿ ವಿಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ೪೧ ಮಹಿಳಾ ಸಂಘಗಳಿಗೆ ೨.೦೫ ಕೋಟಿ ರೂ. ಸಾಲ ವಿತರಿಸಿ ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕನ್ನು ನಂಬಿಕೆಯ ತಳಹದಿಯ ಮೇಲೆ ನೀವು ಬೆಳೆಸುತ್ತಿದ್ದೀರಿ, ದಿವಾಳಿಯಾಗಿದ್ದ ಬ್ಯಾಂಕನ್ನು ರಾಜ್ಯಕ್ಕೆ ನಂ.೧ ಎಂಬAತೆ ಕಟ್ಟಿ ಬೆಳೆಸಿದ್ದೀರಿ, ಅದೇ ರೀತಿ ತಾಲ್ಲೂಕು ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಕಲುಷಿತಗೊಂಡಿರುವ ರಾಜಕಾರಣವನ್ನು ಸ್ವಚ್ಚಗೊಳಿಸಲು ಮತಮಾರಾಟಕ್ಕೆ ಕಡಿವಾಣ ಹಾಕಿ, ನೈತಿಕ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ಸಾಕ್ಷೀಕರಿಸಿ ಎಂದು ಕಿವಿಮಾತು ಹೇಳಿದರು.
ರಾಜಕೀಯ ವ್ಯಾಪಾರ
ಕೊನೆಗೊಳಿಸಲು ಕರೆ
೫ ವರ್ಷಕ್ಕೊಮ್ಮೆ ಸಾವಿರ ರೂ. ಪಡೆದುಕೊಂಡು ಓಟ್ ಮಾಡುವ ಸಂಸ್ಕöÈತಿಯಿAದ ರಾಜಕಾರಣ ಹದಗೆಡುತ್ತಿದ್ದು ರಾಜಕೀಯ ವ್ಯಾಪಾರವಾಗಿ ಮಾರ್ಪಾಡಾಗುವುದರಿಂದ ಇದನ್ನು ಎಲ್ಲ ತಾಯಂದಿರುವ ತಿರಸ್ಕರಿಸುವ ಮೂಲಕ ಅಭಿವೃದ್ಧಿಪರ ರಾಜಕಾರಣಿಗಳನ್ನು ಹುಟ್ಟುಹಾಕಬೇಕಾಗಿದೆ ಎಂದರು.
ಇಡೀ ದೇಶದಲ್ಲೇ ಉತ್ತಮವಾಗಿ ಡಿಸಿಸಿ ಬ್ಯಾಂಕ್ ನಡೆಯುತ್ತಿದ್ದು ಇದಕ್ಕೆ ಮಹಿಳಾ ಸಂಘಗಳ ಶಕ್ತಿಯೇ ಕಾರಣವೆಂದು ಸ್ಮರಿಸಿದ ಗೋವಿಂದಗೌಡರು ತಾಯಂದಿರು ಸಹಕಾರಿ ಸಂಸ್ಥೆಯಲ್ಲಿ ಠೇವಣಿ ಇಡುವ ಮೂಲಕ ಮತ್ತಷ್ಟು ಉತ್ತಮವಾಗಿ ಬ್ಯಾಂಕ್ ಕಟ್ಟುವ ಕೆಲಸಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಚಿನ್ನಾಪುರದ ರೇಣುಕಾ ಯಲ್ಲಮ್ಮ ದೇವಾಲಯದ ಆವರಣದಲ್ಲಿ ಪ್ರತಿದಿನ ಮಹಿಳಾ ಸಂಘಗಳ ಸಭೆಗಳು ನಡೆಯುವ ಮೂಲಕ ಸ್ತಿçà ಶಕ್ತಿ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದ್ದು ಇದೇ ಮಾದರಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಮಹಿಳೆಯರು ಆರ್ಥಿಕ ಸದೃಢತೆಗಾಗಿ ಸಹಕಾರಿ ರಂಗದ ಲಾಭ ಪಡೆಯಲು ಮುಂದಾಗಬೇಕೆAದು ಸೂಚಿಸಿದರು.
ಎನ್‌ಆರ್‌ಎಲ್‌ಎಂನಲ್ಲಿ ಮಹಿಳಾ ಸಂಘಗಳನ್ನು ನೋಂದಣಿ ಮಾಡುವ ಮೂಲಕ ಮಹಿಳಾ ಸಂಘಗಳು ಶೂನ್ಯ ಬಡ್ಡಿ ಸಾಲದ ಲಾಭ ಪಡೆಯಲು ಮುಂದಾಗಬೇಕಿದ್ದು ತಪ್ಪಿದರೆ ಶೇ.೫ ಬಡ್ಡಿ ಬೀಳುತ್ತದೆ ಎಂದು ಎಚ್ಚರಿಸಿದರಲ್ಲದೆ ತಾಲೂಕು ಪಂಚಾಯತಿಯ
ಸಂಬAಧಿಸಿದ ಅಧಿಕಾರಿಗಳ ಜತೆ ಚರ್ಚೆ ಮಾಡಿ ಒಕ್ಕೂಟದಿಂದ ವಾಪಸ್ ಬರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗೋವಿಂದಗೌಡರು ಭರವಸೆ ನೀಡಿದರು.
ಭದ್ರೆತೆಯಿಲ್ಲದೆಯೇ
೧೮೦೦ ಕೋಟಿ ಸಾಲ
ಮಹಿಳಾ ಸಂಘಗಳಿಗೆ ಯಾವುದೇ ಭದ್ರತೆ ಇಲ್ಲದೆ ಕೇವಲ ನಂಬಿಕೆಯಡಿ ೧೮೦೦ ಕೋಟಿ ರೂ. ಸಾಲ ನೀಡುವ ಮೂಲಕ ಕೋಲಾರ ಡಿಸಿಸಿ ಬ್ಯಾಂಕ್ ಇಡೀ ದೇಶದಲ್ಲೇ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ತಿಳಿಸಿದ ಅವರು, ಸಾಲ ಮರುಪಾವತಿ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ನೂರಾರು ಸಂಘಗಳಿಗೆ ಈಗಾಗಲೇ ೧೦ ಲಕ್ಷ ರೂ. ಸಾಲ ನೀಡುವ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸಲಾಗಿದ್ದು ತಾಯಂದಿರು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಪ್ರತಿಯೊಂದು ಸಂಘವೂ ಗರಿಷ್ಟ ಮಟ್ಟದ ಸಾಲವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಅವರು ಮಾತನಾಡಿ, ಕಸಬಾ ಸೊಸೈಟಿ ಮೂಲಕ ಇದೀಗ ೩.೭೦ ಕೋಟಿ ರೂ. ಸಾಲ ಮಂಜೂರು ಮಾಡಲಾಗಿದ್ದು ಪ್ರಥಮ ಹಂತದಲ್ಲಿ ೨.೦೫ ಕೋಟಿ ರೂ. ವಿತರಿಸಲಾಗುತ್ತಿದೆ. ಉಳಿದವರಿಗೆ ಶೀಘ್ರದಲ್ಲೇ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈವರೆಗೆ ಸೊಸೈಟಿಯಿಂದ ೩೧ ಕೋಟಿ ರೂ. ಸಾಲ ನೀಡಲಾಗಿದ್ದು ಮರು ಪಾವತಿ ಕೂಡಾ ಸಮರ್ಪಕವಾಗಿದೆ. ಡಿಸಿಸಿ ಬ್ಯಾಂಕ್ ೭ ವರ್ಷದಿಂದ ೭ ಲಕ್ಷ ಮಹಿಳೆಯರಿಗೆ ಅವಳಿ ಜಿಲ್ಲೆಗಳಲ್ಲಿ ಸಾಲ ನೀಡುವ ಮೂಲಕ ಸ್ತಿçà ಶಕ್ತಿಯನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದರೊಂದಿಗೆ ಸ್ವಾವಲಂಭಿಗಳನ್ನಾಗಿಸಿದ್ದು ಪ್ರತಿಯೊಬ್ಬರಿಗೂ ಉಳಿತಾಯ ಖಾತೆ ಹಾಗೂ ಎಟಿಎಂ ಕಾರ್ಡ್ ವಿತರಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನುಡಿದರು.
ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಮಹಿಳೆಯರಿಗೆ ಉದ್ಯೋಗ ಸೃಷ್ಠಿ ಮಾಡುವ ಕ್ರಾಂತಿಕಾರಿ ಯೋಜನೆಗೆ ಡಿಸಿಸಿ ಬ್ಯಾಂಕ್ ಚಿಂತನೆ ನಡೆಸುತ್ತಿದ್ದು ಪ್ರತಿಯೊಂದು ಮಹಿಳಾ ಸಂಘದಿAದ ಕೋಟ್ಯಂತರ ರೂ. ವಹಿವಾಟು ನಡೆಸುವ ಸಂಬAಧ ಚರ್ಚೆಗಳು ನಡೆಯುತ್ತಿವೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರು ಸಹಕಾರಿ ಸಂಸ್ಥೆ ಮತ್ತು ಮಹಿಳಾ ಸಂಘಗಳಿಗೆ ಒಳ್ಳೆಯದಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಸ್ತಿçà ಶಕ್ತಿ ಸಂಘದ ಮಹಿಳೆಯರಿಗೆ ಅರಿಶಿನ-ಕುಂಕುಮ, ಹೂ,ವಿಳ್ಯದೆಲೆ-ಅಡಿಕೆ ಕೊಟ್ಟು ಸಾಲ ವಿತರಿಸಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!