• Sun. Apr 28th, 2024

ಓಂ ಶಕ್ತಿ ಫೌಂಡೇಶನ್‍ನಿಂದ ಗ್ಲಾನ್ಸ್ ಪುಸ್ತಕಗಳು ಹಾಗೂ ಭೂಪಟಗಳ ವಿತರಣೆ

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ವೇಮಗಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಓಂ ಶಕ್ತಿ ಫೌಂಡೇಶನ್ ವತಿಯಿಂದ ನನ್ನೊಮ್ಮೆ ಗಮನಿಸಿ ಗ್ಲಾನ್ಸ್ ಪುಸ್ತಕಗಳು ಹಾಗೂ ಭೂಪಟ ಗಳು ವಿತರಿಸಿದರು.

ಇದೇ ಸಂದರ್ಭದಲ್ಲಿ ಓಂ ಶಕ್ತಿ ಫೌಂಡೇಶನ್ ಸಂಸ್ಥಾಪಕ ಹಾಗೂ ಕೋಲಾರ ಕೆಡಿಎ ನಿಕಟಪೂರ್ವ ಅಧ್ಯಕ್ಷ ಓಂ ಶಕ್ತಿ ಚಲಪತಿ  ಮಾತನಾಡಿ ನಾನು ಶಿಕ್ಷಣಕ್ಕಾಗಿ, ಆರೋಗ್ಯಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇನೆ, ನನ್ನ ಜೇಬಿನಲ್ಲಿ ಕಟ್ಟಕಡೆಯದಾಗಿ ಒಂದು ರೂಪಾಯಿ ಇರುವವರೆಗೂ ದಾನ ಮಾಡುತ್ತೇನೆ ಎಂದರು.

ಕೋಲಾರ ತಾಲೂಕಿನ ವೇಮಗಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನನ್ನೊಮ್ಮೆ ಗಮನಿಸಿ ಗ್ಲಾನ್ಸ್ ಪುಸ್ತಕಗಳನ್ನು ಹಾಗೂ ಭೂಪಟಗಳು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ  ಸರ್ಕಾರಿ ಶಾಲೆಯ ಮಕ್ಕಳು ವ್ಯಾಸಂಗದ ವಿಷಯದಲ್ಲಿ ಏನೇ ಕೇಳಿದರೂ ನನ್ನ ಕೈಲಾದಷ್ಟು ಕೊಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಪುರಹಳ್ಳಿ ಯಲ್ಲಪ್ಪ, ಉಪಾಧ್ಯಕ್ಷ ಮಂಜುನಾಥ್, ಉಪ ಪ್ರಾಂಶುಪಾಲ ನಾರಾಯಣಸ್ವಾಮಿ, ರಾಜ್ಯ ಮಹಿಳಾ ಮೋರ್ಚ ಕಾರ್ಯಕಾರಣಿ ಸದಸ್ಯೆ ಮಮತಾ, ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸದಸ್ಯ ಸಾ.ಮಾ. ಅನಿಲ್ ಬಾಬು, ಕೋಲಾರ ತಾಲೂಕು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಓಹಿಲೇಶ್, ಗೋವಿಂದರಾಜು, ಎಸ್ ಸಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಮುಖಂಡರಾದ ರಮೇಶ್, ರಾಮಾಂಜಿ ಹಾಗೂ ಇತರರು ಹಾಜರಿದ್ದರು.

ಇದನ್ನೂ ಓದಿ: ಕೃಷಿಯಲ್ಲಿ ಲಾಭಗಳಿಸುತ್ತಿರುವ ಪದವೀಧರ ಮಹಿಳೆ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!