• Thu. May 2nd, 2024

ಕೋರೆಗಾಂವ್ ಐತಿಹಾಸಿಕ ಯುದ್ಧವನ್ನು ಪಠ್ಯದಲ್ಲಿ ಸೇರಿಸಿ:ಡಿ.ಎಸ್.ಎಸ್ ಒತ್ತಾಯ.

PLACE YOUR AD HERE AT LOWEST PRICE

 

ಮಹಾರಾಷ್ಟ್ರದ ಕೋರೆಗಾಂವ್ ನದಿ ತೀರದಲ್ಲಿ ಮೂಲ ನಿವಾಸಿ ದಲಿತರ ಸ್ವಾಭಿಮಾನಕ್ಕಾಗಿ ನಡೆದಿರುವ ಐತಿಹಾಸಿಕ ಯುದ್ಧವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಠ್ಯದಲ್ಲಿ ಸೇರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಒತ್ತಾಯಿಸಿದೆ.

ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೋಲಾರ ಜಿಲ್ಲಾ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಮುಖಂಡರು, 1818ರಲ್ಲಿ ಪೂನಾ ನಗರದ ಸುಮಾರು25ಕಿ.ಮೀ ದೂರದಲ್ಲಿ ಇರುವ ಭೀಮ ನದಿಯ ತೀರದಲ್ಲಿ ನಡೆದ ಯುದ್ಧದ ಬಗ್ಗೆ ಸುಧೀರ್ಘ ಚರ್ಛೆ ನಡೆಯಿತು.

28ಸಾವಿರ ಪೇಶ್ವೆ ಸೈನಿಕರು500 ಜನ ಮಹರ್ ಯೋದರ ನಡುವೆ ಸ್ವಾಭಿಮಾನ ಘನತೆಗಾಗಿ ನಡೆದ ಮಹಾ ಐತಿಹಾಸಿಕ ಯುದ್ಧ ವನ್ನು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳುವ ಅತಿ ಅವಶ್ಯ ವಾದ ಚರಿತ್ರೆ ಯಾಗಿದ್ದು ಈ ಯುದ್ಧದ ಬಗ್ಗೆ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರು ಸವಿಸ್ತಾರವಾಗಿ ಕೋರೆಗಾಂವ್ ದಿಗ್ವಿಜಯ್ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರೆಗಾಂವ್ ಯುದ್ದವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಒತ್ತಾಯ ಪಡಿಸಲು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಇಲ್ಲವಾದರೆ  ಈ ಬಗ್ಗೆ ದೊಡ್ಡ ಮಟ್ಟದಲ್ಲಿ ತಿಳುವಳಿಕೆ ಸಭೆಗಳನ್ನು ಏರ್ಪಡಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ದಲಿತ ಕುಟುಂಬದಲ್ಲಿ ಹುಟ್ಟಿ ಅನೇಕ ಕಷ್ಟದ ಪರಿಸ್ಥಿತಿ ಎದುರುಸಿ ವಕೀಲರ ಉದ್ದೆಯನ್ನು ಅಲಂಕರಿಸಿದ ಸೂಲಿಕುಂಟೆ ವೆಂಟರಾಜ್ ಮತ್ತು ಕದಿರೇನಹಳ್ಳಿ ದಿನೇಶ್ ರವನ್ನು ಸನ್ಮಾನಿಸಲಾಯಿತು.

ರಾಜ್ಯಕಲಾ ಮಂಡಳಿ ಸಂಚಾಲಕರಾದ ಹಿರೇಕರಪನಹಳ್ಳಿ ಕಲಾವಿದ ಯಲ್ಲಪ್ಪ ಬೆಂಗಳೂರು ಮಹಿಳಾ ವಿಭಾಗದ ಸಂಚಾಲಕಿ ಚಿಕ್ಕ ವಲಗಮಾದಿಲಕ್ಷಮ್ಮ ಜಿಲ್ಲಾ ಸಂಚಾಲಕ. ಹಿರೇಕರಪನಹಳ್ಳಿ ರಾಮಪ್ಪ ಸಂಘಟನಾ ಸಂಚಾಲಕರಾದ ರಾಧಾಕೃಷ್ಣ .ಗುಲ್ಲಹಳ್ಳಿಬಸಪ್ಪ. ಅಂಬರೀಶ್. ಸಂಗನಹಳ್ಳಿ ರಮೇಶ್ ವೆಂಕಟಗಿರಿ ಬಂಗಾರಪೇಟೆ ತಾಲ್ಲೂಕು ಸಂಚಾಲಕರಾದ ಸೂಲಿಕುಂಟೆ ವೆಂಕಟರಾಜು. ವಿಜಿಕುಮಾರ್. ಕದಿರೇನಹಳ್ಳಿ ದಿನೇಶ್. ಮಾಲ.ಬೂದಿಕೋಟೆ ಶ್ರೀನಿವಾಸ ಕೆಜಿಎಫ್ ತಾಲ್ಲೂಕು ಸಂಚಾಲಕ ತಂಬಾರ್ಲಹಳ್ಳಿ ರಾಮಪ್ಪ. ಶ್ರೀನಿವಾಸ. ವೆಂಕಟೇಶ್ ಬಡಮಾಕನಹಳ್ಳಿ ಶ್ರೀನಿವಾಸ್  ಮುಂತಾದವರು ಭಾಗವಹಿಸಿದ್ದರು

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!