• Sat. May 4th, 2024

ಕೆಜಿಎಫ್ ಸುತ್ತಮುತ್ತ ನೀರಿನಲ್ಲಿ ಫ್ಲೋರೈಡ್ ಇದೆ-ಡಾ.ಪ್ರದೀಪ್ ಕುಮಾರ್.

PLACE YOUR AD HERE AT LOWEST PRICE

ಕೆಜಿಎಫ್ ಮತ್ತು ಸುತ್ತಮುತ್ತಲಿನ ಪ್ರದೇಶದ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಲವಾರು ರೀತಿಯ ಕ್ಯಾನ್ಸರ್ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಿಯಮಿತ ಆರೋಗ್ಯ ತಪಾಸಣೆಯಿಂದ ಈ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ಕಿದ್ವಾಯಿ ಆಸ್ಪತ್ರೆಯ ಹೆಸರಾಂತ ಕ್ಯಾನ್ಸರ್ ತಜ್ಞ ಡಾ.ಪ್ರದೀಪ್‍ಕುಮಾರ್ ಹೇಳಿದರು.
ನಗರದ ಹೊರವಲಯದ ಕೋರಮಂಡಲ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಆಫೀಸರ್ಸ್ ಅಸೋಸಿಯೇಶನ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.
ಕ್ಯಾನ್ಸರ್ ರೋಗವು ಮಾರಣಾಂತಿಕವಾಗಿದ್ದು, 4 ಹಂತಗಳಲ್ಲಿದ್ದರೂ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದು ಅಗತ್ಯವಾಗಿದೆ ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕೆಜಿಎಫ್ ಹೊರವಲಯದಲ್ಲಿರುವುದರಿಂದ ನೆರೆಯ ಬಂಗಾರಪೇಟೆ ಮತ್ತು  ಮುಳಬಾಗಿಲು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿನಿತ್ಯ ಬಂದು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕಳೆದ ಬಾರಿ ಇಲ್ಲಿ ನಡೆಸಿದ ಆರೋಗ್ಯ ಶಿಬಿರದಿಂದ ಕೋವಿಡ್-19 ನಂತಹ ಸಂದಿಗ್ಧ ಸಮಯದಲ್ಲಿ ಜನರು ತಮ್ಮ ಮತ್ತು ತಮ್ಮ ಕುಟುಂಬದವರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವನ್ನು ಮೂಡಿಸಲು ಸಾಧ್ಯವಾಯಿತು ಎಂದರು.
ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗಳಿಂದ ಬಂದಿದ್ದ ಸುಮಾರು 12 ಮಂದಿ ವೈದ್ಯರು ಮತ್ತು 4 ಮಂದಿ ನರ್ಸಿಂಗ್ ಆಫೀಸರ್‍‌ಗಳ ತಂಡವು ಕ್ಯಾನ್ಸರ್, ಗೈನಕಾಲಜಿ, ಇಎನ್‍ಟಿ, ಜನರಲ್ ಮೆಡಿಸಿನ್, ಐ ಸ್ಪೆಷಲಿಸ್ಟ್ ಮೊದಲಾದ
ವಿಭಾಗಗಳಲ್ಲಿ ಕಾಲೇಜಿನ ಸುಮಾರು 350 ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿದರು.
ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಆಫೀಸರ್ಸ್ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಡಿಆರ್‍‌ಡಿಒ ಎಸ್‌ಪಿಒ ಮಂಜುನಾಥ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಐಎಎಸ್ ಮತ್ತು ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ
ಉತ್ತೀರ್ಣರಾಗಿರುವವರ ಸಂಖ್ಯೆ ತೀರಾ ಕಡಿಮೆಯಿದೆ.
 ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಎನ್‍ಎಎಲ್, ಡಿಆರ್‍‌ಡಿಒ  ಇಸ್ರೋ, ಬಿಇಎಲ್ ಮೊದಲಾದ ಸಂಸ್ಥೆಗಳಲ್ಲಿ ಗ್ರಾಮೀಣ ಭಾಗದ ಯುವ ಜನತೆ ಉದ್ಯೋಗಗಳನ್ನು ಪಡೆಯಲು ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸ್ಪರ್ಧಾತ್ಮಕ
ಪರೀಕ್ಷೆಗೆ ಅಣಿಯಾಗಲು ಅಗತ್ಯವಾದ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಆಫೀಸರ್ಸ್ ಅಸೋಸಿಯೇಶನ್ ಸದಸ್ಯ ಶ್ರೀನಿವಾಸಪ್ಪ, ಖಜಾಂಚಿ ಭೀಮಪ್ಪ ನಾಯಕ, ಹೆಚ್‍ಎಎಲ್ ಮುಖ್ಯ ವ್ಯವಸ್ಥಾಪಕ ಕೇಶವಮೂರ್ತಿ, ಆರ್ಗನೈಸಿಂಗ್ ಸೆಕ್ರೆಟರಿ ಬಸವರಾಜ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡೆರಿಕ್ ಅಲೆಕ್ಸಾಂಡರ್, ಆನಂದ್, ಪಲ್ಲವಿ, ಚಂದನ, ತ್ರಿವೇಣಿ, ಚಂದ್ರಶೇಖರ್, ಅನಿಲ್‍ಕುಮಾರ್, ಮುನಿಕೃಷ್ಣಪ್ಪ ಮೊದಲಾದವರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!