• Sun. May 19th, 2024

ಕಿಲಾರಿಪೇಟೆಯಲ್ಲಿ ಧನುರ್ಮಾಸದ ಪೂಜೆಗೆ ಕೊನೆದಿನ ಭಜನೆಯಲ್ಲಿ ಪಾಲ್ಗೊಂಡ ಹಿರಿಯರಿಗೆ ಅಭಿನಂದನೆ

PLACE YOUR AD HERE AT LOWEST PRICE

ಕೋಲಾರ ಕಿಲಾರಿ ಪೇಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶನಿವಾರ ಸಂಕ್ರಾಂತಿ ಧನುರ್ಮಾಸ  ತಿಂಗಳ ಕೊನೆ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ದೇವರು ಮತ್ತು ಇಡೀ ದೇವಾಲಯವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ನಗರದ ಕಿಲಾರಿಪೇಟೆಯೆಂದರೆ ಕೋಲಾರದ ಗೋಪಾಲಕರ ತವರು ಎಂದೇ ಖ್ಯಾತಿಯಾಗಿದ್ದು, ಈ ಭಾಗದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಧನುರ್ಮಾಸದ ಪೂಜೆ ಕಿಲಾರಿಪೇಟೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದು, ಇಡೀ ತಿಂಗಳು ಮುಂಜಾನೆ ಚಳಿಯನ್ನು ಲೆಕ್ಕಿಸದೇ ೩ ಗಂಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ದೀಪವಿಡಿದು ಭಜನೆ ಮಾಡುತ್ತಾ ಸಾಗುವ ಸುಮಾರು ೩೦ ಮಂದಿಯ ತಂಡ ಮಕರ ಸಂಕ್ರಾಂತಿ ಮುನ್ನಾದಿನ ಭಜನೆ ಮುಗಿಸುತ್ತದೆ.

ಈ ಧನುರ್‌ಮಾಸದ ತಿಂಗಳ ಪೂರ್ತಿ ಭಜನೆಯಲ್ಲಿ ನಗರದಲ್ಲಿ ಸಂಚರಿಸಿದವರಿಗೆ ಭಜನೆಯಲ್ಲಿ ಪಾಲ್ಗೊಂಡವರಿಗೆ ಶಾಲೂ ಹೊದಿಸಿ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ಮೇಸ್ತ್ರಿ ನಾರಾಯಣಸ್ವಾಮಿ, ರಮೇಶ್,ಶಬರೀಷ್ ಕುಟುಂಬದವರು ಬಹುಮಾನಗಳ ಕೊಡುಗೆ ನೀಡಿದ್ದು, ರುಕ್ಮಿಣಿ,ಸತ್ಯಭಾಮಾ ವೇಣುಗೋಪಾಲಸ್ವಾಮಿ ಭಕ್ತ ಮಂಡಳಿ ಪದಾಧಿಕಾರಿಗಳು ಬಹುಮಾನ ವಿತರಿಸಿದರು.
ಅರ್ಚಕ ರಘುಶರ್ಮ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಸಿದ್ದು, ಮೇಸ್ತ್ರಿ ನಾರಾಯಣಸ್ವಾಮಿ, ಕೆ.ವಿ.ಚೌಡಪ್ಪ, ಮುನಿಸ್ವಾಮಪ್ಪ,ಒಳ್ಳೆಪ್ಪ, ತಬಲ ಕಿಟ್ಟಣ್ಣ, ಮುನಿರಾಮಪ್ಪ, ವೆಂಕಟಪ್ಪ, ಪ್ರಸನ್ನ ಕುಮಾರ್, ಉಪ್ಪರಪೇಟೆ ಗೋವಿಂದಪ್ಪ, ಮುನಿರಾಜಪ್ಪ, ಪುರುಷೋತ್ತಮ, ಕೆ.ಎನ್.ವೆಂಕಟೇಶ್, ಕೆ.ಎನ್.ಮುನಿಕೃಷ್ಣ, ಎಂ.ಮಣಿ, ಮುನಿವೆಂಕಟಸ್ವಾಮಿ, ಮುನಿವೆಂಕಟಯಾದವ್, ಕೆ.ವಿ.ಮಂಜು, ವಿಶ್ವನಾಥ್, ಕೆ.ವಿ.ರಮೇಶ್, ಚಿನ್ನಪ್ಪಿ, ಅಡಿಕೆ ನಾರಾಯಣಸ್ವಾಮಿ, ಜಿ.ಕೃಷ್ಣಮೂರ್ತಿ,ದೊಡ್ಡವೀರಪ್ಪ, ಕೋಳಿನಾರಾಯಣಸ್ವಾಮಿ,ಪೋಸ್ಟ್‌ಮಾಸ್ಟರ್ ನಾರಾಯಣಸ್ವಾಮಿ, ಭಜನೆ ಪ್ರಭಾಕರ್,ಕೆ.ಎಸ್.ಗಣೇಶ್,ವೆಂಕಟರಾಮ್ ಮತ್ತಿತರರು ಹಾಜರಿದ್ದರು.

 

 

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!