• Tue. May 7th, 2024

ಸುಣ್ಣಕುಪ್ಪ ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ ಶಾಸಕಿ ರೂಪಕಲಾ .

PLACE YOUR AD HERE AT LOWEST PRICE

ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ರವರು ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣಕುಪ್ಪ ಗ್ರಾಮದ ಬಳಿ ಗ್ರಾಮದಿಂದ ಹೊರಗೆ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ ಹೊಸದಾಗಿ ಅಳವಡಿಸಿರುವ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು.

ಸುನ್ನಕುಪ್ಪ ಗ್ರಾಮದ ಹಲವು ಬಡ ಕುಟುಂಬಗಳು ಗ್ರಾಮದಿಂದ ಹೊರಗೆ ತಮ್ಮ ಜಮೀನುಗಳ ಬಳಿ ಸುಮಾರು ಇಪ್ಪತ್ತು ಕುಟುಂಬಗಳು ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತಿದ್ದು ಸುಮಾರು ಮುವತ್ತು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ವಾಸ ಮಾಡುತ್ತಿವ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಶಾಸಕಿ ಬೆಸ್ಕಾಂ ಇಲಾಖೆ ಮುಖಾಂತರ ಮಾಬೇಕಾಗಿರುವ ಎಲ್ಲ ವ್ಯವಸ್ಥೆ ಮಾಡಿ ಅಲ್ಲಿನ ವಾಸಿಗಳು ಆರ್ಥಿಕವಾಗಿ ಹಿಂದುಳಿದಿರುವವರಾದ ಕಾರಣ ಶಾಸಕರೆ ಎಲ್ಲಾ ಬಡವರ ಪರವಾಗಿ ಸ್ವಂತ ಹಣದಿಂದ ಬೆಸ್ಕಾಂಗೆ ಡೆಪಾಸಿಟ್ ಹಣ ಕಟ್ಟಿದ್ದರು.

ವಿದ್ಯುತ್ ಸಂಪರ್ಕಕ್ಕೆ ಶಾಸಕಿ ಡಾ.ರೂಪಕಲಾ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅಲ್ಲಿನ ಮಾನೆಗಳಲ್ಲಿ ವಾಸಿಸುವ ಕುಟುಂಬ ಸದಸ್ಯರು ಮಾನ್ಯ ಶಾಸಕರನ್ನು ಸನ್ಮಾನಿಸಿ ದನ್ಯವಾದಗಳನ್ನು ಸಲ್ಲಿಸಿದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!