• Sun. May 19th, 2024

ವಿಶ್ವ ಸೇನಾ ದಿನಾಚರಣೆ- ಸ್ವಾರ್ಥ ರಹಿತ ಸೇವೆಯಲ್ಲಿ ಸೈನಿಕರು – ಸರ್ಕಲ್‌ ಇನ್ಸ್‌ ಪೆಕ್ಟರ್ ಬಿ.ಐಯ್ಯಣ್ಣರೆಡ್ಡಿ

PLACE YOUR AD HERE AT LOWEST PRICE

ದೇಶಸೇವೆಯಲ್ಲಿ ಸ್ವಾರ್ಥರಹಿತ ಮತ್ತು ವೃತ್ತಿಪರ ನಡವಳಿಕೆಗೆ ಹೆಸರಾಗಿರುವುದು ನಮ್ಮ ದೇಶದ ಸೈನಿಕರು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಐಯಣ್ಣರೆಡ್ಡಿ ಅಭಿಪ್ರಾಯಪಟ್ಟರು.

ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಿಶ್ವ ಸೇನಾ ದಿನಾಚರಣೆಯಲ್ಲಿ ಭಾಗವಹಿಸಿ ಸೇನೆಯಿಂದ ನಿವೃತ್ತರಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರ್‌ರನ್ನು ಅಬಿನಂದಿಸಿ ಅವರು ಮಾತನಾಡುತ್ತಿದ್ದರು.

ಸೈನಿಕರ ದಿನಾಚರಣೆಯ ಸಂದರ್ಭದಲ್ಲಿ ಸಂಕ್ರಾಂತಿ ಬಂದಿರುವುದು ಸಡಗರದ ವಿಷಯ. ಹಬ್ಬಗಳ ಆಚರಣೆ ಜೊತೆಗೆ ಸೈನಿಕರ ಸುಖ ಸಂತೋಷದ ಕುಟುಂಬಕ್ಕೆ ಗೌರವಪೂರ್ವಕವಾಗಿ ಸೌಲಭ್ಯಗಳನ್ನು ನೀಡಬೇಕು ಎಂದರು.

ಇಡೀ ದೇಶದ ಜನತೆಯ ಆಶೋತ್ತರಗಳಿಗಾಗಿ ಹಗಲಿರುವ ದುಡಿಯುವ ಯೋಧರನ್ನು ಗೌರವಿಸುತ್ತಿರುವುದು ಸಂತಸದ ವಿಷಯ. ಹಾಗೆಯೇ ನಿವೃತ್ತಿಯಾದ ನಂತರವೂ ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂಬ ಭರವಸೆಯನ್ನು ಅವರಿಗೆ ಕೊಡುವ ಧೈರ್ಯ ಅಗತ್ಯವಿದೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ, ಭಾರತ ಸೇನೆಯು ವಿಶ್ವದಲ್ಲಿಯೇ ೩ನೇ ಅತೀ ದೊಡ್ಡ ಸೇನೆಯೆಂಬ ಗೌರವ ಪಡೆದಿದೆ. ಹವಾಲ್ದಾರ್ ಕುಮಾರ್ ಸೇನೆಯಲ್ಲಿ ಇಪ್ಪತ್ತು ವಷಗಳಿಂದ ಸೇವೆ ಸಲ್ಲಿಸಿ ಇದೀಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅರಕ್ಷಕ ವೃತ್ತಿ ಮಾಡುತ್ತಿದ್ದಾರೆ. ಅವರ ಸಾಧನೆ ಅದ್ವಿತೀಯವಾದುದು. ಅವರ ಜನಸಮುದಾಯದ ಸೇವೆ ಹಾಗೂ ದೇಶ ಸೇವೆಯನ್ನು ಶ್ಲಾಘಿಸುತ್ತಾ ಇಂದಿನ ದಿನ ಅನೇಕ ಸರ್ಕಾರಿ ನೌಕರರು ದೇಶದ ಗೌರವ ಮೂಡಿಸಿಕೊಳ್ಳಬೇಕೆಂದರು.

ರಾಜ್ಯ ಪತ್ರಕರ್ತರ ಸಂಘದ ಸದಸ್ಯ ಕೆ.ಎಸ್ ಗಣೇಶ್ ಮಾತನಾಡಿ, ಭಾರತೀಯ ಸೈನ್ಯಕ್ಕೆ ನಮ್ಮ ಮಹಿಳೆಯರು ಮತ್ತು ಪುರುಷರು ಸ್ವ ಇಚ್ಛೆಯಿಂದ ಸೇರುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು,ಈ ದಿನ ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲಿ ಇಡೀ ದೇಶ ಮೆಚ್ಚಿಕೊಂಡ ಒಬ್ಬ ಯೋಧನನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯ ಕಾರ್ಯ, ಸರ್ಕಾರ ನಿವೃತ್ತ ಯೋಧರಿಗೆ ಗೌರವ ರೀತಿಯಲ್ಲಿ ನಡೆಸಿಕೊಂಡು ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಕನ್ನಡ ಉಪನ್ಯಾಸಕ ಜೆ.ಜಿ ನಾಗರಾಜ ಮಾತನಾಡಿ, ಯುವಕರು ಈ ದೇಶಕ್ಕಾಗಿ ದುಡಿಯುವ ಮನೋಭಾವನೆ ಬೆಳೆಸಿಕೊಳ್ಳಬೇಕು. ದೇಶಭಕ್ತಿ ಅಳವಡಿಸಿಕೊಳ್ಳಬೇಕು. ನಿವೃತ್ತಿಯ ನಂತರ ಪ್ರತಿಯೊಬ್ಬರು ಪ್ರವೃತ್ತಿಯ ಕಡೆಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಅಭಿನಂದನೆಯನ್ನು ಸ್ವೀಕರಿಸಿದ ಹವಾಲ್ದಾರ್ ಕುಮಾರ್ ಮಾತನಾಡಿ, ಈ ಮಣ್ಣಿಗಾಗಿ ದುಡಿಯುವ ಕೈಗಳು ನಮ್ಮವು. ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ದರಿರಬೇಕು. ಪ್ರಾಮಾಣಿಕತೆಯಿಂದ ಕರ್ತವ್ಯದ ಕಡೆಗೆ ದೇಶದ ಜನ ಗಮನ ಹರಿಸಬೇಕು. ಯೋಧನಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಇದೀಗ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಇಂಚರ ಸಂಸ್ಥೆಯ ನಾರಾಯಣಸ್ವಾಮಿ, ವಕೀಲ ಸತೀಶ್, ದಾಸ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ, ಕೆಎಸ್ ಆರ್ ಟಿಸಿಯ ಕಿರಿಯ ಸಹಾಯಕ ಡಿ ಶಿವಕುಮಾರ್, ಸಿರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ ಸುಬ್ಬರಾಮಯ್ಯ, ಸಾಹಿತಿ ಡಾ. ಶರಣಪ್ಪ ಗಬ್ಬೂರ್, ಶಿಕ್ಷಕರಾದ ರಮೇಶ್ ಬಾಬು, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ನಿವೃತ್ತ ಪೋಲಿಸ್ ಟೈಗರ್ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

 

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!