• Sun. Apr 28th, 2024

ಕೋಲಾರದಲ್ಲಿ ಜೆಡಿಎಸ್ ನಾಯಕರ ಮೊಬೈಲ್ ಟಾಕ್ ಫೈಟ್:ಅಡಿಯೋ ವೈರಲ್.

PLACE YOUR AD HERE AT LOWEST PRICE

 

ಕೋಲಾರದಲ್ಲಿ ಜೆಡಿಎಸ್ ಯುವ ಮುಖಂಡ ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕ ಕೆ.ಟಿ. ಅಶೋಕ್ ಮಾಜಿ ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ಓಟ್ ಕೇಳಿದ್ದಕ್ಕೆ ಮಾಜಿ ಸಿ.ಎಂ. ಸಿದ್ಧರಾಮಯ್ಯ ಬಂಟ ಜೆ.ಕೆ.ಜಯರಾಮ್ ಫೋನ್ ಕರೆ ಮಾಡಿ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ ರಿಂದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್‌ಗೆ ಬೆಂಬಲ ಘೋಷಣೆ ಮಾಡಿರುವುದು ಹಾಗೂ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಮ್ ಕಾಂಗ್ರೆಸ್ ಅಭ್ಯರ್ಥಿ ಸಿದ್ಧರಾಮಯ್ಯರಿಗೆ ಬೆಂಬಲ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕುರುಬಸಂಘದ ಮಾಜಿ ನಿರ್ದೇಶಕ ಕೆ.ಟಿ.ಅಶೋಕ್ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

ಪ್ರತಿಕ್ರಿಯೆಯಲ್ಲಿ ಅವರು ನಿಮ್ಮನ್ನು ಸಂಘದ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಾಗಿ ಮಾಡಿರುವುದು ಕುರುಬ ಸಮಾಜದ ಸಂಘಟನೆ ಮಾಡಲು ಹೊರತು ರಾಜಕೀಯ ಮಾಡುವುದಕ್ಕಲ್ಲ ಈ ರೀತಿ ಸಂಘದ ಹೆಸರಿನಲ್ಲಿ ರಾಜಕೀಯ ಪಕ್ಷಗಳಿಗೆ ಬೆಂಬಲ ಸೂಚಿಸಲು ನೀವು ತೀರ್ಮಾನ ತೆಗೆದುಕೊಳ್ಳಲು ನಿಮಗೆ ನೈತಿಕತೆ ಇಲ್ಲ ಎಂದು ಹೇಳಿದ್ದರು.

ಕುರುಬ ಸಮುದಾಯ ಬೆಂಬಲ ಸೂಚಿಸಲು ನಿಮಗೆ ಹೇಳಿದ್ದಾರಾ, ನಿಮ್ಮ ವೈಯಕ್ತಿಕ ಅಭಿಪ್ರಾಯಗಳಿಗೆ ಕುರುಬ ಸಮುದಾಯವನ್ನು ಬೀದಿಗೆ ತಂದಿರುವುದಕ್ಕೆ ನಾಚಿಕೆ ಆಗುತ್ತೆ. ಕುರುಬ ಸಮುದಾಯಕ್ಕೆ ಇಂದಿಗೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ,

ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಅರ್ಥಿಕವಾಗಿ ಸಮಾಜವನ್ನು ಜಾಗೃತ ಗೊಳಿಸಲು ಸಂಘದ ಕೆಲಸ ಮಾಡಬೇಕು, ಚುನಾವಣೆಯ ಸಂದರ್ಭಗಳಲ್ಲಿ ಸಮುದಾಯದ ಹೆಸರೇಳಿಕೊಂಡು ಬೇರೆ ಪಕ್ಷಗಳ ಮುಖಂಡರ ಬಳಿ ದುಡ್ಡು ಬಾಚುವುದಕ್ಕಾ ಸಂಘ ಇರುವುದು ಎಂದು ಪ್ರಶ್ನಿಸಿದ್ದರು.

ಇದಕ್ಕೆ ಕುಪಿತಗೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಕುರುಬ ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಮ್ ಫೋನ್ ಕರೆ ಮಾಡಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ಆಡಿಯೋ ಸಂಭಾಷಣೆ ಹೀಗಿದೆ ನೋಡಿ…..

 

ಜೆ.ಕೆ.ಜಯರಾಮ್ : ಹಲೋ,..

ಅಶೋಕ :          ಅಣಾ..

ಜೆ.ಕೆ.ಜಯರಾಮ್ : ಹೇಳಪ್ಪಾ ಅಶೋಕು,

ಅಶೋಕ :       ಯಾರು..

ಜೆ.ಕೆ.ಜಯರಾಮ್ :  ಏನೋ ಕಾಮೆಂಟ್ ಮಾಡಿದ್ದೀಯಾ… ನಾನು ಜೆ.ಕೆ.ಜಯರಾಮಣ್ಣ

ಅಶೋಕ್ :       ಓ ಅಣಾ ನೀನಾ

ಜೆ.ಕೆ.ಜಯರಾಮ್ :  ಊನಪ್ಪ

ಅಶೋಕ್ :       ಇದ್ಯಾವುದಣ್ಣಾ ನಂಬರ್ ನಿಂದು ಹೆಸರು ಬರಬೇಕೇ..

ಜೆ.ಕೆ.ಜಯರಾಮ್ :  ಇರೋದೆ ಒಂದು ನಂಬರ್ ಲೇ ಅಪ್ಪಾ ನಾನೆಲ್ಲೋ ಹೋಗಲಿ ಎರಡೆರಡು ನಂಬರ್ ಇಟ್ಕೊಕಳ್ಳಕಾ

ಅಶೋಕ್ :       ಯಾಕಣ್ಣಾ ..ಕಾಮೆಂಟ್ ಏನೂ ಇಲ್ಲಾ ಅಣ್ಣಾ ಅದು ಎಲ್ಲರಿಗೂ ಸೇರಿಸಿ ಕಾಮೆಂಟ್ ಹೊಡೆದಿರೋದು,

ಜೆ.ಕೆ.ಜಯರಾಮ್ :  ಹಾಂ…

ಅಶೋಕ್ :       ಎಲ್ಲರಿಗೂ ಸೇರಿಸಿ ಕಾಮೆಂಟ್ ಹೊಡೆದಿರೋದು.

ಜೆ.ಕೆ.ಜಯರಾಮ್  : ಹೌದೋ ನಿನ್ನದೇನೋ ಕೊಡುಗೆ ಕುರುಬರ ಸಂಘಕ್ಕ

ಅಶೋಕ್ :       ಯಾರಣ್ಣಾ

ಜೆ.ಕೆ.ಜಯರಾಮ್  : ನಿಂದು…

ಅಶೋಕ್ :       ಅಣಾ ನಿಂದೇನಿದ್ರೆ ಕೊಡುಗೆ ನಂದಷ್ಟೇ ಅಣಾ

ಜೆ.ಕೆ.ಜಯರಾಮ್  : ಹೇ.. ಬಾ ನಂದು ಕೊಡುಗೆ ತೋರಿಸ್ತೀನಿ

ಅಶೋಕ್ :       ಹೂಂ..

ಜೆ.ಕೆ.ಜಯರಾಮ್  :  ಐದು ವರ್ಷ ಇದ್ದೇ ಅಲ್ಲಾ ನೀನು ಡೈರೆಕ್ಟರಾಗಿ..

ಅಶೋಕ್ :       ನಾನು ಅಣಾ ನಾನು ಈಗ….

ಜೆ.ಕೆ.ಜಯರಾಮ್  : ಲೇ ಎಲ್ರಿಗೂ ಹೇಳೋದು ಬೇರೆ ನನಗೆ ಹೇಳೋದು ಬೇರೆ. 25 ಲಕ್ಷ ಕೊಡಿಸಿದ್ದೀನಿ ಎಂ.ಟಿ.ಬಿ.ಹತ್ರ ಮುಳಬಾಗಿಲಿಗೆ

ಅಶೋಕ್ :       ಎಲ್ಲಣಾ..ಎಲ್ಲಣಾ..

ಜೆ.ಕೆ.ಜಯರಾಮ್  : 25 ಲಕ್ಷ ಕೊಡಿಸಿದ್ದೀನೋ ಲೇ ಎಂ.ಟಿ.ಬಿ.ಹತ್ರ ಮುಳಬಾಗಿಲಿನ ಚೌಲ್ಟಿçಗೇ..

ಅಶೋಕ್ :       ಈಗ ಎಂ.ಟಿ.ಬಿ. ಬಿಜೆಪಿಯಲ್ಲಾ…

ಜೆ.ಕೆ.ಜಯರಾಮ್  : ಹೇಯ್ ಸಮಾಜದ್ದು ಹೇಳು ಫಸ್ಟು..

ಅಶೋಕ್ :       ಹೂಂ…

ಜೆ.ಕೆ.ಜಯರಾಮ್  : ಒಂದು ಎಲೆಕ್ಷನ್ ನಿಂತ್ಕೊಳ್ಳೋ ನೀನು ಗೊತ್ತಾಗುತ್ತೇ ಲೇಯ್ .

ಅಶೋಕ್ :       ಣೋ ನಾನು ಎಲೆಕ್ಷನ್ ನಿಂತುಕೊAಡಿದ್ದು ಆದ್ಮೇಲೆ ನೀನು ನಿಂತುಕೊAಡಿದ್ದಣೋ

ಜೆ.ಕೆ.ಜಯರಾಮ್  : ಲೇಯ್ ನಗರಸಭೆಗೆ ಬಾರೋ ನೀನು ತಾಕತ್ತಿರೋವನು ಗ್ರಾಮ ಪಂಚಾಯ್ತಿಯಿAದ

ಅಶೋಕ್ :       ಅಣಾ ನಗರಸಭೆನಾಗೆ ನಾನು ಫಸ್ಟ್ ನಿಂತುಕೊAಡಿದ್ಮೇಲೆ ಆಮೇಲೆ ನೀನು ನಿಂತುಕೊAಡಿದ್ದಣೋ

ಜೆ.ಕೆ.ಜಯರಾಮ್  : ತಿ…..ಮುಚ್ಕಂಡು ಏನ್ ಮಾತಾಡ್ಬೇಕೋ ಅದನ್ನು ಮಾತಾಡೋದನ್ನ ಕಲೀ ಇಲ್ಲಿ ..ನಿನ್ನಂಗ ವಕ್ಕಲಿಗನ ತು…ಕುಡಿತಾ ಇಲ್ಲಾಲೋ ಲೇಯ್..

ಅಶೋಕ್ :       ಅಣಾ ಹಂಗೆಲ್ಲಾ ಮತಾಡ್ಬೇಡಣೋ ಅಣಾ ದೊಡ್ಡವನು ಅಂತ ಮರ್ಯಾದೆ ಅಣೋ

ಜೆ.ಕೆ.ಜಯರಾಮ್  : ವಕ್ಕಲಿಗರ ತು…ಕುಡೀತಾ ಇದೀರಾ.. ಕುರುರ‍್ಕ ಏನೋ ಮಾಡೋದು ಲೇಯ್..

ಅಶೋಕ್ :       ಅಣಾ ನಾನು ವಕ್ಕಲಿಗರಿಗೆ ತು.. ಕುಡಿತಿರೋ ಇನ್ನೊಬ್ಬರ ತು… ಕುಡೀತೀರೋ ಅದೆಲ್ಲಾ ಬೇಕಾಗಿಲ್ಲಾ…

ಜೆ.ಕೆ.ಜಯರಾಮ್  : ನೀನು ಯಾವನೋ ಹೇಳೋಕಾ ಕಾಮೆಂಟ್ ಮಾಡೋಕಾ..

ಅಶೋಕ್ :       ಅಯ್ಯೋ ನನ್ನಿಷ್ಟ… ನನ್ನ ಕೇಳಿದ್ರೆ ನಾನು ಕಾಮೆಂಟ್ ಮಾಡ್ದೆ…

ಜೆ.ಕೆ.ಜಯರಾಮ್  : ನೀನು ಯಾರೋ ಕಾಮೆಂಟ್ ಮಾಡೋಕಾ..ನನ್ನ

ಅಶೋಕ್ :       ನೀನು ಯಾರಣ್ಣಾ ಅದನ್ನ ನನ್ನನ್ನ ಕೇಳೋಕಾ ಇಕ್ಕಣ್ಣಾ ಫೋನು

ಜೆ.ಕೆ.ಜಯರಾಮ್  : ನೀನು ಯಾರೋ ಕಾಮೆಂಟ್ ಮಾಡೋಕೆ…

ಅಶೋಕ್ :       ನಾನು ಕಾಮೆಂಟ್ ಮಾಡಿದ್ದೀನಲ್ಲಾ ಕಾಮೆಂಟು.. ನೀನು ಮಾಡು ಕಾಮೆಂಟು

ಜೆ.ಕೆ.ಜಯರಾಮ್  : ಏನ್ ಶಾ…ಮಾಡೋದು ಬೊ…ಗಾನ್ಕ ಹೇಯ್..ಏನು ಕೊಡುಗೆ ನಿಂದು ಕುರುಬರ ಸಮಾಜಕ್ಕ

ಅಶೋಕ್ :   ಣೋ .. ನೀನು ಫೋನ್ ಮಾಡಿ ಹಿಂಗೆಲ್ಲಾ ದಮ್ಕಿಹಾಕಿದ್ರೆ ಚೆನ್ನಾಗಿರಲ್ಲಾ..

ಜೆ.ಕೆ.ಜಯರಾಮ್  : ಏನ್ ಮಾಡಿದ್ದೀಯ ಸಮಾಜಕ್ಕಾ…

ಅಶೋಕ್ :   ಣೋ.. ನೀನು ಏನ್ಮಾಡಿದ್ದೀಯ ನಾನೇನು ಮಾಡಿದ್ದೀನಿ ಅನ್ನೋದು ಸೆಕೆಂಡ್ರೀ..

ಜೆ.ಕೆ.ಜಯರಾಮ್  : ಎಲ್ಲಿದ್ದೀಯ ಹೇಳೋಲೇಯ್ ಬತ್ತೀನಿ ಲೇಯ್.. ದಮ್ಕಿ ಏನು ಶಾ.. ಹಾಕೋದು..ನಿನ್ಮೇಲೇನೋ ದಮ್ಕಿ ಹಾಕೋದು ಲೇಯ್

ಅಶೋಕ್ :       ನಾನೇಣ್ಣಾ ನಿನ್ಮೇಲೆ ದಮ್ಕಿ ಹಾಕಿದ್ದೀನೇಣ್ಣಾ

ಜೆ.ಕೆ.ಜಯರಾಮ್  : ಅಲ್ಲಾ ನೀನು ಹೇಳ್ತಾ ಇದ್ದೀಯಲ್ಲಾ ಏನು ದಮ್ಕಿ ಹಾಕೋದು ಅಂತೇಳಿ

ಅಶೋಕ್ :       ಈವಾಗ ನೀನು ಹಂಗೇತಾನೆ ಮಾತಾಡ್ತಿರೋದು ನನಗೆ.

ಜೆ.ಕೆ.ಜಯರಾಮ್  : ನಿನ್ದು ಏನು ಹೇಳು ಫಸ್ಟು..

ಅಶೋಕ್ :       ಅಯ್ಯೋ ನನ್ನ ಕೊಡುಗೆ ಏನೋ ಐತೆ …..

ಜೆ.ಕೆ.ಜಯರಾಮ್  : ಕುರುಬ ಸಮಾಜಕ್ಕ ನಿಂದೇನಪ್ಪಾ ..

ಅಶೋಕ್ :       ನಾನೂ ಹಾಸ್ಟಲ್ ಸೀಟುಗಳು ಕೊಡಿಸಿದ್ದೀನಿ ಮಕ್ಕಳಿಗೆ ಫೀಸುಗಳು ಕೊಡಿಸಿದ್ದೀನಿ ಅದೆಲ್ಲಾ ಹೇಳಿಕೊಳ್ಳೋಂತಾ ಅವಶ್ಯಕತೆ ಇಲ್ಲ ನನಗೆ

ಜೆ.ಕೆ.ಜಯರಾಮ್  : ಕನಕ ಜಯಂತಿಗೆ ಯಾವತ್ತಾನ ದುಡ್ಡು ಕೊಟ್ಟಿದ್ದೀಯಾ…

ಅಶೋಕ್ :       ಏನಣ್ಣ..

ಜೆ.ಕೆ.ಜಯರಾಮ್  : ಕನಕ ಜಯಂತಿಗೆ ಯಾವತ್ತಾದ್ರ ದುಡ್ಡು ಕೊಟ್ಟಿದ್ದೀಯಾ..

ಅಶೋಕ್ :       ನಾನು ಕನಕ ಜಯಂತಿಗೆ ನಾನು ಯವತ್ತೂ ದುಡ್ಡು ಕೊಟ್ಟಿಲ್ಲ, ನಾನು ಕೊಡುಗೆ ಕೊಡೋದು ನಾನು ಕೊಡ್ತಾ ಇದ್ದೀನಿ

ಜೆ.ಕೆ.ಜಯರಾಮ್  : ಕುರುಬರ ಹಾಸ್ಟಲ್‌ಗೆ ನಿಂದೇನಾದ್ರು ಕೊಡುಗೆ ಐತಾ

ಅಶೋಕ್ :       ಅಣಾ ನಿಂದೇನೈತಣ್ಣಾ ಕುರುಬರ ಹಾಸ್ಟಲ್‌ಗೆ

ಜೆ.ಕೆ.ಜಯರಾಮ್  : ಬಾರೋ ನಾನು ತೋರಿಸ್ತೀನಿ

ಅಶೋಕ್ :       ಹೂಂ ..ಬರ್ತೀನಿ..

ಜೆ.ಕೆ.ಜಯರಾಮ್  : ಕುರುಬರ ಹಾಸ್ಟಲ್‌ಗೆ ಏನ್ಮಾಡಿದ್ದೀನಿ ತೋರಿಸ್ತೀನಿ ಬಾರೋ.. ಕುರುಬರ ಹಾಸ್ಟಲ್‌ಗೆ ಏನೇನು ಮಾಡಿದ್ದೀನಿ ಅಂತ ಬಹಿರಂಗವಾಗಿ ರ‍್ರೋ…ಬಾ..

ಅಶೋಕ್ :       ಹೂಂ ಆಯ್ತು..ಕುಂತ್ಕೊಳ್ಳೋಣ ಬಿಡು ಗಾಂಧೀ ತಾತನ ಮುಂದೇನೆ ಕುಂತ್ಕೊಳ್ಳೋಣ

ಜೆ.ಕೆ.ಜಯರಾಮ್  :  ಬಾ.. ತಿಳ್ಕಂಡ ಮಾತಾಡೋದು ಕಲೀರೋ ಲೇಯ್ ..

ಅಶೋಕ್ :       ಆಯ್ತು.. ಆಯ್ತು…

ಜೆ.ಕೆ.ಜಯರಾಮ್  : ಜಾತಿಗಾಗೇ ನಾವು ಮಾಡೋದು ಲೇಯ್

ಅಶೋಕ್ :       ಹೂಂ..

ಜೆ.ಕೆ.ಜಯರಾಮ್  : ಸಿದ್ಧರಾಮಯ್ಯನಿಗೆ ನಾನು ಮಾಡ್ತಾ ಇದ್ದೀನಿ… ವರ್ತೂರ್ ಪ್ರಕಾಶ್‌ಗೆ ಆತನು(ಮುನಿಯಪ್ಪ) ಮಾಡ್ತಾ ಇದ್ದಾನೆ

ಅಶೋಕ್ :       ನಾನು ಕುಮಾರಸ್ವಾಮಿಗೆ ಮಾಡ್ತಾ ಇದ್ದೀನಿ.

ಜೆ.ಕೆ.ಜಯರಾಮ್  : ನಿನ್ನಂಗೆ ನಾನು ವಕ್ಕಲಿಗನಿಗೆ ಮಾಡ್ತಾ ಇಲ್ಲಾ

ಅಶೋಕ್ :       ನಾನು ವಕ್ಕಲಿಗನಿಗಲ್ಲಣೋ … ಅಲ್ಲಿ ಬಂಡೆಪ್ಪ ಕಾಶೆಂಪೂರ್ ಎಲ್ರೂ ಅವ್ರೆ..

ಜೆ.ಕೆ.ಜಯರಾಮ್  : ಕೋಲಾರದ್ದು ಹೇಳಪ್ಪಾ

ಅಶೋಕ್ :       ನಮ್ಮ ಸಮಾಜದ ಲೀಡರ್‌ಗಳು ಎಲ್ಲಾ ಕಡೆ ಇದ್ದಾರಣ್ಣಾ ನಾವು ನಮ್ಮ ಸಮಾಜದ ಲೀಡರ್‌ಗಳ ಹಿಂದೇನೆ ಇದೀವಿ. ಎಂ.ಎಲ್.ಸಿ ಆಗಿರೋ ತಿಪ್ಪೇಸ್ವಾಮಿಯವರೂ ನಮ್ಮವರೇ..ಆಯ್ತಾ. ನೀವೊಬ್ಬರೇ .. ಒಂದೇ ಜಾತಿಯವರನ್ನು ಇಟ್ಕಂಡು ಬದುಕಕ್ಕಾಗಲ್ಲ ತಿಳಕಳ್ರಿ..

ಜೆ.ಕೆ.ಜಯರಾಮ್  : ಮಾತಾಡೋದು ಕಲಿರೋ ಲೇಯ್..

ಅಶೋಕ್ :       ನಮಗೆ ಎಷ್ಟು ಬೇಕೋ ಅಷ್ಟು ಮಾತಾಡೋದು ಕಲಿಸಿದ್ದಾರೆ, ನಾವು ಇನ್ನೊಬ್ಬರ ಹತ್ರ ಕಲಿಯುವಂತಾ ಅವಶ್ಯಕತೆ ಇಲ್ಲ.. ನಾವು ಮಾತಡ್ತಾ ಇದ್ದೀರಿ.

ಜೆ.ಕೆ.ಜಯರಾಮ್  : ಮಾತಾಡೋದು ಚೆನ್ನಾಗಿ ಮಾತಾಡೋದು ಕಲಿಯಿರೋ…ಅದೆಲ್ಲಾ ದೊಡ್ಡದೇನಲ್ಲಾ ಕಾಮೆಂಟ್ ಮಾಡೋದು.. ಯರ‍್ಯಾರು ಏನೇನು ಮಾಡಿದ್ದಾರೆ ಅಂತ ತಿಳ್ಕಂಡು ಮಾತಾಡ್ರೋ..

ಅಶೋಕ್ :       ಅಣಾ ನಾನು ನಿಮ್ಮನ್ನಾರನ್ನು ಏನು ಅಂದಿಲ್ಲಾ..ನಾನು ಹೇಳಿರೋದು ನಿಮ್ಮನ್ನ ಅಧ್ಯಕ್ಷರು, ಕಾರ್ಯಾದರ್ಶಿ ಮಾಡಿರೋದು….

ಜೆ.ಕೆ.ಜಯರಾಮ್  : ಯಾರು ನೀವು ಮಾಡಿದ್ರಾ ನಮ್ಮನ್ನಾ…

ಅಶೋಕ್ :       ನಾನು ಮಾಡಿಲ್ಲಣ್ಣಾ… ಇಡೀ ಸಮಾಜ ಮಾಡಿರೋದು..

ಜೆ.ಕೆ.ಜಯರಾಮ್  : ಯಾವ ಸಮಾಜಾನೂ ಮಾಡಿಲ್ಲ ನಾವೇ ಮಾಡಿರೋದು ಸಂಘನಾ…

ಅಶೋಕ್ :       ಹೌದಾ.. ಸರಿ ಬಿಡಣ್ಣಾ…

ಜೆ.ಕೆ.ಜಯರಾಮ್  : ತಂಬಳ್ಳಿ ಮುನಿಯಪ್ಪನೂ..ನಾನೂ ಜಂಬಾಪುರ ವೆಂಕಟ್ರಾA ನಾವೆಲ್ಲಾ ಮಾಡಿದ್ದು. ಸಂಘನೇ ಇರಲಿಲ್ಲ 25 ವರ್ಷಗಳಿಂದ ಕೋಲಾರದಲ್ಲಿ..

ಅಶೋಕ್ :       ಯಾರಣ್ಣಾ ಹೇಳಿದ್ದಣ್ಣೋ …ರಾಮಚಂದ್ರಣ್ಣ ಕಾಲದಿಂದ ಸಂಘ ಇದೆಯಣ್ಣೋ..

ಜೆ.ಕೆ.ಜಯರಾಮ್  : ಯಾವನೋ ಹೇಳಿದ್ದೂ..ಡಾಕುಮೆಂಟ್ ಎತ್ಕಂಡು ಬಾರೋ..ಲೇ.

ಅಶೋಕ್ :       ಅಣಾ ನೀವೆಲ್ಲಾ ಆತನು ಹಾಕಿದ ಬೇಸ್ ಮೇಲೆ ಬಂದಿರೋದಣ್ಣೋ

ಜೆ.ಕೆ.ಜಯರಾಮ್  : ಹೇಯ್ ಆ ಕಥೆಯಲ್ಲಾ ಬೇಡ ಡಾಕುಮೆಂಟ್ಸ್ ತಗೊಂಡು ಬಾ

ಅಶೋಕ್ :       ಏನ್ ಡಾಕುಮೆಂಟ್ಸ್ ತಗಂಡುಬರೋದು..ರಾಮಚAದ್ರಣ್ಣ ನೋಡಿಲ್ಲೇನು..ಕುರುಬರಪೇಟೆ ರಾಮಚಂದ್ರಣ್ಣ ಮಾಡಿದ ಮೇಲೆ ನೀವೆಲ್ಲಾ ಬಂದಿದ್ದು. ಕುರುಬಪೇಟೆ ರಾಜಣ್ಣ ಅಧ್ಯಕ್ಷನಾಗಿದ್ದು ನೀವು ನೋಡಿಲ್ವೇನು..

ಜೆ.ಕೆ.ಜಯರಾಮ್  : ಸಂಘ ರಿಜಿಸ್ಟರ್ ಮಾಡಿದ್ದಾರೇನು..

ಅಶೋಕ್ :       ಯಾವಾಗಣ್ಣಾ..ಸಂಘ ರಿಜಿಸ್ಟರ್ ಆಗಬೇಕೇನಿಲ್ಲಾಣ್ಣಾ

ಜೆ.ಕೆ.ಜಯರಾಮ್  : 6 ತಿಂಗಳು ಮಧುಣ್ಣ,6 ತಿಂಗಳು ಮುನೆಪ್ಪಣ್ಣ, 6 ತಿಂಗಳು ರಾಜಣ್ಣ.. ಇಂಗ್ಮಾಡಾಕ,  ಅರ‍್ಯಾರುಬೇಕೋ ಅವರನ್ನ ಮಾಡ್ಕಳ್ಳಕೇನೋ ಸಂಘ ಇರೋದು

ಅಶೋಕ್ :       ಹಿಂದೆಯಲ್ಲಾ ಆಗೈತಲ್ಲಾ….

ಜೆ.ಕೆ.ಜಯರಾಮ್  : ತಿಳಕೋ ಅಶೋಕ ತಿಳಕೋ..ಫಸ್ಟು ಏನು ಅಂತ ತಿಳಕೋ.. ತಿಳಕೊಂಡು ಮಾತಾಡೋದು ಕಲಿ..ಅರ್ಥ ಆಯ್ತಾ..

ಅಶೋಕ್ :       ಹಾಂ.. ಇವಾಗ ತಿಳಕಂಡೇ ನಾನು ಮಾತಾಡಿರೋದು ನಾವು ಯಾರನ್ನೇನು ಕೆಟ್ಟದಾಗಿ ಏನೂ ಮಾತಾಡಿಲ್ಲಣ್ಣಾ

ಜೆ.ಕೆ.ಜಯರಾಮ್  : ಹೇಯ್ ಕೊಡುಗೆ ಏನು ಮಾತಡಿದ್ದೀಯಲ್ಲಾ…

ಅಶೋಕ್ :       ಅಣ್ಣಾ ನಾನು ಕೊಡುಗೆ ಬಗ್ಗೆ ಮಾತಾಡೇ ಇಲ್ಲ. ನೀವು ಮಾತಾಡ್ತಾ ಇರೋದು ಕುರುಬ ಸಮಜನ ಗೊಂದಲಕ್ಕೀಡು ಮಾಡ್ತಾ ಇದ್ದೀರಿ ಅಂತ ಹೇಳಿದ್ದೀನಿ.

ಜೆ.ಕೆ.ಜಯರಾಮ್  : ಬಾರಪ್ಪಾ…ಈಗ ನಾವು ನಿಮ್ಮಂಗೆ ಜೆಡಿಎಸ್‌ಗೆ ಓಟ್ ಕೇಳ್ತಾ ಇಲ್ಲಾ..

ಅಶೋಕ್ :       ನಾವೇನು ಬಿಜೆಪಿಗಾಗ್ಲಿ, ಕಾಂಗ್ರೆಸ್‌ಗಾಗ್ಲಿ ಓಟ್ ಕೇಳ್ತಾ ಇಲ್ಲ. ನಾನು ನಮ್ಮ ಪಾರ್ಟಿ ಸ್ಟಾಂಡಲ್ಲಿ ಇದ್ದೀನಿ ನಾನು.

ಜೆ.ಕೆ.ಜಯರಾಮ್  : ನಾವು ನಮ್ಮ ಪಾರ್ಟಿಲೀ ಬಿಜೆಪಿ ಆದ್ರೂ ಕುರುಬುಗೇ, ಕಾಂಗ್ರೆಸ್ ಆದ್ರೂ ಕುರುಬರಿಗೇ ಕೆಲಸ ಮಾಡ್ತಾ ಇರೋದು..ಅರ್ಥ ಆಯ್ತಾ… ತಿಳಕೋ ಫಸ್ಟು…

ಅಶೋಕ್ :       ನಾವು ಸ್ಟೇಟ್ ವೈಸ್ ಕುರುಬಕೇ ಕೆಲಸ ಮಾಡ್ತಾ ಇರೋದು

ಜೆ.ಕೆ.ಜಯರಾಮ್  : ಅರ್ಥ ಆಯ್ತಾ… ನೀನು ನಮ್ಮ ಕೊಡುಗೆ ಏನು ಸಮಾಜಕ್ಕೆ ಅಂತ ತಿಳುಕೋ ಫಸ್ಟು.. ಕೊಡುಗೆ ಏನು ಅಂತ ತಿಳಕೋ

ಅಶೋಕ್ :       ನಿಮ್ಮ ಕೊಡುಗೆ ಏನು ಅಂತ ಒಂದು ಲಿಸ್ಟ್ ಹಾಕಿ ಬಿಡಣ್ಣಾ..

ಜೆ.ಕೆ.ಜಯರಾಮ್  : ಲಿಸ್ಟ್ ಹಾಕ್ತೀನಿ ತೆಗೆಳ್ಳೋ.. ಆಮೇಲೇನಂತಿಯಾ ನನ್ನ..

ಅಶೋಕ್ :       ನೀವೇನು ಹೇಳಿದರೆ ಅದನ್ನ ಕೇಳೋಣ ಹಾಕಣ್ನ

ಜೆ.ಕೆ.ಜಯರಾಮ್  : ತೆಗೋ ಲಿಸ್ಟ್ ಹಾಕ್ತೀನಿ ತಗೋ

ಅಶೋಕ್ :        ಹಾಕು ಹಾಕು

 

* ಮುಕ್ತಾಯ *

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!