• Thu. Sep 19th, 2024

PLACE YOUR AD HERE AT LOWEST PRICE

ಮಂಗಳಮುಖಿಯರ ಸಬಲೀಕರಣದ ಹೈನುಗಾರಿಕೆ ವರದಿಗೆ ಚಂದ್ರಶೇಖರ್ ರಿಗೆ ವಿದ್ಯುನ್ಮಾನ ವಿಭಾಗದಲ್ಲಿ ಅತ್ಯುತ್ತಮ ವರಿಧಿಗಾರಿಕೆಗೆ ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಸಂಘದ  ಪ್ರಶಸ್ತಿ ಲಭಿಸಿದೆ.
ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ  ಹೈನುಗಾರಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಬಲೀಕರಣವಾದ  ಮಂಗಳಮುಖಿಯರ ವರದಿಗೆ ಕರ್ನಾಟಕ ಕಾರ್ಯನಿರತ  ಪತ್ರಕರ್ತರ ಸಂಘ ನೀಡುವ ವಿದ್ಯುನ್ಮಾನ ವಿಭಾಗದ ಪ್ರಶಸ್ತಿಗೆ  ಕೋಲಾರದ ಚಂದನ ವಾಹಿನಿ ವರದಿಗಾರರಾದ ಎಸ್.ಚಂದ್ರಶೇಖರ್  ಭಾಜನರಾಗಿದ್ದಾರೆ.
ಸಮಾಜದಲ್ಲಿ ನಿರ್ಲಕ್ಷ್ಯತೆಗೆ ಒಳಗಾಗಿರುವ  ಮಂಗಳಮುಖಿಯರು ಕೋಲಾರ ತಾಲ್ಲೂಕಿನ ಕೋಗಿಲಹಳ್ಳಿ ಬಳಿ
ಹೈನುಗಾರಿಕೆ ಆರಂಭಿಸಿ ಹಾಲು ಸರಬರಾಜು ಮಾಡುವ ಮೂಲಕ ಹೊಸ  ಬದುಕು ಕಟ್ಟಿಕೊಂಡ ಬಗ್ಗೆ ದೂರದರ್ಶನದಲ್ಲಿ ವರದಿ  ಪ್ರಸಾರವಾಗಿತ್ತು.
ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಮಾನವೀಯ  ವರದಿಗೆ ಪ್ರಶಸ್ತಿ ನೀಡಲಾಗಿದೆ. ಈ ಹಿಂದೆ ಎಸ್.ಚಂದ್ರಶೇಖರ್ ಮುಳಬಾಗಿಲು ತಾಲ್ಲೂಕಿನ ದೊಂಬರ  ಗುಡಿಸಲಿನ ಲೈಂಗಿಕ ಅಲ್ಪಸಂಖ್ಯಾತರ ಪರಿವರ್ತನೆ, ಶಿಡ್ಲಘಟ್ಟ ಪಟ್ಟಣದಲ್ಲಿ
ಜೀವಂತವಾಗಿದ್ದ ಮಲ ಹೊರುವ ಪದ್ದತಿ ಬಗ್ಗೆ ವರದಿ ಮೂಲಕ ಗಮನಸೆಳೆದಿದ್ದರು.
 ದೇಶದ ಗಮನ ಸೆಳೆದಿದ್ದ ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿ ದಲಿತರ ಸಜೀವ ದಹನ  ಪ್ರಕರಣದ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ  ನೀಡುವ ಅತ್ಯುತ್ತಮ ಮಾನವೀಯ ವರದಿಯ ಪಟೇಲ್ ಬೈರ
ಹನುಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದರು.
 ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘ ಸಂಘಟನೆಗಾಗಿ ನೀಡುವ  ಡಿ.ವಿ.ಗುಂಡಪ್ಪ ವರದಿಗೆ ಸಹ ಭಾಜನರಾಗಿದ್ದರು. ಕಂಬಾಪಲ್ಲಿ ವರದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ  ಅಭಿಮಾನಿ ಪ್ರಶಸ್ತಿಗೆ ಭಾಜನರಾಗಿದ್ದರು.
 ಕರ್ನಾಟಕ ಕಾರ್ಯನಿರತ  ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಅಕಾಡೆಮಿ ಸೇರಿದಂತೆ ರಾಜ್ಯ ಮಟ್ಟದಲ್ಲಿ ಏಳು ಬಾರಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಚಂದ್ರಶೇಖರ್ ರವರು ಪ್ರಸ್ತುತ  ಕೋಲಾರ ಜಿಲ್ಲೆಯ ಚಂದನ ವಾಹಿನಿಯ ಜಿಲ್ಲಾ ವರದಿಗಾರರಾಗಿದ್ದಾರೆ.
ಕೋಲಾರದ ಹೊನ್ನುಡಿ ಪತ್ರಿಕೆಯ ಮೂಲಕ ಪತ್ರಿಕೋದ್ಯಮ  ಪ್ರವೇಶ ಮಾಡಿದ ಚಂದ್ರಶೇಖರ್, ಕನ್ನಡ ಪ್ರಭ, ಇಂಡಿಯನ್ ಎಕ್ಸ್‍ಪ್ರೆಸ್, ಜನವಾಹಿನಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
 ಹೈದರಾಬಾದ್ ಮೂಲದ ಈ-ಟಿ.ವಿ ಹಾಗೂ ಬೆಂಗಳೂರು ಕಸ್ತೂರಿ ವಾಹಿನಿಗಳ ಜಿಲ್ಲಾ ವರದಿಗಾರರಾಗಿ ಸಹ
ಕಾರ್ಯನಿರ್ವಹಿಸಿದ್ದಾರೆ.ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪದಾಧಿಕಾರಿಗಳಿಗೆ ಚಂದ್ರಶೇಖರ್ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!