• Sun. Apr 28th, 2024

ಸಂಪಂಗಿ ಮತ್ತು ವೆಂಕಟಮುನಿಯಪ್ಪರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಿ ದಲಿತ ಸಂಯುಕ್ತ ರಂಗದಿಂದ  ಮನವಿ.

PLACE YOUR AD HERE AT LOWEST PRICE

ಕರ್ನಾಟಕದಲ್ಲಿ ಬಲಗೈ (ಛಲವಾದಿ) ಸಮುದಾಯಕ್ಕೆ ಬಿ.ಜೆಪಿ ಪಕ್ಷದಲ್ಲಿ ಹೆಚ್ಚು ಪ್ರಾತಿನಿದ್ಯ ನೀಡಬೇಕು ಎಂದು ಕೋಲಾರದಲ್ಲಿ ಬಿಜೆಪಿ ನಾಯಕ ಸಂತೋಷ್ ಜಿಗೆ ಮನವಿ ನೀಡಿದ ದಲಿತ ಸಂಘಟನೆಗಳ ಸಂಯುಕ್ತ ರಂಗದ ಮುಖಂಡರು ಬಲಗೈ ಸಮುದಾಯದ ವೈ.ಸಂಪಂಗಿ ಮತ್ತು ಬಿ.ಪಿ.ವೆಂಕಟಮುನಿಯಪ್ಪರಿಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡಲು ಮನವಿ ಮಾಡಿದರು.

ಕರ್ನಾಟಕದಲ್ಲಿ ಎಡಗೈ (ಮಾದಿಗ) ಸಮುದಾಯಕ್ಕಿಂತ ಬಲಗೈ (ಛಲವಾದಿ) ಸಮುದಾಯವು ಹೆಚ್ಚು ಜನಸಂಖ್ಯೆ ಇದ್ದು, ಭಾಗಶಃ ಸಮುದಾಯ ಬಿಜೆಪಿಗೆ ಬೆಂಬಲ ಸೂಚಿಸಿದೆ. ರಾಜ್ಯಾದ್ಯಂತ ಸಮುದಾಯವನ್ನು ಸಂಘಟಿಸಿ  ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಕೆಲಸ ಮಾಡಲು ಬಿಜೆಪಿಯಲ್ಲಿನ ಜನಪ್ರತಿನಿಧಿಗಳು ನಮಗೆ ಸೂಚನೆ ನೀಡಿದ್ದಾರೆ.

ಕೋಲಾರ ಸಂಸದ ಎಸ್.ಮುನಿಸ್ವಾಮಿ, ಎಂ.ಎಲ್.ಸಿ ಛಲವಾದಿ ನಾರಾಯಣಸ್ವಾಮಿ, ಸಂಸದ ಶ್ರೀನಿವಾಸ ಪ್ರಸಾದ್, ಮಾಜಿ ಶಾಸಕರುಗಳಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ, ಮುಖಂಡ ಬಿ.ವಿ.ಮಹೇಶ್ ರವರುಗಳು ನಮಗೆ ನೀಡಿರುವ ಸೂಚನೆಯಂತೆ ರಾಜ್ಯಾದ್ಯಂತ ಸಮುದಾಯವನ್ನು ಸಂಘಟಿಸಿದ್ದು ಅದರಂತೆ ನಾವು ಬಿಜೆಪಿ ಪಕ್ಷದ ಪರವಾಗಿ ಕೆಸ ಮಾಡುತ್ತಿದ್ದೇವೆ.

ನಮ್ಮ ಬಲಗೈ (ಛಲವಾದಿ) ಸಮುದಾಯಕ್ಕೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ರಾಜಕೀಯ ಪ್ರಾತಿನಿದ್ಯ ಸರಿಯಾಗಿ ನೀಡಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಬಿ.ಜೆ.ಪಿ ಪಕ್ಷದಲ್ಲಿ ಶಾಸಕರಾಗಲು ಕೋಲಾರ ಜಿಲ್ಲೆಯಲ್ಲಿ ವೈ.ಸಂಪಂಗಿ ಮತ್ತು ಬಿ.ಪಿ.ವೆಂಕಟಮುನಿಯಪ್ಪರಿಗೆ ಟಿಕೆಟ್ ಕೊಟ್ಟರೆ ಎರಡೂ ಕ್ಷೇತ್ರಗಳಲ್ಲಿ ಹಗಲಿರುಳು ದುಡಿದು ಅವರುಗಳನ್ನು ಗೆಲ್ಲಿಸುತ್ತೇವೆ.

ನಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿದ್ಯವನ್ನು ಬಿಜೆಪಿ ಪಕ್ಷದಲ್ಲಿ ಕೋರುವ ನಾವು ಸಂಸದ ಎಸ್.ಮುನಿಸ್ವಾಮಿರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ನಮ್ಮ ಸಮುದಾಯ ಇನ್ನಷ್ಟು ಹುಮ್ಮಸ್ಸುಗೊಂಗು ಬಿ.ಜೆ.ಪಿ ಪಕ್ಷಕ್ಕೆ ಹೆಚ್ಚು ಮತಗಳು ಬರುವಂತಾಗುತ್ತದೆ. ಉಳಿದಂತೆ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿದ್ಯ ಹೆಚ್ಚಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾದ್ಯಕ್ಷ ಡಾ.ವೇಣುಗೋಪಾಲ್, ದಲಿತ ಸಂಘಟನೆಗಳ ಸಂಯುಕ್ತ ರಂಗದ ಸಂಸ್ಥಾಪಕ ಅದ್ಯಕ್ಷ ಡಾ.ಎಂ.ಮುನಿರಾಜು, ರಾಜ್ಯ ಅದ್ಯಕ್ಷ ವಿ.ರಾಜ್ ಕುಮಾರ್, ಮುಖಂಡರಾದ ಡಾ.ಮುನಿಆಂಜನಪ್ಪ, ಸಮ್ರಾಟ್ ದೇವರಾಜ್, ಕೆ.ವಿ.ನಾರಾಯಣಸ್ವಾಮಿ, ರವಿ, ಯುಗಂದರ್ ನಾರಾಯಣಸ್ವಾಮಿ, ಜಿ.ಯಲ್ಲಪ್ಪ, ವೆಂಕಟೇಶ್, ಕಾಶಿ, ಮಂಜುನಾಥ್, ಕೆ.ಬಿ.ದೇವರಾಜ್, ತಂದೂರಿ ಮಂಜುನಾಥ್ ಮೊದಲಾದವರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!