• Sun. May 12th, 2024

ಜಮೀನಿಗೆ ಹೋಗುವ ರಸ್ತೆಯಲ್ಲಿ ಪಾಲಾರ್ ಕೆರೆ ನೀರು: ಶಾಸಕಿ ವಿಫಲವೇ ಕಾರಣ ಮೋಹನಕೃಷ್ಣ.

PLACE YOUR AD HERE AT LOWEST PRICE

 

ಕೆಜಿಎಫ್ ತಾಲ್ಲೂಕಿನ ಬೇತಮಂಗಲದ ಪಾಲಾರ್ ಕೆರೆಯಿಂದ ನೀರು ರಸ್ತೆಯ ಮೇಲೆ ಸದಾ ಹರಿಯುತ್ತಿದ್ದು ರೈತರ ಅನುಕೂಲಕ್ಕೆ  ಸೇತುವೆ ನಿರ್ಮಿಸುವಲ್ಲಿ ಸ್ಥಳೀಯ ಶಾಸಕರಾದ ರೂಪಕಲಾ ವಿಫಲರಾಗಿದ್ದಾರೆ ಎಂದು ಸಮಾಜ ಸೇವಕ ವಿ.ಮೋಹನಕೃಷ್ಣ ಆರೋಪ ಮಾಡಿದರು.

ಪಾಲಾರ್ ಕೆರೆಯ ನೀರು ರೈತರು ಜಮೀನುಗಳಿಗೆ ಹೋಗುವ ರಸ್ತೆಯಲ್ಲಿ ಹರಿಯುತ್ತಿದ್ದು, ರೈತರು ಜಮೀನುಗಳಿಗೆ ಹೋಗಲು ತೊಂದರೆಯಾಗಿರುವ ಪಾಲಾರ್ ಕೆರೆಯ ಬಳಿ ಸ್ಥಳಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ನೀರು ಸದಾ ಹರಿಯುತ್ತಿರುವುದರಿಂದ ರೈತರು ತಮ್ಮ ಜಮೀನು ಮತ್ತು ತೋಟಗಳಿಗೆ ಹೋಗಲು ಆಗದೆ ತೊಂದರೆಯಾಗಿದೆ. ರಸ್ತೆಯಲ್ಲಿ ಸದಾ ನೀರು ಹರಿಯುತ್ತಿರುವುದರಿಂದ ರೈತರು ಬೆಳೆದ ಬೆಳೆಯನ್ನು ಸಾಗಾಟ ಮಾಡಲು ತೊಂದರೆಯಾಗುತ್ತಿದೆ ಎಂದು ಆರೋಪ ಮಾಡಿದರು.

ಅಭಿವೃದ್ಧಿಯನ್ನು ಮರೆತಿರುವ ಶಾಸಕರು ರೈತರ ಈ ದುಸ್ಥಿತಿಗೆ ಕಾರಣವನ್ನು ತಿಳಿಸಬೇಕು ಅಥವಾ ಪರೋಕ್ಷವಾಗಿ ಕ್ಷೇತ್ರದಲ್ಲಿ ಅಧಿಕಾರ ನಡೆಸುತ್ತಿರುವ ಡಿಸಿಸಿ ಬ್ಯಾಂಕ್ ಅದ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರ ಮೂಲಕ ಕಾರಣ ಹೇಳಿಸಬೇಕೆಂದು ಒತ್ತಾಯಿಸಿದರು.

ಮೋಹನಕೃಷ್ಣ ಓಂ ಶಕ್ತಿ ಅಯ್ಯಪ್ಪ ದೇಗುಲಕ್ಕೆ ಬಸ್ಸುಗಳು ಬಿಟ್ಟರು ಎಂಬ ಕಾರಣಕ್ಕೆ ಶಾಸಕರೂ ಬಸ್ಸುಗಳನ್ನು ಬಿಡಲು ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದ ಅವರು ಪಾಲಾರ್ ನದಿ ದಡದ ರೈತರು ಹೊಲ ಮತ್ತು ತೋಟಗಳಿಗೆ ಹೋಗಲು ಕಷ್ಟಪಡುತ್ತಿರುವುದು ತಿಳಿಯುತ್ತಿಲ್ಲವೆ ಎಂದು ಪ್ರಶ್ನಿಸಿದರು.

ವರ್ಷಪೂರ್ತಿ ಇಲ್ಲಿ ನೀರು ಹರಿಯುತ್ತಿದ್ದು ರೈತರಿಗೆ ತುಂಬಾ ತೊಂದರೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದರೂ ಅಭಿವೃದ್ಧಿ ಮರೆತ ಶಾಸಕರು ಈ ಬಗ್ಗೆ ಯಾಕೆ ಇನ್ನೂ ಕ್ರಮ ಜರುಗಿಸಿ ಸೇತುವೆ ನಿರ್ಮಿಸಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಪಾಲಾರ್ ಕೆರೆಯ ನೀರು ರೈತರು ಜಮೀನುಗಳಿಗೆ ಹೋಗುವ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಈ ಕೂಡಲೆ ಶಾಸಕರು ಕ್ರಮ ಜರುಗಸಿದೆ ಹೋದರೆ ರೈತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.

ಇದಕ್ಕೂ ಮೊದಲು ಬೇತಮಂಗಲದ ಪಾಲಾರ್ ನದಿ ದಡದಲ್ಲಿರುವ ವಹ್ನಿಕುಲ ಕ್ಷತ್ರಿಯ ದ್ರೌಪತಾಂಬ ದೇವಾಲಯಕ್ಕೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಾಲಯದಕ್ಕೆ 2 ಲಕ್ಷ ರೂ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮುನಿರಾಜು, ಕ್ಯಾಸಂಬಳ್ಳಿ ಜಗದಬಿರಾಮ, ಬಾಬು, ಶ್ರೀನಿವಾಸ್, ರಮೇಶ್, ಪಾಲ್, ಮೋಹನ್, ಕೃಷ್ಣಪ್ಪ, ತೇಜು, ಶ್ರೀನಾಥ್, ವಿಜಿ, ಅಪ್ಪಿ, ಸುಬ್ರಮಣಿ, ಮಲ್ಲಿಕಾರ್ಜುನ, ಮುನೇಗೌಡ, ಪ್ರವೀಣ್, ಸೀನಪ್ಪ, ವೆಂಕಟಪ್ಪ, ಪೂಜಾರಿ ಚಂದ್ರಪ್ಪ, ಕುಮಾರ್, ಮಂಜು, ಕೇಶವಗೌಡ, ರವಿ ಮೊದಲಾದವರಿದ್ದರು.

 

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!