• Mon. Apr 29th, 2024

ಎಚ್‌ಐವಿ ಸೋಂಕಿತರೊಂದಿಗೆ ಕಳಂಕ ತಾರತಮ್ಯ ಮಾಡಿದರೆ ೨ ಲಕ್ಷ ದಂಡ ೨ ವರ್ಷ ಸಜೆ- ೨೦೧೯ ರ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ – ನಿಶಾ ಗೂಳೂರು

PLACE YOUR AD HERE AT LOWEST PRICE

ಎಚ್‌ಐವಿ ಸೋಂಕಿತರು ಸಾಮಾಜಿಕವಾಗಿ ಎದುರಿಸುತ್ತಿರುವ ಕಳಂಕ ತಾರತಮ್ಯ ತಡೆಗೆ ರಾಜ್ಯ ಸರಕಾರ ೨೦೧೯ ರಲ್ಲಿ ಜಾರಿಗೆ ತಂದಿರುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕಾಯ್ದೆ ಕುರಿತು ಸಮಾಜದ ಎಲ್ಲಾ ವರ್ಗಗಳಲ್ಲಿ ಅರಿವು ಮೂಡಿಸಬೇಕೆಂದು ಸಂಗಮ ಸಂಸ್ಥೆ ಯೋಜನಾ ನಿರ್ದೇಶಕಿ ನಿಶಾ ಗೋಳೂರು ಒತ್ತಾಯಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನೆಡದ ಪತ್ರಿಕಾಗೋಷ್ಠಿಯಲ್ಲಿ ಎಚ್‌ಐವಿ ಏಡ್ಸ್ ಸೋಂಕಿತರ ಕಳಂಕ ತಾರತಮ್ಯ ನಿಯಂತ್ರಣ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕರಮದಲ್ಲಿ ಅವರು ಮಾತನಾಡಿದರು.

ಎಚ್‌ಐವಿ ಕಾಯ್ದೆಯನ್ನು ೨೦೧೯ರಲ್ಲಿ ಜಾರಿಗೆ ತರಲಾಗಿದೆ ಆದರೆ, ಹೆಚ್ಚಿನ ಜನರಿಗೆ ಮಾಹಿತಿ ಗೊತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸುವುದು, ಪ್ರಚಾರ ಮಾಡುವುದು ಸರ್ಕಾರದ ಕರ್ತವ್ಯ. ಎಚ್‌ಐವಿ ಸೋಂಕಿತರ ಮೇಲೆ ತಾರತಮ್ಯ ನಡೆಯುತ್ತಿದ್ದರೂ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಕೆ ಇದೆ, ಆದ್ದರಿಂದ ಕಾಯ್ದೆ ಕುರಿತಂತೆ ಪ್ರಚಾರ ಅರಿವು ಅಗತ್ಯ ಎಂದರು.

ಕೊರೊನಾ ಸಮಾಜದ ಎಲ್ಲಾ ವರ್ಗದ ಜನರನು ಬಾಧಿಸಿತು, ಆದರೆ, ಸರಕಾರ ಎಚ್‌ಐವಿ ಸೋಂಕಿತರ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಿಲ್ಲ, ಏಕೆಂದರೆ ಎಚ್‌ಐವಿ ಸೋಂಕಿತರಿಗೆ ಸಾಮಾನ್ಯರಿಗಿಂತಲೂ ಮೂರು ಪಟ್ಟು ಹೆಚ್ಚಿನ ಪೌಷ್ಠಿಕಾಂಶದ ಊಟ ಅಗತ್ಯವಿದೆ, ಕೋಲರ ಜಿಲ್ಲೆಯಲ್ಲಿ ೭ ಸಾವಿರ ಮಂದಿ ಎಚ್‌ಐವಿ ಸೋಂಕಿತರಿದ್ದಾರೆ. ಇವರೆಲ್ಲರಿಗೂ ಪೌಷ್ಠಿಕಾಂಶದ ಊಟವನ್ನು ಸರಕಾರವೇ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ಎಆರ್‌ಟಿ ಕೇಂದ್ರಗಳ ಮೂಲಕ ಸೋಂಕಿತರಿಗೆ ಉಚಿತವಾಗಿ ಮಾತ್ರೆ ಕೊಡುತ್ತಿದ್ದಾರೆ.ಆದರೆ, ಅದು ಸಾಲದು ಮಾತ್ರೆ ತೆಗೆದುಕೊಂಡಾಗ ಪೋಷಕಾಂಶ ಆಹಾರ ತೆಗೆದುಕೊಳ್ಳಬೇಕು. ಬಡವರು ಇದ್ದು ಅವರಿಗೆ ಪೋಷಕಾಂಶ ಆಹಾರ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.

ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕಿ ಹೇಮಲತಾ ಮಾತನಾಡಿ, ಅನೇಕ ಕಾರ್ಯಕ್ರಮ ಕಾಯ್ದೆಗಳಿದ್ದರೂ ಸೋಂಕಿತರಿಗೆ ಕಳಂಕ, ತಾರತಮ್ಯ ಮಾಡಲಾಗುತ್ತಿದೆ.೨೦೧೯ರಲ್ಲಿ ಏಡ್ಸ್ ಕಾಯ್ದೆ ಅನುಷ್ಠಾನಕ್ಕೆ ತರಲಾಗಿದೆ. ದೂರು ನೀಡಿದರೆ ವಿಚಾರಣೆ ನಡೆಸಿ ನ್ಯಾಯ ಒದಗಿಸುತ್ತಾರೆ. ಸಭೆ, ಅರಿವು ಕಾರ್ಯಕ್ರಮ ನಡೆಸಲಾಗುತ್ತದೆ. ಸೋಂಕಿತರ ವಿರುದ್ಧ ಕಳಂಕ ತಾರತಮ್ಯ ದೂರನ್ನು ಓಂಬುಡ್ಸಮನ್ ನ್ಯಾಯಾಽಶರು ಇತ್ಯರ್ಥಪಡಿಸಿ ೨ ಲಕ್ಷ ರೂ ದಂಡ ಮತ್ತು ೨ ವರ್ಷಗಳ ಸಜೆ ವಿಽಸಬಹುದಾಗಿದೆ ಎಂದು ಎಚ್ಚರಿಸಿ, ಸರ್ಕಾರದಿಂದ ಸೋಂಕಿತರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಲಾಗುತ್ತದೆ.

ಸೋಂಕಿತ ಮಕ್ಕಳಿಗೆ ಪ್ರತಿ ತಿಂಗಳು ಸಾವಿರ ರೂಪಾಯಿಯನ್ನು ೩೦೮ ಮಕ್ಕಳಿಗೆ ನೀಡುತ್ತಿದೆ. ಎನ್ ಜಿ ಒ ಸಹಾಯದಿಂದ ಪೋಷಕಾಂಶ ಆಹಾರ ನೀಡಲಾಗುತ್ತದೆ. ಹೆಚ್ಚು ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಸಮ್ಮಿಲನ ಸಂಸ್ಥೆಯ ಕಾರ್ಯದರ್ಶಿ ಹರೀಶ್ ಮಾತನಾಡಿ ಸಂಗಮ ಸಂಸ್ಥೆ ಕೇವಲ ೫೫ ಮಂದಿ ಸೋಂಕಿತರಿಗೆ ಪೋಷಕಾಂಶ ಆಹಾರ ನೀಡುತ್ತಿದೆ. ಉಳಿತಾಯ ಖಾತೆ ಕೂಡ ತೆರೆಯಲಾಗಿದೆ. ಸರ್ಕಾರ ಹಾಗೂ ಸಮ್ಮಿಲನ ಸಂಸ್ಥೆಗೆ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜೀವನ್ ಆಶಾ ನೆಟ್ವರ್ಕ್ ಪ್ರಮೀಳಾ, ಸಮ್ಮಿಲನ ಸಂಸ್ಥೆಯ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!