• Wed. May 15th, 2024

ಕ್ರೈಸ್ತ ಮಿಷನರಿ ಆಸ್ತಿಗಳ ಅಕ್ರಮ ಪರಭಾರೆ ಖಂಡಿಸಿ ಬಿಷಪ್ ಮನೆ ಮುಂದೆ ಅಮರಾಣಾಂತ ಉಪವಾಸ – ಜಯದೇವಪ್ರಸನ್ನ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಪ್ರತಿಷ್ಠಿತ ಕ್ರೈಸ್ತ ಮಿಷನರಿ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ, ಪರಭಾರೆ ಮಾಡುತ್ತಿರುವ ಬಿಷಪ್ ಕರ್ಕೆರೆ ಮನೆ ಮಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕ್ರೈಸ್ತ ಮುಖಂಡ ಜಯದೇವ ಪ್ರಸನ್ನ ಹೇಳಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದ ಪ್ರತಿಷ್ಠಿತ ಇಟಿಸಿಎಂ ಆಸ್ಪತ್ರೆಯನ್ನು ೨೯ ವರ್ಷ ೧೧ ತಿಂಗಳು ಖಾಸಗಿಯವರಿಗೆ ಅಭಿವೃದ್ಧಿ ನೆಪದಲ್ಲಿ ಪರಭಾರೆ ಮಾಡಲು ಹೊರಟಿದ್ದು ಇದರ ವಿರುದ್ದ ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಇಟಿಸಿಎಂ ಆಸ್ಪತ್ರೆಯೂ ಸುಮಾರು ೧೯೧೦ ರಲ್ಲಿ ಪ್ರಾರಂಭವಾಗಿದ್ದು ಸುಮಾರು ಎಂಟು ಎಕರೆ ಜಾಗದಲ್ಲಿದೆ, ನಗರದ ಪ್ರಮುಖವಾದ ಸ್ಥಳದಲ್ಲಿ ಇದ್ದು ತಿಂಗಳಿಗೆ ಕನಿಷ್ಠ ೬೦ ಲಕ್ಷ ಆದಾಯ ಬರುತ್ತದೆ ಅಂಥ ಆಸ್ಪತ್ರೆಯನ್ನು ಮಾರಾಟ ಮಾಡಲು ಬೆಂಗಳೂರಿನ ಬಿಷಪ್ ಎನ್.ಎಲ್ ಕರ್ಕರೆ, ಹಾಗೂ ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ಶಾಂತಕುಮಾರ್ ಮುಂದಾಗಿದ್ದಾರೆ. ಎಂದು ಆರೋಪಿಸಿದರು.

ಕೋಲಾರ ಜಿಲ್ಲೆ ಮತ್ತು ನಗರದಲ್ಲಿ ಬಡವರಿಗೆ ಅದರಲ್ಲೂ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದ ಇಟಿಸಿಎಂ ಆಸ್ಪತ್ರೆಗೆ ಆಡಳಿತಾಽಕಾರಿಯಾಗಿ ಶಾಂತಕುಮಾರ್ ಬಂದ ನಂತರ ಪ್ರಾರ್ಥನೆ ಮಾಡುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ಮಾರಾಟಕ್ಕೆ ಇಳಿದಿದ್ದಾರೆ. ನಗರದಲ್ಲಿ ಇರುವ ಬಾಲ್ಡ್ವಿನ್ ಶಾಲೆಯನ್ನೂ ಮಾರಲು ಹೊರಟಿದ್ದಾರೆ. ಮೆಥೋಡಿಸ್ಟ್ ನಿಯಮಗಳ ಪ್ರಕಾರ ಆಸ್ತಿ ಮಾರಾಟ ಮಾಡುವಂತಿಲ್ಲ ಕೇವಲ ಅಭಿವೃದ್ಧಿಪಡಿಸಬಹುದಾಗಿತ್ತು ಇವರ ವಿರುದ್ದ ಮುಂದಿನ ಭಾನುವಾರದಂದು ಚರ್ಚ್ ಆವರಣದಲ್ಲಿ ಕಪ್ಪು ದಿನ ಆಚರಣೆ ಮಾಡುತ್ತೇವೆ ಜೊತೆಗೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್ ಕರ್ಕರೆ ಮನೆ ಮುಂದೆ ಅನಿರ್ದಿಷ್ಟ ಅವಽ ಅಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮುಖಂಡ ದೇವಕುಮಾರ್ ಮಾತನಾಡಿ ಇತಿಹಾಸ ಪ್ರಸಿದ್ಧವಾಗಿದ್ದ ಆಸ್ಪತ್ರೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಮಾರಾಟ ಮಾಡಲು ಹೊರಟಿದ್ದಾರೆ ಶಾಂತಕುಮಾರ್ ಮೇ ತಿಂಗಳಲ್ಲಿ ನಿವೃತ್ತಿಯಾಗುತ್ತಾರೆ ಅಷ್ಟರಲ್ಲಿ ಹಣ ಬಾಚಿಕೊಂಡು ಹೋಗಲು ಹುನ್ನಾರವಾಗಿದೆ, ಆಸ್ಪತ್ರೆ ಉಳಿಸಲು ಹೋರಾಟ ಅನಿವಾರ್ಯವಾಗಿದೆ ಆಸ್ತಿ ವಿಚಾರದಲ್ಲಿ ಒಬ್ಬರೆ ನಿರ್ಧಾರ ಕೈಗೊಳ್ಳುವುದಿಲ್ಲ. ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಈಗಿನ ಬಿಷಪ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬದಲಾಗಿ ಇದ್ದದ್ದನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.

ಬಂಗಾರಪೇಟೆ ಮೆಥೋಡಿಸ್ಟ್ ಸಂಸ್ಥೆಯ ಸದಸ್ಯೆ ಶಾಂತಮ್ಮ ಮಾತನಾಡಿ, ಎರಡು ವರ್ಷಗಳ ಹಿಂದೆ ಬಂಗಾರಪೇಟೆಯ ಟ್ಯಾಬ್ಲೆಟ್ ಕಾರ್ಖಾನೆಯ ಅರ್ಧ ಎಕರೆ ಜಾಗವನ್ನು ಅಕ್ರಮವಾಗಿ ಶಾಂತಕುಮಾರ್ ಮಾರಾಟ ಮಾಡಿದ್ದಾರೆಂದು ದಾಖಲೆಗಳನ್ನು ಪ್ರದರ್ಶಿಸಿದರು. ಧರ್ಮಾಽಕಾರಿಯಾಗಿರಬೇಕಿದ್ದ ಶಾಂತ್‌ಕುಮಾರ್ ಸರ್ವಾಽಕಾರಿ ಆಗಿದ್ದಾರೆ. ಚರ್ಚ್ ಆಸ್ತಿ ಉಳಿಸಬೇಕು. ಧರ್ಮದ ಬಗ್ಗೆ ಮಾತನಾಡಬೇಕು ಹೊರತು ಆಸ್ತಿ ಬಗ್ಗೆ ಮಾತಮಾಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೈಸ್ತ ಮುಖಂಡರಾದ ಜಾರ್ಜ್ ಮೈಕಲ್, ನಿರ್ಮಲ್ ಕುಮಾರ್,ಕ್ರೈಸ್ತ ಮುಖಂಡರು ಹಾಜರಿದ್ದರು.

 

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!