• Sat. Apr 27th, 2024

MLA ರೂಪಕಲಾ ಕಮಿಷನ್ ತೆಗೆದುಕೊಂಡಿಲ್ಲವೆಂದು ಪ್ರಮಾಣ ಮಾಡಲಿ:ಮೋಹನಕೃಷ್ಣ ಸವಾಲ್.

PLACE YOUR AD HERE AT LOWEST PRICE

 

ಕೆಜಿಫ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಕಮಿಷನ್  ತೆಗೆದುಕೊಂಡಿಲ್ಲವೆಂದು ಶಾಸಕಿ ರೂಪಕಲಾರವರು ಕೋಟಿಲಿಂಗ ದೇವಾಲಯದಲ್ಲಿ ಪ್ರಮಾಣ ಮಾಡಿ ಹೇಳಲಿ ಎಂದು ಸಮಾಜ ಸೇವಕ ವಿ.ಮೋಹನಕೃಷ್ಣ ಸವಾಲೆಸೆದರು.

ಅವರು ತಾಲ್ಲೂಕಿನ ಬೀರನಕುಪ್ಪ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ಅಭಿವೃದ್ಧಿ ಮರೆತಿರುವ ಶಾಸಕಿ ರೂಪಕಲಾ ಮತ್ತು ಅವರ ಬೆಂಬಲಿಗರು 500 ಕೋಟಿ ಅನುದಾನ ತಂದು ಕೆಲಸಗಳನ್ನು ಮಾಡಿರುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

500 ಕೋಟಿ ಅನುದಾನದಲ್ಲಿ ಕಮಿಷನ್ ಪಡೆದುಕೊಂಡಿಲ್ಲವೆಂದು ಶಾಸಕಿ ರೂಪಕಲಾರವರು ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಲಿ. ಆ ಮೂಲಕ ತಾವು ಸ್ವಚ್ಛ ಆಡಳಿತ ನೀಡುತ್ತಿರುವುದಾಗಿ ಸಾಬೀತು ಮಾಡಲಿ ಎಂದರು.

ಕ್ಷೇತ್ರದಲ್ಲಿನ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬೀರನಕುಪ್ಪ ಗ್ರಾಮದಲ್ಲಿ ಆಕಸ್ಮಿಕವಾಗಿ ಒಂದು ಘಟನೆ ನಡೆದು ಎರಡು ಜನಾಂಗದ ನಡುವೆ ಬಿರುಕು ಉಂಟಾಗಿತ್ತು. ಅದೂ ಸೇರಿದಂತೆ ಗಂಭೀರ ಸಮಸ್ಯೆಗಳನ್ನು ಶಾಸಕರು ಬಗೆಹರಿಸಿಲ್ಲ.

ನಾನು ಮತ್ತು ನನ್ನ ಜೊತೆಯಲ್ಲಿರುವವರು ಭೀರನಕುಪ್ಪದಲ್ಲಿ ಆದ ದುರ್ಘಟನೆಯ ಬಗ್ಗೆ ಗ್ರಾಮಸ್ಥರ ಬಳಿ ಚರ್ಚಿಸಿ ಇಲ್ಲಿನ ಜನರು ಅನ್ಯೋನ್ಯವಾಗಿ ನೆಮ್ಮದಿಯ ಮನಸ್ಥಾಪಗಳಿಲ್ಲದ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದ್ದೇವೆ ಎಂದರು.

ನನ್ನ ಸಮಾಜ ಸೇವೆಯ ಬಗ್ಗೆ ಶಾಸಕರು ಮತ್ತು ಅವರ ಬೆಂಕಲಿಗರು ಹಗುರವಾಗಿ ಮಾತನಾಡಿ ಮೋಹನಕೃಷ್ಣ 10 ಬಸ್ಸು ಬಿಟ್ಟಿದ್ದಾರೆಂದು ಹೇಳಿಕೊಂಡಿದ್ದಾರೆ. ನಾನು ನನ್ನ ಸ್ವಂತ ದುಡಿಕೆಯಿಂದ ಬಸ್ಸುಗಳನ್ನು ಬಿಟ್ಟು ಜನರನ್ನು ದೇವಾಲಯಗಳಿಗೆ ಕಳುಹಿಸಿದ್ದೇನೆ.

ನನ್ನ ಸಮಾಜ ಸೇವೆಯ ಬಗ್ಗೆ ಶಾಸಕರು ಮತ್ತು ಅವರ ಬೆಂನಬಲಿಗರು ಪದೇ ಪದೇ ಅವಹೇಳನ ಮಾಡುತ್ತಿದ್ದಾರೆ. ನಾನು ಮಾಡುತ್ತಿರುವ ಸಮಾಜ ಸೇವೆಗೆ ನನ್ನ ಸ್ವಂತ ದುಡಿಮೆಯ ಹಣ ಖರ್ಚು ಮಾಡುತ್ತಿದ್ದೇನೆ. ನನ್ನ ಸೇವೆಯನ್ನೇ ಶಾಸಕರು ಕಾಪಿ ಮಾಡುತ್ತಿದ್ದಾರೆ ಎಂದರು.

ನಾನು ಬಸ್ಸುಗಳನ್ನು ಬಿಡಲು ಆರಂಭಿಸುತ್ತಿದ್ದಂತೆ ಶಾಸಕರು ನನ್ನನ್ನು ಕಾಪಿ ಮಾಡಿ ಬಸ್ಸುಗಳನ್ನು ಬಿಟ್ಟರು. ಸ್ವಂತ ಹಣದಲ್ಲಿ ಬಸ್ಸುಗಳನ್ನು ಬಿಟ್ಟಿದ್ದೇನೆ, ಶಾಸಕರು ಕಮಿಷನ್ ಪಡೆಯದೆ ತಮ್ಮ ಸ್ವಂತ ಹಣದಿಂದ ಬಸ್ಸುಗಳನ್ನು ಬಿಟ್ಟಿರುವುದಾಗಿ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ನನ್ನ ಸೇವೆಯನ್ನು ಗುರುತಿಸಿ ಪ್ರತಿ ಗ್ರಾಮದಲ್ಲಿ ಜನ ಪ್ರತಿನಿತ್ಯ ನನ್ನ ಜೊತೆ ಸೇರಿಕೊಳ್ಳುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿ ಚುನಾವಣಾ ರಾಜಕಾರಣ ಮಾಡುತ್ತೇನೆ. ನನ್ನ ಮೇಲೆ ಜನ ನಂಬಿಕೆ ಇಟ್ಟಿರುವುದಕ್ಕೆ ನಾನು ಹೋದಲ್ಲೆಲ್ಲಾ ಜನ ಸೇರುವುದೇ ಉದಾಹರಣೆಯಾಗಿದೆ.

ನಾನು ಪಾರದರ್ಶಕವಾಗಿ ಮತ್ತು ನಿರ್ಭಯದ ವಾತಾವರಣದಲ್ಲಿ ಮುಂಬರುವ ಚುನಾವಣೆಯನ್ನು ನಡೆಲಸು ಬಯಸುತ್ತೇನೆ. ಶಾಸಕರು ಮತದಾರರಿಗೆ ಹಣ ನೀಡದೆ ಚುನಾವಣೆ ನಡೆಸಲಿ ಎಂದು ಹೇಳಿದ ಅವರು ಆಗ ಜನ ಏನೆಂದು ಶಾಸಕರಿಗೆ ತೋರಿಸಿಕೊಡುತ್ತಾರೆ ಎಂದರು.

ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ರವಿರೆಡ್ಡಿ ಮಾತನಾಡಿ, ಇತ್ತೀಚೆಗೆ ಕೆಪಿಸಿಸಿ ಸದಸ್ಯ ದುರ್ಗಾ ಪ್ರಸಾದ್ ಮೋಹನಕೃಷ್ಣರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಶಾಸಕರು ಕೋವಿಡ್ ವೇಳೆ ಜನ ಸೇವೆ ಮಾಡಿರುವ ಬಗ್ಗೆ ಸುಳ್ಳು ಮಾಹಿತಿಯನ್ನು ಜನಕ್ಕೆ ನೀಡಿದ್ದಾರೆ.

ದುರ್ಗಾ ಪ್ರಸಾದ್ ರಿಗೆ ಸಮಾಜ ಸೇವಕ ಮೋಹನಕೃಷ್ಣರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಮೋಹನಕೃಷ್ಣರವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಸಮಾಜ ಸೇವೆ ಮಾಡುತ್ತಿದ್ದಾರೆಯೆ ಹೊರತು ಯಾವುದೇ ಲಂಚದ ಹಣದಿಂದ ಯಾವುದೇ ಸೇವೆಯನ್ನು ಮಾಡುತ್ತಿಲ್ಲ ಎಂದರು.

ಶಾಸಕರು ಅಭಿವೃದ್ಧಿ ಅನುದಾನಗಳಲ್ಲಿ 10,20,30 ಪರ್ಸಂಟೇಜ್ ಲೆಕ್ಕದಲ್ಲಿ ಲಂಚ ಪಡೆದಿರುವ ಬಗ್ಗೆ ನಮ್ಮ ಬಳಿ ದಾಖಲೆಯಿದೆ. ಅವರ ಜೊತೆಯಲ್ಲಿರುವವರೆ ಒಬ್ಬರು ಈ ತನಕ 80 ಲಕ್ಷ ಲಂಚ ನೀಡಿದ್ದಾರೆ ಎಂಬ ಬಗ್ಗೆ ನಮ್ಮ ಬಳಿ ಮಾಹಿತಿ ಇದೆ ಎಂದರು.

ಕೆಜಿಎಫ್ ಕ್ಷೇತ್ರಕ್ಕೆ ಬಂದ ಅನುದಾನವನ್ನು ಮುಳಬಾಗಿಲು ಮತ್ತು ಕೋಲಾರಕ್ಕೆ ಮಾರಿಕೊಂಡಿರುವ ಬಗ್ಗೆಯೂ ನಮ್ಮ ಬಳಿ ಮಾಹಿತಿ ಇದ್ದು, ಅನುದಾನಗಳಲ್ಲಿ ಎಲ್ಲೆಲ್ಲಿ ಎಷ್ಟಷ್ಟು ಲಂಚ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಟ್ಟುಕೊಂಡೇ ಆರೋಪ ಮಾಡುತ್ತಿದ್ದೇವೆ ಎಂದರು.

ಬಿಜೆಪಿಯಲ್ಲಿ ಬಿರುಕಿದೆ ಎಂದು ದುರ್ಗಾ ಪ್ರಸಾದ್ ಮಾತನಾಡಿದ್ದಾರೆ ಎಂದ ಅವರು ನಮ್ಮಲ್ಲಿನ ಗೊಂದಲಗಳನ್ನು ಕುಳಿತು ಮಾತನಾಡಿಕೊಳ್ಳುತ್ತೇವೆ. ನಿಮ್ಮ ಹಾಗೆ ಎಂ.ಎಲ್.ಎ ಅಭ್ಯರ್ಥಿಗಳಾಗಿದ್ದ ಶ್ರೀನಿವಾಸ್, ಶಂಕರ್, ಜಯಪಾಲ್ ರನ್ನು ಸೋಲಿಸಿದ ಹಾಗೆ ಪಕ್ಷ ದ್ರೋಹ ಮಾಡಲ್ಲಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಜಗದಬಿರಾಮ್, ರಮೇಶ್, ಜಗನ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!